Job Description: * ಪ್ರಸ್ತುತ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಕ್ವಿಂಟನ್ ಡಿ ಕಾಕ್ ಅವರು ಇದೀಗ ಟೆಸ್ಟ್ ಕ್ರಿಕೆಟ್'ಗೆ ವಿದಾಯ ಘೋಷಿಸಿದ್ದಾರೆ. ಕೆಲ ದಿನಗಳ ಹಿಂದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಸೆಂಚೂರಿಯನ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದವು ಅದರಲ್ಲಿ ಭಾರತ ತಂಡವು ಜಯಗಳಿಸಿದೆ, ಇದಾದ ಕೆಲವೇ ಸಮಯದಲ್ಲಿ ಕ್ವಿಂಟನ್ ಡಿ ಕಾಕ್ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ತಿಳಿಸಿದ್ದಾರೆ. * ಕ್ವಿಂಟನ್ ಡಿ ಕಾಕ್ ಅವರು ಭಾರತದ ವಿರುದ್ಧ ಸೆಂಚೂರಿಯನ್ ಮೈದಾನದಲ್ಲಿನ ಮೊದಲ ಟೆಸ್ಟ್ ಪಂದ್ಯದ ನಂತರ ಈ ನಿರ್ಧಾರವನ್ನು ತಿಳಿಸಿದ್ದಾರೆ ಈ ಹಿನ್ನಲೆಯಿಂದಾಗಿ ಅವರು ಮುಂದಿನ ಭಾರತದ ವಿರುದ್ದದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ಅವರ ಲಭ್ಯತೆ ಇರುವದಿಲ್ಲ. ಹಾಗೂ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ನಾನು ಲಭ್ಯವಿದ್ದೇನೆ ಎಂದು ಹೇಳಿದ್ದಾರೆ. * ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಕ್ವಿಂಟನ್ ಡಿಕಾಕ್ ಅವರು ತಮ್ಮ ತಂಡದ ಪರವಾಗಿ 54 ಟೆಸ್ಟ್ ಪಂದ್ಯವಾಡಿ 3,300 ರನ್ ಕಲೆಹಾಕಿದ್ದಾರೆ, ಅದರಲ್ಲಿ '6' ಶತಕ ಹಾಗೂ '22' ಅರ್ಧಶತಕ ಸಿಡಿಸಿದ್ದಾರೆ. * ಕ್ವಿಂಟನ್ ಡಿ ಕಾಕ್: ಅವರು 1992 ರ ಡಿಸೆಂಬರ್. 17 ರಂದು ಜನಿಸಿದ್ದಾರೆ, ಇವರು ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಗೂ ಮಾಜಿ ನಾಯಕ. ಇವರು ಈ ಹಿಂದೆ 2017 ರಲ್ಲಿ ಇವರು ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.