Job Description: * ಇತ್ತೀಚಿಗೆ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದ ವೇಳೆ ಮಳೆ ಆರಂಭವಾಯಿತು, ಈ ಕಾರಣದಿಂದಾಗಿ ಭಾರತ ತಂಡವು ಡಿಎಲ್‌ಎಸ್ ನಿಯಮದ ಪ್ರಕಾರ ಶ್ರೀಲಂಕಾ ತಂಡದ ವಿರುದ್ಧ 9 ವಿಕೆಟ್‌ ಗಳನ್ನೂ ಪಡೆಯುವ ಮೂಲಕ ಶ್ರೀಲಂಕಾ ತಂಡದವನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿದೆ. * ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದ ಆರಂಭದಲ್ಲಿ ಶ್ರೀಲಂಕಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿ 38 ಓವರ್‌ಗಳಲ್ಲಿ 9 ವಿಕೆಟ್‌ಗೆ 106 ರನ್ ಗಳನ್ನೂ ಕಲೆ ಹಾಕಿತು. ಆದರೆ DLS ನಿಯಮದ ಪ್ರಕಾರ 38 ಓವರ್‌ಗಳಲ್ಲಿ 102 ರನ್‌ ಗಳನ್ನೂ ಕಲೆಹಾಕುವ ಗುರಿಯನ್ನು ನೀಡಲಾಯಿತು, ಭಾರತ ತಂಡವು ಈ ಗುರಿಯನ್ನು ಕೇವಲ 21.3 ಓವರ್‌'ಗಳಲ್ಲಿ ಕಲೆಹಾಕಿತು. * ಪ್ರಸ್ತುತ ಈ ಅಂಡರ್-19 ಏಷ್ಯಾ ಕಪ್ ಎಂಬುದು ACC (Asian Cricket Council) ತನ್ನ ಸದಸ್ಯ ರಾಷ್ಟ್ರಗಳ ಅಂಡರ್-19 ತಂಡಗಳಿಗಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಾಗಿದೆ. - ಈ ಪಂದ್ಯವು ಮೊದಲ ಬಾರಿ 1989 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದೆ, ಆಗ ಭಾರತ ತಂಡವು ಈ ಪಂದ್ಯವನ್ನು ಜಯಿಸಿತ್ತು. - 2 ನೇ ಆವೃತ್ತಿ14 ವರ್ಷಗಳ ಬಳಿಕ ಅಂದರೆ 2003 ರಲ್ಲಿ ಪಾಕಿಸ್ತಾನದಲ್ಲಿ ನಡೆಸಲಾಯಿತು ಅಲ್ಲಿಯೂ ಕೂಡ ಭಾರತ ತಂಡವು ಪ್ರಶಸ್ತಿಯನ್ನು ಜಯಿಸಿತು. - 3 ನೇ ಆವೃತ್ತಿಯನ್ನು 2012 ರಲ್ಲಿ ಮಲೇಷ್ಯಾದಲ್ಲಿ ನಡೆಸಲಾಯಿತು, ಆ ಫೈನಲ್ ಪಂದ್ಯವು ಟೈ ಆದ ಹಿನ್ನಲೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು ಟ್ರೋಫಿಯನ್ನು ಹಂಚಿಕೊಂಡವು. - 4 ನೇ ಆವೃತ್ತಿಯು 2013-14 ರಲ್ಲಿ UAEಯಲ್ಲಿ ನಡೆಸಲಾಯಿತು ಅಲ್ಲಿ ಕೂಡ ಭಾರತ ಜಯಗಳಿಸಿತು. - 5 ನೇ ಆವೃತ್ತಿಯನ್ನು 2016 ರ ಡಿಸೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಸಲಾಯಿತು ಅಲ್ಲಿ ಕೂಡ ಭಾರತ ಜಯಗಳಿಸಿತು. - 6 ನೇ ಆವೃತ್ತಿಯನ್ನು 2017 ರ ನವೆಂಬರ್'ನಲ್ಲಿ ಮಲೇಷ್ಯಾದಲ್ಲಿ ಆಡಿಸಲಾಯಿತು, ಈ ಪಂದ್ಯವನ್ನು ಅಫ್ಘಾನಿಸ್ತಾನ ತಂಡವು ಗೆದ್ದುಕೊಂಡಿತು. - 7 ನೇ ಆವೃತ್ತಿಯನ್ನು 2018 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲಿನಲ್ಲಿ ಬಾಂಗ್ಲಾದೇಶದಲ್ಲಿ ನಡೆಸಲಾಯಿತು, ಈ ಪಂದ್ಯದಲ್ಲಿ ಭಾರತ ತಂಡವು ಜಯಿಸಿದೆ. - 8 ನೇ ಆವೃತ್ತಿಯನ್ನು 2019 ರ ಸೆಪ್ಟೆಂಬರ್ ನಲ್ಲಿ ಶ್ರೀಲಂಕಾದಲ್ಲಿ ನಡೆಸಲಾಯಿತು, ಅಲ್ಲಿ ಕೂಡ ಭಾರತ ತಂಡವು ಪ್ರಶಸ್ತಿಯನ್ನು ಜಯಿಸಿಕೊಂಡಿತು. - 9 ನೇ ಆವೃತ್ತಿಯುನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ 2021 ರ ಡಿಸೆಂಬರ್'ನಲ್ಲಿ ನಡೆಸಲಾಯಿತು, ಆ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ತಂಡದ ವಿರುದ್ಧ ಜಯಿಸಿದೆ.