Job Description: * ಪ್ರಸ್ತುತ ಚೀನಾ ದೇಶವು ಪ್ಯಾಂಗೊಂಗ್ ಸರೋವರದ ಉತ್ತರ ಹಾಗೂ ದಕ್ಷಿಣ ಈ ಎರಡು ದಂಡೆಗಳಿಗೆ ಸಂಪರ್ಕ ಕಲ್ಪಿಸಲು ಸೇತುವೆಯನ್ನು ನಿರ್ಮಿಸುತ್ತಿದೆ ಎನ್ನಲಾಗಿದೆ. ಹಾಗೂ ಇದು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC)ನ ಭಾರತದ ಹಕ್ಕುಗಳಿಂದ ಕೂಡಿರುವ 25-30 ಕಿಮೀ ದೂರದಲ್ಲಿದೆ. * ಈ ಹಿಂದೆ 2020 ರ ಆಗಸ್ಟ್ ನಲ್ಲಿ ದಕ್ಷಿಣದ ದಂಡೆಯ ಕೈಲಾಶ್ ಶ್ರೇಣಿಯಲ್ಲಿ ಭಾರತವು ಪ್ರಮುಖ ಎತ್ತರವನ್ನು ಆಕ್ರಮಿಸಿಕೊಂಡಿತ್ತು. ಆದ್ರೆ ಚೀನಾ ಇದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿತು, ಹಾಗೂ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಎರಡು ದೇಶಗಳು 'ಪರಸ್ಪರ ಹಿಂತೆಗೆದುಕೊಳ್ಳುವ ಯೋಜನೆ' ಅನುಸರಿಸಿದವು ಈ ಹಿನ್ನಲೆಯಿಂದಾಗಿ ಭಾರತವು ಈ ಎತ್ತರದ ಪ್ರದೇಶದಿಂದ ಹಿಂದೆ ಸರಿಯಿತು. * ಚೀನಾ ಹಾಗೂ ಭಾರತದ ನಡುವೆ ಹೊಸ ಗಡಿ ಕಾನೂನು 2021 ರ ಜನವರಿ. 01 ರಂದು ಜಾರಿಗೆ ತಂದಿತು. ಈ ಕಾನೂನಿನ ಅಡಿಯಲ್ಲಿ ಗಡಿ ರಕ್ಷಣೆಯನ್ನು ಬಲಪಡಿಸಲು, ಹಾಗೂ ಮೂಲಸೌಕರ್ಯ ಒದಗಿಸಲು ಮತ್ತು ಹಳ್ಳಿಗಳ ಅಭಿವೃದ್ಧಿಗೆ ಕರೆ ನೀಡುತ್ತದೆ ಎಂದು ತಿಳಿಸಿದ್ದವು. ಇತ್ತೀಚೆಗೆ ಚೀನಾ ತನ್ನ ನಕ್ಷೆಯಲ್ಲಿ ಅರುಣಾಚಲ ಪ್ರದೇಶದ 15 ಸ್ಥಳಗಳನ್ನು ಮರುನಾಮಕರಣ ಮಾಡಿದೆ. * LAC ನಲ್ಲಿ ಚೀನಾ ನಿಯೋಜನೆ ಮತ್ತು ನಿರ್ಮಾಣದ ಕಾರಣಗಳು: - ಭಾರತವು ತನ್ನ ಗಡಿ ಮೂಲಸೌಕರ್ಯವನ್ನು ಬಲಪಡಿಸುವ ನಿರ್ಧಾರವನ್ನು ಹೊಂದಿದೆ. - US ಕಡೆಗೆ ಭಾರತದ ವಾಲುವಿಕೆ - ಚೀನಾ ದೇಶವು ಗಿಲ್ಗಿಟ್-ಬಾಲ್ಟಿಸ್ತಾನ್ ಬಗೆಗಿನ ಪ್ರತಿಪಾದನೆಗಳನ್ನು ಪರಿಗಣಿಸುತ್ತದೆ, ಹಾಗೂ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಮೇಲಿನ ದಾಳಿಯನ್ನು ಪರಿಗಣಿಸಲಿದೆ. - ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಬೆಳವಣಿಗೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ.