Job Description: * ಪ್ರಸ್ತುತ ಕೇಂದ್ರ ಸರ್ಕಾರವು ಸಂಪೂರ್ಣ ನಾಗಾಲ್ಯಾಂಡ್ ನ್ನು ಇನ್ನೂ '6' ತಿಂಗಳ ಕಾಲ AFSPA ಕಾಯಿದೆಯಡಿಯಲ್ಲಿ 'ಅಸ್ತವ್ಯಸ್ತಗೊಂಡ ಪ್ರದೇಶ' (disturbed area) ಎಂದು ಘೋಷಿಸಿದೆ, ಹಾಗೂ ಈ ಘೋಷಣೆಯು 2021 ರ ಡಿಸೆಂಬರ್. 30 ರಿಂದ ಜಾರಿಯಲ್ಲಿರಲಿದೆ ಎಂದಿದ್ದಾರೆ. * ಸದ್ಯ ಕೇಂದ್ರ ಸರ್ಕಾರವು ನಾಗಾಲ್ಯಾಂಡ್ ರಾಜ್ಯದ ಸ್ಥಿತಿಯನ್ನು ಗೊಂದಲಮಯ ಹಾಗೂ ಅಪಾಯಕಾರಿಯಾಗಿದೆ ಎಂದು ಹೇಳಿದೆ. ಪ್ರಸ್ತುತ ನಾಗಾಲ್ಯಾಂಡ್‌ನ ವಿವಾದಾತ್ಮಕ 'AFSPA' (Armed Forces Special Powers Act) ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ಹಿಂಪಡೆಯುವ ಸಾಧ್ಯತೆಯನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ, ಈ ಸಮಿತಿ ರಚನೆಯ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. * AFSPA (Armed Forces Special Powers Act) ದಶಕಗಳಿಂದ ನಾಗಾಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಗಾಲ್ಯಾಂಡ್‌ನ ಸಂಪೂರ್ಣ ಪ್ರದೇಶವನ್ನು ಒಳಗೊಂಡಿರುವ ಪ್ರದೇಶವು ತುಂಬಾ ತೊಂದರೆಗೆ ಒಳಗಾಗಿದೆ ಹಾಗೂ ಅಪಾಯಕಾರಿಯಾಗಿದೆ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯಪಟ್ಟಿದೆ, ಈ ಹಿನ್ನಲೆಯಿಂದಾಗಿ ನಾಗರಿಕ ಶಕ್ತಿಯ ಸಹಾಯಕ್ಕಾಗಿ ಸಶಸ್ತ್ರ ಪಡೆಗಳ ಬಳಕೆ ಮಾಡುವ ಅಗತ್ಯ ಇದೀಗ ಬಂದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. * ಕೇಂದ್ರ ಸರ್ಕಾರವು AFSP Act ನ್ನು 1958 ರ ಸೆಕ್ಷನ್ 3 ರ ಮೂಲಕ ನೀಡಲಾದ ಅಧಿಕಾರವನ್ನು ಸಂಪೂರ್ಣ ನಾಗಾಲ್ಯಾಂಡ್'ನ್ನು 'ಕದಡಿದ ಪ್ರದೇಶ' (disturbed area) ಎಂದು ಘೋಷಿಸಲು ಬಳಸಿದೆ. * AFSPA ನ್ನು ಹಿಂಪಡೆಯುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯನ್ನು ಸ್ಥಾಪಿಸಲಾಗಿದೆ ಅದರ ಶಿಫಾರಸಿನ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇತ್ತೀಚಿಗೆ ಅಲ್ಲಿನ 14 ನಾಗರಿಕರ ಹತ್ಯೆಯಿಂದಾಗಿ ನಾಗಾಲ್ಯಾಂಡ್‌ನಲ್ಲಿ ಅಧಿಕ ಉದ್ವಿಗ್ನತೆ ಉಂಟಾಗಿದೆ ಇದೀಗ ಅದನ್ನು ತಗ್ಗಿಸಲು ಕೇಂದ್ರ ಸರ್ಕಾರವು ಈ ಸಮಿತಿಯನ್ನು ಸ್ಥಾಪಿಸಿದೆ. * ಈ AFSPA ಕಾಯಿದೆ: 1958 ಸಶಸ್ತ್ರ ಪಡೆಗಳಿಗೆ ಅಸ್ತವ್ಯಸ್ತಗೊಂಡ (disturbed area) ಪ್ರದೇಶಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಅಧಿಕಾರವನ್ನು ನೀಡುತ್ತದೆ, ಒಂದು ವೇಳೆ ಕಾನೂನಿಗೆ ವಿರುದ್ಧವಾಗಿ ಕಂಡುಬಂದ ವ್ಯಕ್ತಿಗೆ ಎಚ್ಚರಿಕೆ ನೀಡಿದ ನಂತರ ಗುಂಡಿನ ದಾಳಿಯನ್ನು ನಡೆಸುವ ನಡೆಸಲು ಅಧಿಕಾರವನ್ನು ಈ ಕಾಯಿದೆ ಹೊಂದಿದೆ.