Job Description: * ಪ್ರಸ್ತುತ ಕರ್ನಾಟಕ ಫುಟ್‌ಬಾಲ್‌ ತಂಡದ ಆಟಗಾರ ಮೊಹಮ್ಮದ್‌ ಗೌಸ್ ಅವರು ತಮ್ಮ 88ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೊಹಮ್ಮದ್‌ ಗೌಸ್ ಅವರು ರಾಜ್ಯ ಫುಟ್‌ಬಾಲ್‌ ತಂಡವನ್ನು ಸಂತೋಷ್ ಟ್ರೋಫಿ ಸೇರಿ ಹಲವು ಪ್ರಮುಖ ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದರು. * ಮೊಹಮ್ಮದ್‌ ಗೌಸ್ ಅವರು ಬೆಂಗಳೂರಿನ ಮುನಿರೆಡ್ಡಿಪಾಳ್ಯದ ಜೆ.ಸಿ.ನಗರ ನಿವಾಸಿಯಾಗಿದ್ದರು, ಇವರು ಪುಟ್ಬಾಲ್ ತಂಡದಲ್ಲಿ ರಕ್ಷಣಾ ವಿಭಾಗದ ಆಟಗಾರರಾಗಿ ಮಿಂಚಿದ್ದರು. ಸ್ಥಳೀಯರು ಹಾಗೂ ಆತ್ಮೀಯರು ಇವರನ್ನು 'ನೂರ್' ಎಂದು ಕರೆಯುತ್ತಿದ್ದರು. ಮೊಹಮ್ಮದ್‌ ಗೌಸ್ ಅವರು ಈ ಹಿಂದೆ 1965ರಲ್ಲಿ ಕೇರಳದ ಕೊಲ್ಲಂನಲ್ಲಿ ಹಾಗೂ 1966ರಲ್ಲಿ ಹೈದರಾಬಾದ್‌ನಲ್ಲಿ ಜರುಗಿದ ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಪುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. * ಮೊಹಮ್ಮದ್‌ ಗೌಸ್ ಅವರು ಕೃಷ್ಣಾಜಿ ರಾವ್‌ ಆಯಂಡ್‌ ಅಮ್ಜದ್‌ ಖಾನ್‌-ವಿಠ್ಠರ ರಾವ್‌ ಟೂರ್ನಿ, ಡಿಸಿಎಂ, ಡುರಾಂಡ್ ಕಪ್‌, ರೋವರ್ಸ್ ಕಪ್‌, ಐಎಫ್‌ಎ ಶೀಲ್ಡ್‌, ಹೈದರಾಬಾದ್ ನಿಜಾಮ್ ಗೋಲ್ಡ್ ಕಪ್‌, ಟ್ರಿಚಿ ಕಪ್‌ ಹೀಗೆ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಹಾಗೂ ಇವರು 1965ರಿಂದ 1980ರ ಮಧ್ಯೇ ಸಿಐಎಲ್‌ ತಂಡದಲ್ಲಿ ಆಟವನ್ನು ಆಡುತ್ತಿದ್ದರು. ಗೌಸ್ ಪ್ರತಿನಿಧಿಸಿದ್ದ ಸಿಐಎಲ್‌ ತಂಡವು ಈ ಹಿಂದೆ 1973ರಲ್ಲಿ ಸ್ಟಾಫರ್ಡ್ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಜಯಿಸಿತ್ತು, ಹಾಗೂ 4 ಬಾರಿ ಬಿಡಿಎಫ್‌ಎ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.