Job Description: * ಪ್ರಸ್ತುತ 2021 ನೇ ಸಾಲಿನ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಹಾಗೂ ನಟಿ ತಾರಾ ಅನೂರಾಧಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಮುರುಘಾ ಮಠದ ವತಿಯಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಪ್ರಧಾನ ಮಾಡಲಾಗುತ್ತದೆ. * ತಾರಾ ಅನೂರಾಧಾ ಅವರು ಒಬ್ಬ ಕಲಾವಿದೆಯಾಗಿ ನಾಡಿಗೆ ನೀಡಿರುವ ಸೇವೆ ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಈ ಪ್ರಶಸ್ತಿಯನ್ನು 2022 ರ ಜನೇವರಿ. 01ರಂದು ಉದ್ಘಾಟನೆಯಾಗಲಿರುವ ನಾಟಕೋತ್ಸವದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ, ಪ್ರಸ್ತುತ ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ. * ಕನ್ನಡ ಚಿಂತರಂಗದ ಕಲಾವಿದೆ ಅನುರಾಧಾ(ತಾರಾ) ಅವರು 1971 ರ ಮಾರ್ಚ್. 04 ರಂದು ಜನಿಸಿದ್ದಾರೆ, ಇವರ ರಂಗನಾಮ ತಾರಾ, ನಟಿ ತಾರಾ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಾರೆ ಹಾಗೂ ಕರ್ನಾಟಕದ ರಾಜಕಾರಣಿಯಾಗಿದ್ದಾರೆ, ಇವರು ಈ ಹಿಂದೆ 2009 ರಲ್ಲಿ BJP ಪಕ್ಷಕೆ ಸೇರ್ಪಡೆಯಾಗಿದ್ದಾರೆ, ಸದ್ಯ ಇವರು ಕರ್ನಾಟಕ ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.