Job Description: * ಪ್ರಸ್ತುತ ಕೇಂದ್ರ ಸರ್ಕಾರವು '6' ರಾಜ್ಯಗಳಿಗೆ NDRF ನಿಧಿ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಇತ್ತೀಚಿಗೆ ನಡೆದ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಆ '6' ರಾಜ್ಯಗಳಿಗೆ ಸುಮಾರು 3063.21 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. * NDRF ನಿಧಿ ಬಿಡುಗಡೆಯ '6' ರಾಜ್ಯಗಳು: ಪ್ರಸ್ತುತ ಗುಜರಾತ್ ರಾಜ್ಯಕ್ಕೆ 1133.35 ಕೋಟಿ ರೂ. ಪಶ್ಚಿಮ ಬಂಗಾಳಕ್ಕೆ 586 ಕೋಟಿ ರೂ. ಅಸ್ಸಾಂ ರಾಜ್ಯಕ್ಕೆ 51.53 ಕೋಟಿ ರೂ. ಉತ್ತರಾಖಂಡ್ ರಾಜ್ಯಕ್ಕೆ 187.18 ಕೋಟಿ ರೂ. ಮಧ್ಯಪ್ರದೇಶ ರಾಜ್ಯಕ್ಕೆ 600 ಕೋಟಿ ರೂ. ಮತ್ತು ಕರ್ನಾಟಕ ರಾಜ್ಯಕ್ಕೆ 504.06 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ಒಪ್ಪಿಗೆಯನ್ನು ನೀಡಿದೆ. * ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF): ಇದೊಂದು ಭಾರತೀಯ ವಿಶೇಷ ಪಡೆಯಾಗಿದೆ, ಇದನ್ನು 2005ರ ವಿಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ 'ಅಪಾಯಕಾರಿ ವಿಪತ್ತು ಪರಿಸ್ಥಿತಿ ಅಥವಾ ವಿಪತ್ತಿಗೆ ವಿಶೇಷ ಪ್ರತಿಕ್ರಿಯೆಯ ಉದ್ದೇಶಕ್ಕಾಗಿ' ಈ NDRF'ನ್ನು ರಚಿಸಲಾಗಿದೆ. ಭಾರತದಲ್ಲಿನ 'ವಿಪತ್ತು ನಿರ್ವಹಣೆಗಾಗಿ ಅಪೆಕ್ಸ್ ಬಾಡಿ' ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವಾಗಿದೆ. ಪ್ರಸ್ತುತ ಪ್ರಧಾನ ಮಂತ್ರಿಯವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA)ದ ಅಧ್ಯಕ್ಷರಾಗಿದ್ದಾರೆ. * ರಾಜ್ಯ ಸರ್ಕಾರಗಳು ಭಾರತದಲ್ಲಿ ವಿಪತ್ತುಗಳನ್ನು ನಿರ್ವಹಿಸುವ ಹೊಣೆಯನ್ನು ಹೊತ್ತಿವೆ, ಆದರೆ ಕೇಂದ್ರ ಸರ್ಕಾರವು ನೈಸರ್ಗಿಕ ವಿಕೋಪಗಳ ನಿರ್ವಹಣೆಗಾಗಿ "ನೋಡಲ್ ಸಚಿವಾಲಯ" ಗೃಹ ವ್ಯವಹಾರಗಳ ಸಚಿವಾಲವಾಗಿದೆ. * ಈ NDRF ಒಂದು ಉನ್ನತ ಸಂಸ್ಥೆಯಾಗಿದೆ, ಡೈರೆಕ್ಟರ್ ಜನರಲ್, ಹಾಗೂ ಕೆಲ ಇನ್ಸ್‌ಪೆಕ್ಟರ್ ಜನರಲ್‌ಗಳು (IG) ಹಾಗೂ ಡೆಪ್ಯೂಟಿ IG ಗಳುನ್ನು ಒಳಗೊಂಡಿರುತ್ತದೆ. * ಭಾರತ ಸರ್ಕಾರವು ಈ NDRF'ನ್ನು 2006 ರಲ್ಲಿ ಸ್ಥಾಪನೆ ಮಾಡಿದೆ, ಹಾಗೂ ಇದರ ಪ್ರಧಾನ ಕಛೇರಿಯು ನವದೆಹಲಿಯ ಅಂತ್ಯೋದಯ ಭವನದಲ್ಲಿದೆ.