Job Description: * ಪ್ರಸ್ತುತ ನ್ಯೂಜಿಲೆಂಡ್‍ ನ ಸುಪ್ರಸಿದ್ಧ ಲೇಖಕಿ ಮತ್ತು ಕವಿಯತ್ರಿ ಕೆರಿ ಹುಲ್ಮ್ ಅವರು ವಿಧಿವಶರಾಗಿದ್ದಾರೆ, ಇವರು ನ್ಯೂಜಿಲೆಂಡ್‍'ನ ಮೊದಲ ಬೂಕರ್ ಪ್ರಶಸ್ತಿ ಪಡೆದ ಲೇಖಕಿ ಯಾಗಿದ್ದಾರೆ, ಹಾಗೂ ಇವರ ಬರವಣಿಗೆಯು ಪ್ರತ್ಯೇಕತೆ, ವಸಾಹತೋತ್ತರ, ಬಹುಸಂಸ್ಕೃತಿ ಮೇಲೆ ಕೇಂದ್ರಕೃತವಾಗಿರುತಿತ್ತು, ಅಷ್ಟೇ ಅಲ್ಲದೇ ಇವರು ಕೈ ತೈನುಯ್ ಎಂಬ ನಾಮಾಂಕಿತದಲ್ಲಿ ಬರೆಯುವಲ್ಲಿ ಹೆಸರುವಾಸಿಯಾಗಿದ್ದರು. * ಈ ಹಿಂದೆ 1985 ರಲ್ಲಿ ನ್ಯೂಜಿಲೆಂಡ್‍'ನ ಕೆರಿ ಹುಲ್ಮ್ ಅವರ ಮೊದಲ ಕಾದಂಬರಿ "ದಿ ಬೋನ್ ಪೀಪಲ್" ಗಾಗಿ ಸಾಹಿತ್ಯಕ್ಕೆ ನೀಡುವ ಬೂಕರ್ ಪ್ರಶಸ್ತಿಯನ್ನು ಗೆದ್ದ ಏಕೈಕ ಲೇಖಕಿ ಇವರಾಗಿದ್ದಾರೆ. ನ್ಯೂಜಿಲೆಂಡ್‍ನ ಸೌತ್ ಐಲ್ಯಾಂಡ್‍ನ ವೈಮೇಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಕೆರಿ ಹುಲ್ಮ್ ಅವರು ವಿಧವಶರಾಗಿದ್ದಾರೆ. * ನ್ಯೂಜಿಲೆಂಡ್‍'ನ ಕೆರಿ ಆನ್ ರೂಹಿ ಹುಲ್ಮೆ ಅವರು 1947 ರ ಮಾರ್ಚ್. 09 ರಂದು ಜನಿಸಿದ್ದರು, ಇತ್ತೀಚಿಗೆ ಇವರು 2021 ರ ಡಿಸೆಂಬರ್. 27 ರಂದು ನಿಧನರಾಗಿದ್ದಾರೆ, ಇವರು ನ್ಯೂಜಿಲೆಂಡ್ ಕಾದಂಬರಿಕಾರ, ಕವಿ ಮತ್ತು ಕೈ ತಾಹು ಮತ್ತು ಕಾಟಿ ಮಾಮೋ ಮೂಲದ ಸಣ್ಣ ಕಥೆಗಾರ. ಅವಳು ಕೈ ತೈನುಯಿ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಹಾಗೂ ಇವರು ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ನ್ಯೂಜಿಲೆಂಡ್‌ನ ಲೇಖಕಿಯಾಗಿದ್ದಾರೆ. * ಬೂಕರ್ ಪ್ರಶಸ್ತಿಯನ್ನು ಬೂಕರ್ ಪ್ರಶಸ್ತಿ ಮತ್ತು ಮ್ಯಾನ್ ಬೂಕರ್ ಪ್ರಶಸ್ತಿ ಎಂದು ಕರೆಯಲಾಗುತ್ತದೆ, ಈ ಪ್ರಶಸ್ತಿಯನ್ನು ಪ್ರತಿ ವರ್ಷ ಇಂಗ್ಲಿಷ್‌ನಲ್ಲಿ ಬರೆದ ಮತ್ತು ಯುನೈಟೆಡ್ ಕಿಂಗ್‌ಡಮ್ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾಗುವ ಅತ್ಯುತ್ತಮ ಕಾದಂಬರಿಗಳ ಸಾಹಿತ್ಯಿಕ ನೀಡಲಾಗುವ ಬಹುಮಾನವಾಗಿದೆ. * ಈ ಬೂಕರ್ ಪ್ರಶಸ್ತಿಯನ್ನು 1969 ರಲ್ಲಿ ಇಂಗ್ಲೆಂಡ್'ನ ಗಿಲ್ಡ್ಹಾಲ್ ಪ್ರದೇಶದಲ್ಲಿ ಸ್ಥಾಪನೆಮಾಡಲಾಗಿದೆ.