Job Description: * ಪ್ರಸ್ತುತ 2022 ರಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರಿಂದ ಭಾರತದ ಕೆಲ ನಗರಗಳಲ್ಲಿ 5G ಟೆಲಿಕಾಂ ಸೇವೆಯನ್ನು ನೀಡಲು ಸಿದ್ಧರಾಗಿದ್ದಾರೆ. * ಇದೀಗ ಭಾರತದ ಈ ನಗರಗಳಲ್ಲಿ: ಗುರುಗ್ರಾಮ್, ಬೆಂಗಳೂರು, ಮುಂಬೈ, ಕೋಲ್ಕತ್ತಾ, ದೆಹಲಿ, ಚಂಡೀಗಢ, ಅಹಮದಾಬಾದ್, ಜಾಮ್‌ನಗರ, ಹೈದರಾಬಾದ್, ಚೆನ್ನೈ, ಪುಣೆ, ಲಕ್ನೋ ಮತ್ತು ಗಾಂಧಿನಗರ ಈ ಎಲ್ಲ ನಗರಗಳಲ್ಲಿ 5G ಟೆಲಿಕಾಂ ಸೇವೆಗಳನ್ನು ಹೊರತರಲಾಗುತ್ತದೆ ಎಂದು ಟೆಲಿಕಾಂ ಸೇವಾ ಪೂರೈಕೆದಾರು ತಿಳಿಸಿದ್ದಾರೆ, ಅಷ್ಟೇ ಅಲ್ಲದೇ ಇದೀಗ ಭಾರತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳು ಈ ನಗರಗಳಲ್ಲಿ 5G ಟ್ರಯಲ್ ಸೈಟ್‌ಗಳನ್ನು ಸ್ಥಾಪಿಸಿವೆ. * 5G ಸೇವೆ: ಇದು ದೀರ್ಘಾವಧಿಯ ವಿಕಸನ (LTE) ಮೊಬೈಲ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್‌ಗಳಿಗೆ ಇತ್ತೀಚಿನ ಅಪ್‌ಗ್ರೇಡ್ ಆಗಿದೆ. ಇದನ್ನು ಸ್ಮಾರ್ಟ್‌ಫೋನ್‌, ಹಾಗೂ ಅನೇಕ ರೀತಿಯ ಸಾಧನಗಳನ್ನು ಸಂಪರ್ಕಿಸಲು ಅಭಿವೃದ್ಧಿಪಡಿಸಲಾಗಿದೆ, ಇದು ಹೆಚ್ಚಿನ ವೇಗ ಹಾಗೂ ಸಾಮರ್ಥ್ಯವನ್ನು ನೀಡಲಿದೆ, * 5G ಯು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಎಂಬ ಆವರ್ತನ ಸ್ಪೆಕ್ಟ್ರಮ್ ನಂತಹ 3 ಬ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತದೆ - ಕಡಿಮೆ ಬ್ಯಾಂಡ್ ಸ್ಪೆಕ್ಟ್ರಮ್‌ನಲ್ಲಿ, ವೇಗವು 100 Mbps ಗೆ ಸೀಮಿತವಾಗಿದೆ. - ಮಧ್ಯಮ-ಬ್ಯಾಂಡ್ ಸ್ಪೆಕ್ಟ್ರಮ್ ಹೆಚ್ಚಿನ ವೇಗವನ್ನು ನೀಡುತ್ತದೆ. - ಹೆಚ್ಚಿನ-ಬ್ಯಾಂಡ್ ಸ್ಪೆಕ್ಟ್ರಮ್‌ನಲ್ಲಿ, ವೇಗವು 20 Gbps ನೀಡುತ್ತದೆ. * ಪ್ರಸ್ತುತ ಸರ್ಕಾರದ ಸಕ್ರಿಯ ಸಹಭಾಗಿತ್ವದೊಂದಿಗೆ ಸ್ಥಳೀಯ 5G ಟೆಸ್ಟ್ ಬೆಡ್ ಯೋಜನೆಯನ್ನು ಆರಂಭಿಸಲಾಗಿದೆ. ಹಾಗೂ ಟೆಲಿಕಾಂ ಇಲಾಖೆಯು 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಪ್ರಮುಖ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದೆ. * ಇದೀಗ ಈ ಯೋಜನೆಯಲ್ಲಿ ಭಾಗಿಯಾಗುವ ಸಂಶೋಧನಾ ಸಂಸ್ಥೆಗಳು: - IIT ಬಾಂಬೆ, IIT ದೆಹಲಿ, IIT ಹೈದರಾಬಾದ್, IIT ಮದ್ರಾಸ್, IIT ಕಾನ್ಪುರ, ಭಾರತೀಯ ವಿಜ್ಞಾನ ಸಂಸ್ಥೆ (IISC) ಬೆಂಗಳೂರು, ಮತ್ತು ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ & ರಿಸರ್ಚ್ (SAMEER), ಹಾಗೂ ವೈರ್‌ಲೆಸ್ ತಂತ್ರಜ್ಞಾನದಲ್ಲಿ ಶ್ರೇಷ್ಠತೆಯ ಕೇಂದ್ರ (CEWT), ಈ ಯೋಜನೆಯು 2018 ರಲ್ಲಿ ಆರಂಭವಾಗಿದೆ ಹಾಗೂ ಇದು 2021 ರ ಡಿಸೆಂಬರ್. 31 ರೊಳಗೆ ಪೂರ್ಣವಾಗಲಿದೆ ಎಂದಿದ್ದಾರೆ.