Job Description: * ಪ್ರಸ್ತುತ ಶೂನ್ಯ ಬೇಸಾಯವು ಇದೊಂದು ಕೃಷಿ ಪದ್ಧತಿಯಾಗಿದೆ. ಹಾಗೂ ಇದು ಶಾಶ್ವತ ಮಣ್ಣಿನ ಹೊದಿಕೆಯನ್ನು ನಿರ್ವಹಿಸುತ್ತದೆ, ಮತ್ತು ಮಣ್ಣಿನ ನೈಸರ್ಗಿಕ ಜೈವಿಕ ಪ್ರಕ್ರಿಯೆಗಳನ್ನು ಹೆಚ್ಚಿಸುತ್ತದೆ, ಹಾಗೂ ಮಣ್ಣಿನ ಪೋಷಣೆಯನ್ನು ಮಾಡುತ್ತದೆ. * ಶೂನ್ಯ ಕೃಷಿ ತಂತ್ರಜ್ಞಾನ: ಬೇಸಾಯವು ಭೂಮಿಯನ್ನು ಸಿದ್ಧಪಡಿಸುವುದು. ಭೂಮಿಯನ್ನು ಉಳುಮೆ ಮಾಡಿ ಮಣ್ಣಿನ ಕಣಗಳನ್ನು ಬೆರೆಸುವವುದು. ಕಳೆ ಮತ್ತು ಬೆಳೆಗಳ ಅವಶೇಷಗಳನ್ನು ಕೊಲ್ಲಲು ಮತ್ತು ಮಣ್ಣನ್ನು ಗಾಳಿ ಮಾಡಲು ಈ ಶೂನ್ಯ ಕೃಷಿ ತಂತ್ರಜ್ಞಾನ ಮಾಡಲಾಗುತ್ತದೆ. ಆದರೆ ಉಳುಮೆ ಮಾಡುವದರಿಂದ ಮಣ್ಣಿನ ನೈಸರ್ಗಿಕ ರಚನೆಯನ್ನು ನಾಶವಾಗುತ್ತದೆ. ಸಾಮಾನ್ಯವಾಗಿ ಟ್ರಾಕ್ಟರ್‌ಗಳ ಸಹಾಯದಿಂದ ಉಳುಮೆ ಮಾಡುವದರಿಂದ ಮಣ್ಣು ತೇವಾಂಶ ಉಳಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಆದರೆ ಶೂನ್ಯ ಬೇಸಾಯವು ಉಳುಮೆ ಪ್ರಕ್ರಿಯೆಯನ್ನು ಬಿಡುತ್ತದೆ, ಈ ಶೂನ್ಯ ಕೃಷಿ ತಂತ್ರಜ್ಞಾನ ಮೂಲಕ ಭೂಮಿಯನ್ನು ಸಿದ್ಧಪಡಿಸದೆಯೇ ಬೆಳೆ ಬಿತ್ತನೆ ಮಾಡಲಾಗುತ್ತದೆ, ಹಾಗೂ ಬೀಜಗಳನ್ನು ಮಣ್ಣಿನಲ್ಲಿ ಹೊಳಲಾಗುತ್ತದೆ. * ಶೂನ್ಯ ಕಷಿ ತಂತ್ರಜ್ಞಾನದ ಪ್ರಯೋಜನಗಳು : ಇದು ಬೆಳೆ ಅವಧಿಯನ್ನು ಕಡಿಮೆ ಮಾಡುತ್ತದೆ, ಮತ್ತು ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡುವದರ ಜೊತೆಗೆ ಭೂಮಿ ತಯಾರಿಕೆಯ ಒಳಹರಿವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಇದರಿಂದಾಗಿ ಭೂಮಿಯು ಮಣ್ಣಿನಲ್ಲಿ ಉಳಿದಿಕೊಂಡಿರುವ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಹಾಗೂ ಬಾಹ್ಯ ನೀರಿನ ಅಗತ್ಯವನ್ನು ಕಡಿಮೆ ಮಾಡುತ್ತದೆ ಒಟ್ಟಾರೆಯಾಗಿ ಭೂಮಿಯ ಇಳುವರಿ ಹೆಚ್ಚಿಸುತ್ತದೆ. * ಭಾರತದಲ್ಲಿ ಶೂನ್ಯ ಬೇಸಾಯ: ಪ್ರಸ್ತುತ ಇಂಡೋ - ಗಂಗಾ ಬಯಲು ಪ್ರದೇಶಗಳಲ್ಲಿ ಈ ಶೂನ್ಯ ಬೇಸಾಯವನ್ನು ಪದ್ಧತಿಯನ್ನು ಅನುಸರಿಸಲಾಗುತ್ತದೆ. ಉದಾಹರೆಣೆ ಈ ಪ್ರದೇಶದಲ್ಲಿನ ಜನರು ಭತ್ತ ಕಟಾವು ಮಾಡಿದ ತಕ್ಷಣ ಗೋಧಿ ನಾಟಿ ಮಾಡುತ್ತಾರೆ. ಶೂನ್ಯ ಕೃಷಿ ತಂತ್ರಜ್ಞಾನವನ್ನು ಮುಖ್ಯವಾಗಿ ಗೋಧಿ ಬೆಳೆಗೆ ಮುಖ್ಯವಾಗಿ ಭಾರತದಲ್ಲಿ ಅಕ್ಕಿ-ಗೋಧಿ ಬೆಳೆ ಉತ್ಪಾದನಾ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಉತ್ತರ-ಪಶ್ಚಿಮ ರಾಜ್ಯಗಳಲ್ಲಿ ಶೂನ್ಯ ಬೇಸಾಯ ತಂತ್ರಜ್ಞಾನದ ಹರಡುವಿಕೆ ಹೆಚ್ಚಾಗುತ್ತಿದೆ. * ಬೇಸಾಯದ ಇತರ ವಿಧಗಳು: - ಉಳುಮೆಯ ಮಟ್ಟ ಕಡಿಮೆಯಾದರೆ ಅದನ್ನು ಸಂರಕ್ಷಣೆ ಬೇಸಾಯ ಎನ್ನುತ್ತಾರೆ. - ಎರಡು ವರ್ಷಗಳಿಗೊಮ್ಮೆ ಉಳುಮೆಯನ್ನು ಮಾಡಿದರೆ ಅದನ್ನು ತಿರುಗುವ ಬೇಸಾಯ ಎನ್ನುತ್ತಾರೆ.