Job Description: * ಇದೀಗ ಭಾರತೀಯ ಸೇನೆಯು ಮಧ್ಯಪ್ರದೇಶದ ಮೊವ್‌ನಲ್ಲಿ 'ಕ್ವಾಂಟಮ್ ಲ್ಯಾಬೋರೇಟರಿ (Quantum Laboratory)'ನ್ನು ಸ್ಥಾಪಿಸಿದೆ, ಈ ಪ್ರಯೋಗಾಲಯವು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಥಿರ ಹಾಗೂ ಗಮನಾರ್ಹವಾಗಿ ಬೆಳೆಯುವದನ್ನು ತೋರಿಸಲಿದೆ ಎಂದಿದ್ದಾರೆ. * ಈ ಕ್ವಾಂಟಮ್ ಪ್ರಯೋಗಾಲಯವನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯದ ಸಹಾಯದಿಂದ ಸ್ಥಾಪಿಸಲಾಯಿತು. ಈ ಪ್ರಯೋಗಾಲಯವನ್ನು ಅಭಿವೃದ್ಧಿಶೀಲ ಕ್ಷೇತ್ರಗಳಲ್ಲಿನ ಸಂಶೋಧನೆ ಹಾಗೂ ಅಲ್ಲಿನ ತರಬೇತಿಯನ್ನು ಮುನ್ನಡೆಸುವ ಉದ್ದೇಶದಿಂದ ಇದನ್ನು ಮಧ್ಯಪ್ರದೇಶದ 'ಮೊವ್‌' ನಲ್ಲಿರುವ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್'ನಲ್ಲಿ ಸ್ಥಾಪನೆ ಮಾಡಲಾಗಿದೆ. ಹಾಗೂ ಭಾರತೀಯ ಸೇನೆಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕೇಂದ್ರವನ್ನು ಸ್ಥಾಪಿಸಿದೆ. * ರಾಷ್ಟ್ರೀಯ ಭದ್ರತಾ ಮಂಡಳಿ (NSC): ಇದು ಕಾರ್ಯನಿರ್ವಾಹಕ ಸರ್ಕಾರಿ ಸಂಸ್ಥೆಯಾಗಿದೆ, ಈ NSC ಸಂಸ್ಥೆಯು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗಿನ ಮಾಹಿತಿಯನ್ನು ಪ್ರಧಾನ ಮಂತ್ರಿಗಳ ಕಚೇರಿಗೆ ನೀಡುತ್ತದೆ. ಈ ಸಂಸ್ಥೆಯ ಮೊದಲ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ ಅವರಾಗಿದ್ದರು, ಈ ಹಿಂದೆ 1998 ರಲ್ಲಿ ಈ NSC ಸಂಸ್ಥೆಯುನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸ್ಥಾಪಿಸಿದ್ದಾರೆ.