Job Description: * ಪ್ರಸ್ತುತ ಬ್ರಿಟನ್ ನ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ಸಂಸ್ಥೆಯನ್ನು ಭಾರತೀಯ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್(GBP)ಗಳಿಗೆ ಇದೀಗ ಖರೀದಿ ಮಾಡಿದೆ. ಇದೀಗ ಈ ಸಂಸ್ಥೆಯು ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್'ನ ಭಾಗವಾಗಿರಲಿದೆ ಎಂದಿದ್ದಾರೆ. * ಇದೀಗ ಈ ಫ್ಯಾರಡಿಯನ್ ಲಿಮಿಟೆಡ್'ನಲ್ಲಿ ಶೇ.100 ರಷ್ಟು ಪಾಲನ್ನು ಹೊಂದಿರುವ ರಿಲಾಯನ್ಸ್ ಕಂಪನಿ ಹೆಚ್ಚುವರಿಯಾಗಿ 25 ಮಿಲಿಯನ್ GBP ಯನ್ನು ಹೂಡಿಕೆ ಮಾಡಲಿದೆ. * ಈ ಬ್ಯಾಟರಿ ಉತ್ಪಾದಕ ಫ್ಯಾರಡಿಯನ್ ಲಿಮಿಟೆಡ್ ಸಂಸ್ಥೆಯ ಆಕ್ಸ್ಫರ್ಡ್ ಹಾಗೂ ಶೆಫೀಲ್ಡ್ ಮೂಲದ ಸಂಸ್ಥೆಯಾಗಿದೆ, ಹಾಗೂ ಇದು ಸೋಡಿಯಮ್-ಐಯಾನ್ ಬ್ಯಾಟರಿ ತಂತ್ರಜ್ಞಾನದ ಪೇಟೆಂಟ್'ನ್ನು ಹೊಂದಿದೆ ಈ ಕಂಪನಿಯು ಜಾಗತಿಕ ಮಟ್ಟದ ಬ್ಯಾಟರಿ ತಂತ್ರಜ್ಞಾನಗಳ ಕಂಪನಿಗಳಲ್ಲಿ ಇದು ಒಂದಾಗಿದೆ. * ಪ್ರಸ್ತುತ ರಿಲಾಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ ಕಂಪನಿಯು ಇದೀಗ ಸೋಲಾರ್, ಬ್ಯಾಟರಿ, ಹೈಡ್ರೋಜನ್ ಸೇರಿ ತನ್ನ ಗ್ರೀನ್ ಎನರ್ಜಿ ಉದ್ಯಮಕ್ಕೆ ಹೊಸ ರೂಪವನ್ನು ನೀಡುವ ನಿಟ್ಟಿನಲ್ಲಿ ಈ ಬ್ಯಾಟರಿ ಸಂಸ್ಥೆಯನ್ನು ಖರೀದಿಸಿದೆ, ಹಾಗೂ ಅದರಲ್ಲಿ ಹೂಡಿಕೆ ಮಾಡಲಾರಂಭಿಸಿದೆ. * ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL): ಇದೊಂದು ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪನಿಯಾಗಿದೆ. ಇದು ತನ್ನ ಪ್ರಧಾನ ಕಚೇರಿಯನ್ನು ಮುಂಬೈನಲ್ಲಿ ಹೊಂದಿರುವ ಖಾಸಗಿ ಘಟಕವಾಗಿದೆ. ಈ RIL ನಲ್ಲಿ ಪೆಟ್ರೋಕೆಮಿಕಲ್ಸ್, ನೈಸರ್ಗಿಕ ಅನಿಲ, ಚಿಲ್ಲರೆ ವ್ಯಾಪಾರ, ದೂರಸಂಪರ್ಕ, ಸಮೂಹ ಮಾಧ್ಯಮ ಹಾಗೂ ಜವಳಿ ಸೇರಿವೆ. ಇದೀಗ ಈ ರಿಲಯನ್ಸ್ ಕಂಪನಿ ಭಾರತದಲ್ಲಿನ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದು. * ರಿಲಯನ್ಸ್ ಕಂಪನಿಯು ಭಾರತದ ಅತಿದೊಡ್ಡ ರಫ್ತುದಾರ ಸಂಸ್ಥೆಯಾಗಿದೆ, ಅಲ್ಲದೇ ಭಾರತದ ಒಟ್ಟು ಸರಕು ರಫ್ತುಗಳಲ್ಲಿ 8% ರಷ್ಟನ್ನು ಹೊಂದಿದೆ, ಪ್ರಸ್ತುತ ಭಾರತದಲ್ಲಿ ಖಾಸಗಿ ವಲಯದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಸಂಸ್ಥೆ ಇದಾಗಿದೆ. * ಪ್ರಸ್ತುತ ಮುಖೇಶ್ ಅಂಬಾನಿ ಅವರು RIL ನ CEO ಆಗಿದ್ದಾರೆ. ಹಾಗೂ ಧೀರೂಭಾಯಿ ಅಂಬಾನಿ ಅವರು ಈ ಸಮಸ್ತೆಯ ಸ್ಥಾಪಕರಾಗಿದ್ದಾರೆ, ಇವರು ಈ ಸಂಸ್ಥೆಯನ್ನು 1973 ರ ಮೇ. 08 ರಂದು ಮಹಾರಾಷ್ಟದಲ್ಲಿ ಸ್ಥಾಪಿಸಿದ್ದಾರೆ.