Job Description: * ಇದೀಗ ಕೇಂದ್ರ ಸರ್ಕಾರವು ಜವಳಿ ಮೇಲಿನ GSTಯನ್ನು ಶೇ.5 ರಿಂದ ಶೇ. 12 ಕ್ಕೆ ಏರಿಸುವ ನಿರ್ಧಾರವನ್ನು ಕೈಗೊಂಡಿತ್ತು, ಆದರೆ ಕೇಂದ್ರದ ಈ ನಿಲುವಿಗೆ ಹಲವು ರಾಜ್ಯಗಳ ಉದ್ಯಮಗಳು ಆಕ್ಷೇಪ ವ್ಯಕ್ತಪಡಿಸಿವೆ ಈ ಕಾರಣದಿಂದಾಗಿ ಕೇಂದ್ರ ಸರ್ಕಾರವು ಜವಳಿ ಮೇಲಿನ GSTಯನ್ನು ಏರಿಕೆ ಮಾಡುವ ಪ್ರಕ್ರಿಯೆನ್ನು ಮುಂದೂಡಿದೆ ಎಂದಿದ್ದಾರೆ. ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ GST ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಪಶ್ಚಿಮ ಬಂಗಾಳದ ಮಾಜಿ ಹಣಕಾಸು ಸಚಿವರಾಗಿರುವ ಅಮಿತ್ ಮಿತ್ರಾ ಅವರು ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವರಿಗೆ ಜವಳಿ ಮೇಲಿನ ತೆರಿಗೆಯನ್ನು ಹಿಂಪಡೆದುಕೊಳ್ಳುವಂತೆ ತಿಳಿಸಿದ್ದರು, ಇದೀಗ ಜವಳಿ ಮೇಲೆ GST ಏರಿಕೆ ಮಾಡುವದರಿಂದ ಸರಿ ಸುಮಾರು ಒಂದು ಲಕ್ಷದಷ್ಟು ಜವಳಿ ಘಟಕಗಳ ಸ್ಥಗಿತ ಮತ್ತು 15 ಲಕ್ಷ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದರು. ಇವರಷ್ಟೇ ಅಲ್ಲದೇ GST ಕೌನ್ಸಿಲ್ ಸಭೆಗಿಂತ ಮೊದಲೇ ಅನೇಕ ರಾಜ್ಯಗಳು ಜನೇವರಿ 01 ರಿಂದ ಜವಳಿ ಉತ್ಪನ್ನಗಳ ಮೇಲಿನ ಹೆಚ್ಚಿನ GST ದರ ಏರಿಕೆ ಮಾಡುವದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿವೆ. * ಪ್ರಸ್ತುತ 2022 ಜನೇವರಿ. 01 ರಿಂದ ಜವಳಿ ಮೇಲಿನ GST ದರವನ್ನು ಈಗಿನ ಶೇ. 5 ರಿಂದ ಶೇ.12 ಕ್ಕೆ ಹೆಚ್ಚಿಸಿ ಪರವಾಗಿಲ್ಲ ಎಂದು ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ಥಾನ, ಮತ್ತು ತಮಿಳುನಾಡು ರಾಜ್ಯಗಳು ತಿಳಿಸಿವೆ. * ಸರಕು ಮತ್ತು ಸೇವಾ ತೆರಿಗೆ (GST): ಎಂಬುದು ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ಭಾರತದಲ್ಲಿ ಬಳಸಲಾಗುವ ಪರೋಕ್ಷ ತೆರಿಗೆಯಾಗಿದೆ. GSTಯನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ಪ್ರತಿ ಹಂತದಲ್ಲೂ ವಿಧಿಸಲಾಗುತ್ತದೆ, ಆದರೆ ಅಂತಿಮ ಗ್ರಾಹಕರನ್ನು ಹೊರತುಪಡಿಸಿದೆ. * ತೆರಿಗೆ ಸಂಗ್ರಹಕ್ಕಾಗಿ ಸರಕು ಮತ್ತು ಸೇವೆಗಳನ್ನು 5 ವಿಭಿನ್ನ ತೆರಿಗೆಗಳಾಗಿ ವಿಂಗಡಿಸಲಾಗಿದೆ: 0%, 5%, 12%, 18%, 28%. ಗಳಾಗಿವೆ, ಆದರೆ ಪೆಟ್ರೋಲಿಯಂ, ಆಲ್ಕೊಹಾಲ್ಯುಕ್ತ ಪಾನೀಯಗಳು ಮತ್ತು ವಿದ್ಯುಚ್ಛಕ್ತಿಗಳಿಗೆ GST ಅಡಿಯಲ್ಲಿ ತೆರಿಗೆ ವಿಧಿಸಲಾಗುತಿಲ್ಲ ಇವಿಗಳಿಗೆ ಪ್ರತ್ಯೇಕ ರಾಜ್ಯ ಸರ್ಕಾರಗಳಿಂದ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ. * ಭಾರತ ಸರ್ಕಾರವು GST ಯನ್ನು ಭಾರತದ ಸಂವಿಧಾನದ ನೂರು ಹಾಗೂ ಮೊದಲ ತಿದ್ದುಪಡಿಯ ಅನುಷ್ಠಾನದ ಮೂಲಕ 2017 ರ ಜುಲೈ. 01 ರಿಂದ GST ಜಾರಿಗೆ ತಂದಿದೆ.