Job Description: * ಪ್ರಸ್ತುತ ಚೀನಾ ದೇಶವು ಆಗಾಗ ಭಾರತದೊಂದಿಗೆ ಗಡಿ ಕ್ಯಾತೆಯನ್ನು ತಗೆಯುತ್ತಿರುತ್ತದೆ, ಚೀನಾ ಇದೀಗ ಈಶಾನ್ಯ ಭಾರತದ ರಾಜ್ಯವಾಗಿರುವ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳನ್ನು ಘೋಷಿಸಿದೆ, ಈ ಹಿನ್ನೆಲೆಯಿಂದಾಗಿ ಭಾರತ ಸರ್ಕಾರವು ಕೇವಲ ಬದಲಾವಣೆ ಮಾಡಿರುವ ಹೆಸರುಗಳನ್ನು ನೀಡುವುದರಿಂದ ಈ ಹಿಂದಿನ ವಾಸ್ತವಗಳೆಲ್ಲವೂ ಬದಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದೆ. * ಇತ್ತೀಚಿಗೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು, ಈಶಾನ್ಯ ಭಾರತದ ರಾಜ್ಯದ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನೀ, ಟಿಬೆಟನ್, ರೋಮನ್ ಅಕ್ಷರಗಳನ್ನು ಹೊಂದಿದ ಹೆಸರುಗಳನ್ನು ಒದಗಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನಾ ದೇಶವು ಹೆಸರುಗಳನ್ನೂ ಸೂಚಿಸಿರುವ ಈ 15 ಸ್ಥಳಗಳ ಪೈಕಿ 8 ಸ್ಥಳಗಳು ಜನಗಳು ವಾಸಿಸುವ ಪ್ರದೇಶಗಳಾಗಿವೆ, 4 ಪರ್ವತ ಪ್ರದೇಶಗಳಾಗಿವೆ, ಇನ್ನು 2 ನದಿಗಳು ಹಾಗು ಒಂದು ಪರ್ವತ ಪಾಸ್ ಪ್ರದೇಶವಾಗಿದೆ ಎಂದು ತಿಳಿಸಿದೆ. * ಚೀನಾ ರಾಷ್ರ್ಟದ ಈ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು ಈ ಅರುಣಾಚಲ ಪ್ರದೇಶ ಹಿಂದಿನಿಂದಲೂ ಹಾಗೂ ಮುಂದೆ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿದೆ ಎಂದು ಪ್ರತ್ಯುತ್ತರವನ್ನು ನೀಡಿದ್ದಾರೆ. * ಈ ಹಿಂದೆ 2017 ರ ಎಪ್ರಿಲ್ ನಲ್ಲಿ ಅರುಣಾಚಲ ಪ್ರದೇಶಕ್ಕೆ ದಲೈಲಾಮ ಅವರು ಭೇಟಿಯಾದ ನಂತರವೂ ಚೀನಾ ರಾಷ್ಟ್ರವು ಹೀಗೆ ಮಾಡಿತ್ತು ಎಂದು ತಿಳಿದು ಬಂದಿದೆ. * ಪ್ರಸ್ತುತ ಚೀನಾದ ಹೊಸ ಗಡಿ ಕಾನೂನು ಈ ಹಿಂದೆ ಅಕ್ಟೋಬರ್‌ನಲ್ಲಿ ಅಂಗೀಕಾರಗೊಂಡಿದೆ, ಈ ಕಾನೂನು 2022 ರ ಜನೇವರಿ. 01 ರಂದು ಜಾರಿಯಾಗುವ ಸಾಧ್ಯತೆಗಳಿವೆ, ಈ ಕಾರಣದಿಂದಾಗಿ ಚೀನಾ ದೇಶವು ಸ್ಥಳಗಳ ಹೆಸರನ್ನು ಬದಲಾವಣೆ ಮಾಡುವ ಕಾರ್ಯವನ್ನು ನಡೆಸಿದೆ ಎನ್ನಲಾಗಿದೆ. * ಅರುಣಾಚಲ ಪ್ರದೇಶ: (ಲ್ಯಾಂಡ್ ಆಫ್ ಡಾನ್-ಲಿಟ್ ಮೌಂಟೇನ್ಸ್) ಈ ಪ್ರದೇಶವು ಭಾರತದಿಂದ ನಿಯಂತ್ರಿಸಲ್ಪಡುತ್ತದೆ, ಹಾಗೂ ಈ ಪ್ರದೇಶವು ಭಾರತ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶವಾಗಿದೆ. ಇದೊಂದು ಈಶಾನ್ಯ ಭಾರತದ ರಾಜ್ಯವಾಗಿದೆ, ಹಾಗೂ ಇದು 1987 ರ ಫೆಬ್ರವರಿ. 20 ರಂದು ರಾಜ್ಯವಾಗಿ ರೂಪಗೊಂಡಿದೆ, ಅರುಣಾಚಲ ಪ್ರದೇಶದ ರಾಜ್ಯದ ರಾಜಧಾನಿ ಇಟಾನಗರ, ಈ ರಾಜ್ಯವು ಈಶಾನ್ಯ ಭಾರತದ '7' ಸಹೋದರಿಯ ರಾಜ್ಯಗಳಲ್ಲಿ ದೊಡ್ಡ ರಾಜ್ಯವಾಗಿದೆ. * ಈ ಅರುಣಾಚಲ ಪ್ರದೇಶವು ದಕ್ಷಿಣಕ್ಕೆ ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳ ಗಡಿಯನ್ನು ಹೊಂದಿದೆ, ಮತ್ತೇ ಪಶ್ಚಿಮದಲ್ಲಿ ಭೂತಾನ್, ಪೂರ್ವದಲ್ಲಿ ಮ್ಯಾನ್ಮಾರ್, ಹಾಗೂ ಉತ್ತರದಲ್ಲಿ ಚೀನಾದೊಂದಿಗೆ ಮ್ಯಾಕ್ ಮಹೊನ್ ಲೈನ್‌ ನಲ್ಲಿ ವಿವಾದಿತ ಗಡಿಯನ್ನು ಹೊಂದಿದೆ.