Job Description: * ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌'ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ, ಇದೀಗ ಇವರು ಸುಮಾರು 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿದಾಯವನ್ನು ತಿಳಿಸಿದ್ದಾರೆ. ಮೊಹಮ್ಮದ್ ಹಫೀಜ್ ಅವರು ಇತ್ತೀಚಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌(UAE)ನಲ್ಲಿ ಈ ಹಿಂದಿನ ಅಕ್ಟೋಬರ್‌-ನವೆಂಬರ್‌ನಲ್ಲಿ ಜರುಗಿದ ಟ್ವೆಂಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ್ದರು. * ಹಫೀಜ್ ಅವರು ಈ ಹಿಂದೆ 2018ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ತಿಳಿಸಿದ್ದರು, ಇವರು ಒಟ್ಟಾರೆ 55 ಟೆಸ್ಟ್ ಪಂದ್ಯಗಳು, 218 ಏಕದಿನ ಹಾಗೂ 119 ಟ್ವೆಂಟಿ20 ಪಂದ್ಯಗಳಲ್ಲಿ ಆಟವಾಡಿದ್ದಾರೆ. ಇವರು ಆಫ್‌ ಬ್ರೇಕ್ ಬೌಲರ್‌ ಆಗಿದ್ದರು, ಹಾಗೂ ಇವರು 29 ಟ್ವೆಂಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದರು ಅದರಲ್ಲಿ 17 ಟ್ವೆಂಟಿ20 ಪಂದ್ಯಗಳಲ್ಲಿ ಜಯ ಗಳಿಸಿದ್ದಾರೆ. 01 ಟೆಸ್ಟ್ ಹಾಗೂ 02 ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಇವರು '4' ಬಾರಿ ವಿವಾದಕ್ಕೆ ಸಿಲುಕಿದ್ದರು, ಈ ಹಿನ್ನಲೆಯಿಂದಾಗಿ 2015ರ ಜುಲೈ'ನಲ್ಲಿ ಇವರ ಮೇಲೆ ನಿಷೇಧವನ್ನು ಹೇರಲಾಗಿತ್ತು. * ಮೊಹಮ್ಮದ್ ಹಫೀಜ್: 1980 ರ ಅಕ್ಟೋಬರ್. 17 ರಂದು ಜನಿಸಿದ್ದಾರೆ, ಇವರೊಬ್ಬ ಮಾಜಿ ಪಾಕಿಸ್ತಾನಿ ಅಂತಾರಾಷ್ಟ್ರೀಯ ಕ್ರಿಕೆಟಿಗ. ಇವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ 4ನೇ ಅಂತರರಾಷ್ಟ್ರೀಯ ಆಟಗಾರ ಹಾಗೂ ಟ್ವೆಂಟಿ 20 ಪಂದ್ಯಾವಳಿಗೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಆಟಗಾರರಾಗಿದ್ದಾರೆ. ಹಾಗೂ ಇವರನ್ನು 'ಪ್ರೊಫೆಸರ್' ಎಂದು ಕರೆಯುತ್ತಾರೆ. * ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 2018 ರ ಆಗಸ್ಟ್'ನಲ್ಲಿ 2018-19 ಋತುವಿಗಾಗಿ ಕೇಂದ್ರ ಗುತ್ತಿಗೆಯನ್ನು ಪಡೆದ 33 ಆಟಗಾರರ ಪೈಕಿ ಇವರು ಕೂಡ ಒಬ್ಬರು. ಇವರು 2022 ರ ಜನೇವರಿ. 03 ರಂದು ಅಂತರಾಷ್ಟ್ರೀಯ ಕ್ರಿಕೆಟ್‌'ಗೆ ನಿವೃತ್ತಿ ಘೋಷಿಸಿದ್ದಾರೆ.