Job Description: * ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ದೇಶಗಳು ಸತತವಾಗಿ 30 ವರ್ಷಗಳಿಂದ ತಮ್ಮ ದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳು, ಹಾಗೂ ಪರಮಾಣು ಇಂಧನ ಬಗ್ಗೆ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ. * ಇದೀಗ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಪರಮಾಣು ಮಾಹಿತಿ ಪರಸ್ಪರ ವಿನಿಮಯ ಮಾಡಿಕೊಳ್ಳುಲಾಗುತ್ತದೆ, ಹಾಗೂ ಇದು ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ಈ ಎರಡು ದೇಶಗಳು ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಪರಸ್ಪರ ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. * ಈ ಹಿಂದೆ 1991ರಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಪ್ರತಿ ವರ್ಷವೂ ಜನೇವರಿ. 01 ರಂದು ತಮ್ಮ ತಮ್ಮ ರಾಷ್ಟ್ರಗಳ ಪರಮಾಣು ಕೇಂದ್ರಗಳು, ಹಾಗೂ ಅದರ ಸೌಲಭ್ಯಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಈ ಎರಡು ದೇಶಗಳು ಒಪ್ಪಂದ ಮಾಡಿಕೊಂಡಿವೆ. * ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳು ಏಕಕಾಲದಲ್ಲಿ ರಾಜತಾಂತ್ರಿಕ ಮಾರ್ಗಗಳ ಮೂಲಕ ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಪರಮಾಣು ಸ್ಥಾಪನೆಗಳು ಮತ್ತು ಸೌಲಭ್ಯಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡವು. ಎರಡು ದೇಶಗಳ ಪರಮಾಣು ಮಾಹಿತಿ ವಿನಿಮಯ ಮಾಡಿಕೊಳ್ಳಲು ಈ ಹಿಂದೆ 1988 ರ ಡಿಸೆಂಬರ್. 31 ರಂದು ಸಹಿ ಹಾಕಲಾಗಿತ್ತು, ಆದರೆ ಈ ಒಪ್ಪಂದವು 1991 ರ ಜನೇವರಿ. 27 ರಂದು ಜಾರಿಗೆ ಬಂದಿದೆ, ಇದೀಗ ಈ ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಜನವರಿ 01 ರಂದು ಒಪ್ಪಂದದ ಅಡಿಯಲ್ಲಿ ಪರಮಾಣು ಸ್ಥಾಪನೆಗಳು ಮತ್ತು ಸೌಲಭ್ಯಗಳ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ. * ಉಭಯ ದೇಶಗಳ ನಡುವೆ ಪರಮಾಣು ಮಾಹಿತಿ ವಿನಿಮಯವು ಮೊದಲ ಬಾರಿ 1992 ರ ಜನೇವರಿ. 01 ರಂದು ನಡೆದಿದೆ, ಇದೀಗ ಈ ವರ್ಷ ನಡೆದ ಪರಮಾಣು ಮಾಹಿತಿ ವಿನಿಮಯವು ಸತತ 30 ನೇ ವಿನಿಮಯವಾಗಿದೆ.