Job Description: * ಪ್ರಸ್ತುತ ಕೇಂದ್ರ ಸರ್ಕಾರವು ಗ್ರಾಮ ಉಜಾಲ ಯೋಜನೆ(Gram Ujala Yojana)ಅಡಿಯಲ್ಲಿ ಕೇವಲ 10 ರೂ.ಗೆ ಒಂದು LED ಬಲ್ಬ್ ವಿತರಣೆ ಮಾಡಲಾಗುತ್ತಿದೆ, ಇಲ್ಲಿಯವರೆಗೆ ಕೇಂದ್ರವು 50 ಲಕ್ಷಕ್ಕೂ ಅಧಿಕ LED ಬಲ್ಬ್ ಗಳನ್ನ ವಿತರಣೆ ಮಾಡಿದೆ. ಇದೀಗ ಭಾರತೀಯ ಸರ್ಕಾರಿ ಕಂಪನಿ ಎನರ್ಜಿ ಎಫಿಷಿಯನ್ಸಿ ಸರ್ವೀಸಸ್ ಲಿಮಿಟೆಡ್‌(Energy Efficiency Services Limited)ನ ಅಂಗಸಂಸ್ಥೆಯಾಗಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(Convergence Energy Services Limited) ಗ್ರಾಮ ಉಜಾಲಾ ಯೋಜನೆ ಅಡಿಯಲ್ಲಿ ಸುಮಾರು 50 ಲಕ್ಷ LED ಬಲ್ಬ್ ಗಳನ್ನೂ ವಿತರಣೆ ಮಾಡುವ ಮೂಲಕ ಸಾಧನೆ ಮಾಡಿದೆ ವಿದ್ಯುತ್ ಸಚಿವಾಲಯವು ಮಾಹಿತಿ ನೀಡಿದೆ. * ಇದೀಗ ಕೇಂದ್ರ ಸರ್ಕಾರವು ಈ ಗ್ರಾಮ ಉಜಾಲ ಯೋಜನೆಯನ್ನು ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗ್ರಾಮೀಣ ಮನೆಗಳಲ್ಲಿ ಅನುಷ್ಠಾನಗೊಳಿಸಲು ಆರಂಭಿಸಿದೆ. * 2021 ರ ಮಾರ್ಚ್‌ ತಿಂಗಳಿನಿಂದ ಹಳ್ಳಿಗಳಲ್ಲಿ LED ಬಲ್ಬ್‌ಗಳನ್ನ ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಅಂದರೆ ಕೇವಲ 10 ರೂ. ವಿತರಿಸುವ ಯೋಜನೆಯನ್ನು ಆರಂಭಿಸಿತ್ತು, ಇದೀಗ ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್(Convergence Energy Services Limited) ಸಂಸ್ಥೆಯು 2021 ರ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದಂದು, ಒಂದೇ ದಿನದಲ್ಲಿ 1 ಮಿಲಿಯನ್ LED ಬಲ್ಬ್‌ಗಳನ್ನ ವಿತರಿಸಿ ಸಾಧನೆ ಮಾಡಿದೆ. * CESL ಸಂಸ್ಥೆಯು 7W ಮತ್ತು 12W ಬಲ್ಬ್‌ಗೆ ರೂ.10 ದರದಲ್ಲಿ 3 ವರ್ಷಗಳ ಗ್ಯಾರಂಟಿ ಜೊತೆಗೆ ನೀಡುತ್ತಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಗಳು ಗರಿಷ್ಠ 5 ಬಲ್ಬ್‌ಗಳನ್ನು ಪಡೆಯಬಹುದಾಗಿದೆ.