Job Description: * ಪ್ರಸ್ತುತ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಕ್ಷರ ಕ್ರಾಂತಿಯನ್ನು ಆರಂಭಿಸಿದ ಭಾರತದ ಮೊಟ್ಟಮೊದಲ ಅಕ್ಷರಮಾತೆ ಸಾವಿತ್ರಿಬಾಯಿ ಪುಲೆ ಅವರು, ಇದೀಗ 191ನೇ ಜನ್ಮದಿನಾಚರಣೆ ಆಚರಿಸಲಾಯಿತು. * ಈ ಹಿಂದೆ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರ ಹೋಗುವುದೇ ಕಷ್ಟ,ಹಾಗೂ ಅದು ಅಪರಾಧವಾಗಿತ್ತು, ಆ ಸಮಯದಲ್ಲಿ ಸಾವಿತ್ರಬಾಯಿ ಪುಲೆ ನಡೆದ ದಾರಿಯೆಲ್ಲ ಕಲ್ಲು, ಮುಳ್ಳಿನ ಹಾದಿಯಾಗಿತ್ತು, ಇದೆಲ್ಲದರ ನಡುವೆ ಇವರು ದಿಟ್ಟತನದಿಂದ ಹೆಣ್ಣುಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದ ಮಾಹಾಮಾತೆಯಾಗಿದ್ದಾರೆ. * ಸಾವಿತ್ರಿಬಾಯಿ ಫುಲೆ ಅವರು 1831 ರ ಜನೇವರಿ 03 ರಿಂದ(ಜನನ) 1897 ರ ಮಾರ್ಚ್.10(ಮರಣ) ಈ ವರ್ಷಗಳ ನಡುವೆ ತಮ್ಮ ಜೀವನವನ್ನು ನಡೆಸಿದ್ದರು, ಇವರೊಬ್ಬರು ಭಾರತೀಯ ಸಮಾಜ ಸುಧಾರಕಿ, ಶಿಕ್ಷಣತಜ್ಞ, ಹಾಗೂ ಮಹಾರಾಷ್ಟ್ರದ ಕವಿಯಾಗಿದ್ದರು. ಅಷ್ಟೇ ಅಲ್ಲದೇ ಇವರನ್ನು ಬ್ರಿಟಿಷರು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಿದ್ದರು. ಇವರನ್ನು ಭಾರತೀಯ ಸ್ತ್ರೀವಾದದ ತಾಯಿ ಎಂದು ಗುರುತಿಸಲಾಗಿದೆ. * ಈ ಹಿಂದೆ 1848 ರಲ್ಲಿ ಸಾವಿತ್ರಿಬಾಯಿ ಹಾಗೂ ಅವರ ಪತಿ ಮಹಾರಾಷ್ಟ್ರದ ಪುಣೆಯಲ್ಲಿನ ಭಿಡೆ ವಾಡಾದಲ್ಲಿ ಮೊದಲ ಭಾರತೀಯ ಬಾಲಕಿಯರ ಶಾಲೆಯೊಂದನ್ನು ಆರಂಭಿಸಿದರು. ಇವರು ಜಾತಿ ಮತ್ತು ಲಿಂಗದ ಆಧಾರದ ಮೇಲೆ ಜನರ ಮೇಲಿನ ತಾರತಮ್ಯ ಹೋಗಲಾಡಿಸಲು ಕೆಲಸ ಮಾಡುತಿದ್ದರು, ಇದೇಲ್ಲದರ ನಡುವೆ ಸಾವಿತ್ರಿಬಾಯಿ ಅವರನ್ನು ಮಹಾರಾಷ್ಟ್ರದ ಸಮಾಜ ಸುಧಾರಣಾ ಚಳವಳಿಯ ಪ್ರಮುಖ ವ್ಯಕ್ತಿ ಎಂದು ಗುರುತಿಸಲಾಗಿದೆ. * ಈ ಹಿಂದೆ 1998 ರಲ್ಲಿ ಭಾರತದ ಅಂಚೆ ಕಛೇರಿಯು ತನ್ನ ಅಂಚೆಚೀಟಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರ ಮೂಡಿಸಿ ಅವರಿಗೆ ಗೌರವವನ್ನು ನೀಡಿದೆ. * ಸಾವಿತ್ರಿಬಾಯಿ ಫುಲೆ ಅವರು ಸಮಾಜ ಸುಧಾರಕರಾಗಿದ್ದರು, ಹಾಗೂ ಇವರು ಸಮಾಜ ಸೇವೆಗಾಗಿ ಸತ್ಯ ಶೋಧಕ ಸಮಾಜ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.