Job Description: * ಪ್ರಸ್ತುತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ಅಧ್ಯಕ್ಷ ಕೆ. ಶಿವನ್ ಅವರು ಇತ್ತೀಚೆಗೆ 2022 ರ ಯೋಜನೆಗಳನ್ನು ಘೋಷಿಸಿದ್ದಾರೆ. * 2022 ಕ್ಕೆ ಯೋಜಿಸಲಾದ ಯೋಜನೆಗಳು: - ಭೂ ವೀಕ್ಷಣಾ ಉಪಗ್ರಹಗಳು 4 ಮತ್ತು 6 ನ್ನು PSLV ನಲ್ಲಿ ಉಡಾವಣೆ ಮಾಡಲಾಗುವುದು. - 2022 ರಲ್ಲಿ ಇಸ್ರೋ ಆದಿತ್ಯ L1, ಚಂದ್ರಯಾನ 3, XpoSat, ತಂತ್ರಜ್ಞಾನ ಪ್ರದರ್ಶನ ಕಾರ್ಯಾಚರಣೆಗಳು ಮತ್ತು IRNSS'ನ್ನು ಆರಂಭಿಸಲಾಗುತ್ತದೆ. - ಇತರ 2022 ಯೋಜನೆಗಳು ದಿಶಾ, ಶುಕ್ರ ಮಿಷನ್, ISROCNES, TRISHNA * 2021 ರಲ್ಲಿ ಪೂರ್ಣಗೊಳಿಸಲಾಗಿರುವ ಕಾರ್ಯಗಳು: - NISAR ಮಿಷನ್'ನ S-ಬ್ಯಾಂಡ್ SAR ಪೇಲೋಡ್ ನ್ನು NASA ಗೆ ಕಳುಹಿಸಲಾಗಿದೆ. - ಆದಿತ್ಯ L1 ಮಿಷನ್ ನ ಹಾರ್ಡ್‌ವೇರ್ ಲೂಪ್ ಪರೀಕ್ಷೆ ಪೂರ್ಣಗೊಳಿಸಲಾಗಿದೆ. - GSLV F-10 ಮಿಷನ್ ವಿಫಲವಾಗಿದೆ, ಕಾರಣ ಕ್ರಯೋಜೆನಿಕ್ ಹಂತದಲ್ಲಿ ಸಂಭವಿಸಿದ ಸಮಸ್ಯೆಗಳಿಂದ. - ಚಂದ್ರಯಾನ '3' ರ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗಿದೆ. - ಗಗನಯಾನ್ ಕ್ರಯೋಜೆನಿಕ್ ಹಂತ, L-IIO ವಿಕಾಸ್ ಎಂಜಿನ್, ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ ಹಾಗೂ ಕ್ರೂ ಎಸ್ಕೇಪ್ ಸಿಸ್ಟಮ್ ಮೋಟಾರ್‌ಗಳ ಪರೀಕ್ಷೆಗಳು ಪ್ರಗತಿಯಲ್ಲಿವೆ, ಹಾಗೂ ಗಗನಯಾತ್ರಿಗಳು ಬಾಹ್ಯಾಕಾಶ ಹಾರಾಟದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ, ಇಅದರ ಜೊತೆಗೆ ಪ್ಯಾರಾಚೂಟ್ ಡ್ರಾಪ್ ಪರೀಕ್ಷೆಯನ್ನು ಕೂಡ ಆರಂಭಿಸಲಾಗಿದೆ. * ತ್ರಿಷ್ನಾ(TRISHNA) : ಈ ಉಪಗ್ರಹವನ್ನು ಭಾರತ ಹಾಗೂ ಫ್ರಾನ್ಸ್ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಉಪಗ್ರಹವು ಭೂಮಿಯ ಮೇಲ್ಮೈ ತಾಪಮಾನವನ್ನು ನಕ್ಷೆ ಮಾಡುವ ಗುರಿಯನ್ನು ಹೊಂದಿದೆ, ಹಾಗೂ ತ್ರಿಷ್ನಾ(TRISHNA) ನೀರಿನ ಬಳಕೆಯ ಮೇಲ್ವಿಚಾರಣೆ ಮಾಡಲಿದೆ. SARAL ಮಿಷನ್ ARGOS'ನ್ನು ಬಳಸಿ ಬಾಹ್ಯಾಕಾಶದಿಂದ ಸಾಗರವನ್ನು ಅಧ್ಯಯನ ಮಾಡುತ್ತದೆ. ARGOS ಇದೊಂದು ಡೇಟಾ ಸಂಗ್ರಹಣಾ ವ್ಯವಸ್ಥೆಯಾಗಿದೆ. * ನಿಸಾರ್ ಮಿಷನ್ : ಇದೊಂದು ನಾಸಾ ಹಾಗೂ ಇಸ್ರೋ ಜಂಟಿ ಮಿಷನ್ ಆಗಿದೆ. ನಿಸಾರ್ ಎಂದರೆ NASA - ISRO - SAR ಎಂದರ್ಥ, SAR ಸಿಂಥೆಟಿಕ್ ಅಪರ್ಚರ್ ರಾಡಾರ್ ಆಗಿದೆ. NISAR ನಾಸಾ ವಿನ್ಯಾಸಗೊಳಿಸಿರುವ ಅತಿದೊಡ್ಡ ಪ್ರತಿಫಲಕ ಆಂಟೆನಾವನ್ನು ಹೊತ್ತು ಸಾಗುತ್ತದೆ. ಈ NISAR ಮಿಷನ್‌'ನ '3' ವರ್ಷಗಳವರೆಗೆ ಪ್ರತಿ 12 ದಿನಕೊಮ್ಮೆ ಭೂಮಿಯನ್ನು ಸ್ಕ್ಯಾನ್ ಮಾಡಿ ಸಮುದ್ರದ ಮಂಜುಗಡ್ಡೆ ಹಾಗೂ ಐಸ್ ಶೀಟ್‌ಗಳ ಚಿತ್ರಗಳನ್ನು ರವಾನಿಸುತ್ತದೆ. * ದಿಶಾ : ದಿಶಾ ಇದು ಅವಳಿ ಉಪಗ್ರಹ ವ್ಯವಸ್ಥೆಯಾಗಿದೆ. ಈ ಉಪಗ್ರಹವು ಭೂಮಿಯ ವಾಯುವಿಜ್ಞಾನವನ್ನು ಅಧ್ಯಯನ ಮಾಡುತ್ತದೆ.