Job Description: * ಪ್ರಸ್ತುತ ಇರಾನ್ ದೇಶವು 2021 ರ ಡಿಸೆಂಬರ್. 30 ರಂದು ಮೂರು ಸಾಧನಗಳನ್ನು ಒಳಗೊಂಡಿರುವ ಉಪಗ್ರಹ ವಾಹಕದೊಂದಿಗೆ ರಾಕೆಟ್'ನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದಾರೆ. ಇದೀಗ ಇರಾನ್ ದೇಶವು ಈ ಉಡಾವಣೆ ಬೆಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ, ಆದರೆ ರಕ್ಷಣಾ ಸಚಿವಾಲಯದ ವಕ್ತಾರರು ಉಡಾವಣೆಯಾಗಿರುವ ರಾಕೆಟ್'ನ್ನು 'ಸಿಮೋರ್ಗ್ ಅಥವಾ ಫೀನಿಕ್ಸ್' ಎಂದು ಹೆಸರಿಸಿದ್ದಾರೆ, ಇದು ಮೂರು ಸಾಧನಗಳನ್ನು ಒಳಗೊಂಡು 470 ಕೀ. ಮೀ.ಗಳಷ್ಟು ಬಾಹ್ಯಾಕಾಶಕ್ಕೆ ಉಡಾವಣೆಯಾಗಿದೆ. * ಇತ್ತೀಚಿಗೆ ವಿಶ್ವ ಶಕ್ತಿಗಳೊಂದಿಗೆ ಇರಾನ್‌ನ ದೇಶದ ಪರಮಾಣು ಒಪ್ಪಂದ ಹದಗೆಟ್ಟದ್ದೆ, ಇದೀಗ ಅದನ್ನು ಮರುಸ್ಥಾಪಿಸಲು ಆಸ್ಟ್ರಿಯಾ(Austria)ದ ರಾಜಧಾನಿ ವಿಯೆನ್ನಾದಲ್ಲಿ ನಡೆದ ಮಾತುಕತೆಗಳ ವಿರುದ್ಧವಾಗಿ ಇರಾನ್ ರಾಷ್ಟ್ರವು ಈ ಸ್ಫೋಟದ ಮಾಹಿತಿಯನ್ನು ಪ್ರಸಾರ ಮಾಡಿದೆ. * ಇರಾನ್‌ನ ನಾಗರಿಕ ಬಾಹ್ಯಾಕಾಶವು ಈ ಹಿಂದಿನ ಕೆಲ ವರ್ಷಗಳಲ್ಲಿ ಮಾರಣಾಂತಿಕ ಬೆಂಕಿ ಹಾಗೂ ಲಾಂಚ್‌ಪ್ಯಾಡ್ ರಾಕೆಟ್ ಸ್ಫೋಟ ಸೇರಿ ಅನೇಕ ಹಿನ್ನಡೆಗಳನ್ನೂ ಅನುಭವಿಸಿದೆ, ಹಾಗೂ ಈ ಹಿಂದೆ ಇರಾನ್ ದೇಶವು 2013 ರಲ್ಲಿ ಕೋತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು. * ಇರಾನಿನ ಬಾಹ್ಯಾಕಾಶ ಸಂಸ್ಥೆ (ISA): ಇದೊಂದು ಸರ್ಕಾರಿ ಬಾಹ್ಯಾಕಾಶ ಸಂಸ್ಥೆಯಾಗಿದೆ. ಇದನ್ನು ಕಮ್ಯುನಿಕೇಷನ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯಗಳು ಹಾಗೂ ಅಧಿಕಾರಗಳ ಕಾನೂನಿನ ಆರ್ಟಿಕಲ್ 9 ರ ಪ್ರಕಾರ ಈ ಹಿಂದೆ 2004 ರ ಫೆಬ್ರವರಿಯಲ್ಲಿ ಸ್ಥಾಪನೆ ಮಾಡಲಾಗಿದೆ, ಮತ್ತೇ ಇದು 2009 ರಲ್ಲಿ ಈ ದೇಶವು ಕಕ್ಷೀಯ-ಉಡಾವಣೆ-ಸಮರ್ಥ ರಾಷ್ಟ್ರವಾಗಿ ಹೊರಹೊಮ್ಮಿದೆ, ಹಾಗೂ ಈ ರಾಷ್ಟ್ರವು ಬಾಹ್ಯಾಕಾಶದ ಶಾಂತಿಯುತ ಬಳಕೆಗಳ (COPUOS) ವಿಶ್ವಸಂಸ್ಥೆಯ ಸಮಿತಿಯ 24 ಸ್ಥಾಪಕ ಸದಸ್ಯರಲ್ಲಿ ಇದು ಕೂಡ ಒಂದು. * ಈ COPUOS'ನ್ನು 1958 ರ ಡಿಸೆಂಬರ್. 13 ರಂದು ಸ್ಥಾಪನೆ ಮಾಡಲಾಗಿದೆ. * ಈ ಸಿಮೋರ್ಗ್ ರಾಕೆಟ್‌'ನ್ನು ಇರಾನ್‌ ರಾಷ್ಟ್ರದ ಅಮೀರಕಬೀರ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ, ಇದೀಗ ಈ ಸಿಮೋರ್ಗ್ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿದೆ, ಆದರೆ ಇದು ತನ್ನ ಕಕ್ಷೆಯನ್ನು ತಲುಪಲು ವಿಫಲವಾಗಿದೆ. * ಈ ಹಿಂದೆ 2020 ರ ಫೆಬ್ರವರಿಯಲ್ಲಿ ಇರಾನ್ ರಾಷ್ಟ್ರವು ಇಮಾಮ್ ಖೊಮೇನಿ ಬಾಹ್ಯಾಕಾಶ ಕೇಂದ್ರದಿಂದ ಸಿಮೋರ್ಗ್ ರಾಕೆಟ್‌ನಲ್ಲಿ ಜಾಫರ್-1 ಎಂಬ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ, ಆಗಲು ಈ ಉಪಗ್ರಹವು ಕಕ್ಷೆಗೆ ಸೇರುವ ಸಮಯದಲ್ಲಿ ವಿಫಲವಾಗಿದೆ. * ಮತ್ತೇ 2020 ರ ಏಪ್ರಿಲ್'ನಲ್ಲಿ ಇರಾನ್ ಮಿಲಿಟರಿ ಉಪಗ್ರಹ 'ನೂರ್'ನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸುವಲ್ಲಿ ಇರಾನ್ ದೇಶವು ಯಶಸ್ವಿಯಾಯಿತು.