Job Description: * ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯು 2021ನೇ ಸಾಲಿನ ಸಾಹಿತ್ಯ ಅಕಾಡೆಮಿ (Sahitya Akademi Award 2021)ಯ ವಾರ್ಷಿಕ ಪ್ರಶಸ್ತಿಗಳನ್ನು ಪಡೆದವರ ಮಾಹಿತಿಯನ್ನು ಪ್ರಕಟಿಸಿದೆ. ಈ ಪ್ರಕಟಣೆಯಲ್ಲಿ ಕನ್ನಡದ ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ಆತ್ಮಕತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ದೊರಕಿದೆ. * ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರತಿಷ್ಠಿತ 2021'ರ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು, ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರ ಪ್ರಶಸ್ತಿಗಳನ್ನೂ ಪ್ರಕಟಿಸಿದೆ. ಇದೀಗ ಸುಮಾರು 20 ಭಾರತೀಯ ಭಾಷೆಗಳಿಗೆ ಮುಖ್ಯ ಪ್ರಶಸ್ತಿಗಳು ಲಭಿಸಿವೆ, ಹಾಗೂ ಸುಮಾರು 22 ಭಾರತೀಯ ಭಾಷೆಗಳಿಗೆ ಯುವ ಪುರಸ್ಕಾರ, ಹಾಗೂ 22 ಭಾರತೀಯ ಭಾಷೆಗಳಿಗೆ ಮಕ್ಕಳ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ತಿಳಿಸಿದೆ. * ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯು 2021ಕ್ಕೆ ಘೋಷಿಸಲಾಗಿರುವ ಪ್ರಶಸ್ತಿಗಳು: ಮೊದಲಿಗೆ '7' ಕವನ ಸಂಕಲನ, '5' ಕಥಾ ಸಂಕಲನ, '2' ಕಾದಂಬರಿಗಳು, ಮತ್ತೇ '2' ನಾಟಕಗಳು, ತಲಾ ಒಂದರಂತೆ ಜೀವನ ಚರಿತ್ರೆ, ಆತ್ಮಚರಿತ್ರೆ, ಮಹಾಕಾವ್ಯ, ಹಾಗೂ ವಿಮರ್ಶೆ ಪುಸ್ತಕವು ಈ ಬಾರಿ ಘೋಷಿಸಲಾಗಿರುವ ಪ್ರಶಸ್ತಿಗಳ ಪಟ್ಟಿಯಲ್ಲಿವೆ. * ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದವರಿಗೆ ನಾಮ ಫಲಕ, 01ಲಕ್ಷ ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ. * ಈ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಭಾರತದಲ್ಲಿ ಸಾಹಿತ್ಯಿಕ ಗೌರವ ದೊರಕಿಸುವ ಪ್ರಶಸ್ತಿಯಾಗಿದೆ, ಈ ಪ್ರಶಸ್ತಿಯನ್ನು ಸುಮಾರು 24 ಪ್ರಮುಖ ಭಾರತೀಯ ಭಾಷೆಗಳಲ್ಲಿ ಪ್ರಕಟವಾಗಿರುವ ಸಾಹಿತ್ಯಿಕ ಅರ್ಹತೆಯನ್ನು ಹೊಂದಿರುವ ಅತ್ಯುತ್ತಮ ಪುಸ್ತಕಗಳ ಬರಹಗಾರರಿಗೆ ಇದನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಸ್ತುತ ಇಂಗ್ಲಿಷ್, ಬೆಂಗಾಲಿ, ಪಂಜಾಬಿ ಹಾಗೂ ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿನ 22 ಭಾಷೆಗಳನ್ನು ಸಾಹಿತ್ಯ ಅಕಾಡೆಮಿಯನ್ನು ಗುರುತಿಸಲಾಗಿದೆ. * ಈ ಪ್ರಶಸ್ತಿಯನ್ನು ಈ ಹಿಂದೆ 1954 ರಲ್ಲಿ ಸ್ಥಾಪಿಸಲಾಗಿದೆ, ಭಾರತೀಯ ಬರವಣಿಗೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸುವುದು ಹಾಗೂ ಅದಕ್ಕೆ ಉತ್ತೇಜನ ನೀಡಲು ಇದನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಭಾರತೀಯ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರು ಈ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ಫಲಕವನ್ನು ವಿನ್ಯಾಸಗೊಳಿಸಿದ್ದಾರೆ.