Job Description: * ಪ್ರಸ್ತುತ ತೆಲಂಗಾಣ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಇನ್ನು ಮುಂದೆ 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವದು ತೆಲಂಗಾಣ ಸಾರಿಗೆ ಇಲಾಖೆಯು ಘೋಷಿಸಿದೆ. * ಇತ್ತೀಚಿಗೆ TSRTC ಕೇಂದ್ರ ಕಚೇರಿಯ ಬಸ್‌ ಭವನದಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮವು ಜರುಗಿತು ಆ ಸಂಧರ್ಭದಲ್ಲಿ TSRTC ಅಧ್ಯಕ್ಷ ಬಾಜಿರೆಡ್ಡಿ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. * ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (TSRTC): ಭಾರತದ ತೆಲಂಗಾಣ ರಾಜ್ಯಕ್ಕೆ ಬಸ್ ಸಾರಿಗೆ ಸೇವೆಗಳನ್ನು ಒದಗಿಸುವ ಸರ್ಕಾರಿ ಸ್ವಾಮ್ಯದ ನಿಗಮವಾಗಿದೆ. ಈ ನಿಗಮವನ್ನು ಈ ಹಿಂದೆ 2014 ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ವಿಭಜಿಸುವ ಮೂಲಕ ಇದನ್ನು ರಚಿಸಲಾಯಿತು. * ಈ ತೆಲಂಗಾಣ ರಾಜ್ಯ ರಸ್ತೆ ಸಾರಿಗೆಯು ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಒಡಿಶಾ ಮತ್ತು ಛತ್ತೀಸ್‌ಗಢದ, ಇನ್ನು ಹೀಗೆ ಭಾರತದ ಅನೇಕ ಮೆಟ್ರೋ ಪಟ್ಟಣಗಳಿಗೆ ಸಂಪರ್ಕ ನೀಡಲಿದೆ. ಈ TSRTC'ಯು ಪ್ರತಿದಿನ ಅಂದಾಜು 1 ಕೋಟಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ, ಈ TSRTC'ಯು '3' ವಲಯಗಳನ್ನು ಹೊಂದಿದೆ ಅವುಗಳು: ಹೈದರಾಬಾದ್ ಗ್ರಾಮಾಂತರ (HR), ಗ್ರೇಟರ್ ಹೈದರಾಬಾದ್ (GHz), ಮತ್ತು ಕರೀಂನಗರ (KRMR). ಹಾಗೂ 97 ಡಿಪೋಗಳ ಮೂಲಕ ಸಾರ್ವಜನಿಕರಿಗೆ ಸೇವೆಯನ್ನು ನೀಡುತ್ತಿವೆ. * ಈ ಹಿಂದೆ 1932 ರಲ್ಲಿ ತೆಲಂಗಾಣ ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮವನ್ನು ಮೊದಲ ಬಾರಿಗೆ 27 ಬಸ್‌ಗಳು ಹಾಗೂ 166 ಉದ್ಯೋಗಿಗಳಿಂದ ಹಿಂದಿನ ಹೈದರಾಬಾದ್ ರಾಜ್ಯವು ನಿಜಾಮ್ ರಾಜ್ಯ ರೈಲು ಮತ್ತು ರಸ್ತೆ ಸಾರಿಗೆ ಇಲಾಖೆ (NSRRTD)ಯನ್ನು ಸ್ಥಾಪಿಸಿದೆ. ಹಾಗೂ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (APSRTC) 1958 ರ ಜನೇವರಿ. 11 ರಂದು ರಸ್ತೆ ಸಾರಿಗೆ ನಿಗಮಗಳ ಕಾಯಿದೆ 1950 ರ ಅಡಿಯಲ್ಲಿ ಸ್ಥಾಪಿಸಲಾಗಿದೆ. ಆಂಧ್ರ ಪ್ರದೇಶ ರಾಜ್ಯವನ್ನು ವಿಭಜಿಸಿ ತೆಲಂಗಾಣ ರಚಿಸಿದಾಗ TSRTC'ಯ 2015 ರ ಜೂನ್. 03 ರಿಂದ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಲು ಆರಂಬಿಸಿತು, ನಂತರ ತೆಲಂಗಾಣ ಸರ್ಕಾರವು 2016 ರಂದು ರಸ್ತೆ ಸಾರಿಗೆ ನಿಗಮ ಕಾಯಿದೆ, 1950 ರ ಅಡಿಯಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (TSRTC) ಸ್ಥಾಪಿಸಿದೆ.