Job Description: * ಪ್ರಸ್ತುತ ಪ್ಯಾಲೆಸ್ಟೀನ್‌ನ ಅಧ್ಯಕ್ಷ ಮೊಹಮ್ಮದ್‌ ಅಬ್ಬಾಸ್‌ ಅವರು ಸುಮಾರು 11 ವರ್ಷಗಳ ಬಳಿಕ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ, ಇಸ್ರೇಲ್‌ನ ರಕ್ಷಣಾ ಸಚಿವ ಬೆನ್ನಿ ಗಾಂಟ್ಜ್‌ ಅವರೊಡನೆ ಟೆಲ್‌ ಅವೀವ್‌ ಉಪನಗರದ ನಿವಾಸದಲ್ಲಿ ಚರ್ಚೆಯನ್ನು ನಡೆಸಿದ್ದಾರೆ. * ಪ್ಯಾಲೆಸ್ಟೀನ್‌ನ ಅಧ್ಯಕ್ಷ ಮೊಹಮ್ಮದ್‌ ಅಬ್ಬಾಸ್‌ ಅವರು ಭೇಟಿಯ ಬೆನ್ನಲೇ ಪಶ್ಚಿಮ ದಂಡೆಯಲ್ಲಿ ಆಕ್ರಮಿತ ಕ್ರಮಗಳನ್ನು ಒಳಗೊಂಡ ಪ್ಯಾಕೇಜ್‌'ನ್ನು ಇಸ್ರೇಲ್‌ ರಾಷ್ಟ್ರವು ಇದೀಗ ಪ್ರಕಟಿಸಿದೆ. * ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ದೇಶಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಆರ್ಥಿಕ ಮತ್ತು ನಾಗರಿಕ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ, ಮತ್ತು ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ಹತ್ತಿಕ್ಕುವ ಉದ್ದೇಶದಿಂದ ಭದ್ರತಾ ಸಮನ್ವಯ ಸುಧಾರಿಸುವ ಸಲುವಾಗಿ ಇದೀಗ ಎರಡು ದೇಶಗಳು ಮಾತುಕತೆಯನ್ನು ನಡೆಸಿವೆ ಎಂದು ಇಸ್ರೇಲ್‌'ನ ರಕ್ಷಣಾ ಸಚಿವ ಬೆನ್ನಿ ಗಾಂಟ್ಜ್‌ ಹೇಳಿದ್ದಾರೆ. * ಪ್ರಸ್ತುತ ಪಶ್ಚಿಮ ದಂಡೆಯಲ್ಲಿನ ಆಕ್ರಮಿತ ಪ್ರದೇಶದಲ್ಲಿ ಸಂಗ್ರಹಿಸಲಾಗುವ ತೆರಿಗೆಯನ್ನು ಪ್ಯಾಲೆಸ್ಟೀನ್‌ ಪ್ರಾಧಿಕಾರಕ್ಕೆ ನೀಡಲಾಗುತ್ತದೆ, ಅಷ್ಟೇ ಅಲ್ಲದೇ ಆ ಪ್ರದೇಶದಲ್ಲಿನ ನೂರಾರು ಪ್ಯಾಲೆಸ್ಟೀನ್‌ ವ್ಯಾಪಾರಿಗಳಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಮಾನ್ಯತೆಯನ್ನು ನೀಡಲಾಗುತ್ತದೆ, ಇದರೊಂದಿಗೆ ಪಶ್ಚಿಮ ದಂಡೆ ಹಾಗೂ ಗಾಜಾ ಪಟ್ಟಿಯಲ್ಲಿರುವ ನೂರಾರು ಪ್ಯಾಲೆಸ್ಟೀನಿಯನ್ ಪ್ರಜೆಗಳ ವಾಸಸ್ಥಳವನ್ನು ಅಧಿಕೃತಗೊಳಿಸಲಾಗುತ್ತದೆ ಎಂದು ಈ ಎರಡು ದೇಶ ಮಾತುಕತೆ ನಡೆಸಿರುವ ಸಂಧರ್ಭಗಳಲ್ಲಿ ತಿಳಿದು ಬಂದಿದೆ. * ಇಸ್ರೇಲಿ-ಪ್ಯಾಲೆಸ್ಟಿನಿಯನ್ ಸಂಘರ್ಷವು ಪ್ರಪಂಚದ ಅತ್ಯಂತ ನಿರಂತರ ಸಂಘರ್ಷಗಳಲ್ಲಿ ಒಂದಾಗಿದೆ, ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯ ಇಸ್ರೇಲಿ ಆಕ್ರಮಣವು ಸರಿ ಸುಮಾರು 54 ವರ್ಷವನ್ನು ತಲುಪಿದೆ. ಈ ಎರಡು ಇಸ್ರೇಲಿ-ಪ್ಯಾಲೇಸ್ಟಿನಿಯನ್ ಪ್ರದೇಶಗಳ ಶಾಂತಿ ಪ್ರಕ್ರಿಯೆಯ ಭಾಗವಾಗಿ ಸಂಘರ್ಷವನ್ನು ಪರಿಹರಿಸಲು ವಿವಿಧ ಪ್ರಯತ್ನಗಳನ್ನು ನಡೆಸಲಾಗಿದೆ. * ಈ ಹಿಂದೆ 1897 ರ ಮೊದಲ ಜಿಯೋನಿಸ್ಟ್ ಕಾಂಗ್ರೆಸ್ ಮತ್ತು 1917 ರ ಬಾಲ್ಫೋರ್ ಘೋಷಣೆ ಪ್ಯಾಲೆಸ್ಟೈನ್‌ನಲ್ಲಿ ಯಹೂದಿ ತಾಯ್ನಾಡಿನ ಹಕ್ಕುಗಳ ಸಾರ್ವಜನಿಕ ಘೋಷಣೆಗಳಿಂದಾಗಿ ಇಲ್ಲಿನ ಪ್ರದೇಶದಲ್ಲಿ ಆರಂಭಿಕ ಉದ್ವಿಗ್ನತೆಯನ್ನು ಸೃಷ್ಟಿಯಾದವು. ಆಗ ಪ್ರದೇಶವು ಸ್ವಲ್ಪ ಪ್ರಮಾಣದ ಅಲ್ಪಸಂಖ್ಯಾತ ಯಹೂದಿ ಜನಸಂಖ್ಯೆಯನ್ನು ಹೊಂದಿತ್ತು, ಮ್ಯಾಂಡೇಟ್ ಫಾರ್ ಪ್ಯಾಲೆಸ್ಟೈನ್‌ನ ಅನುಷ್ಠಾನದ ಬಳಿಕ 'ಪ್ಯಾಲೆಸ್ಟೈನ್‌'ನಲ್ಲಿ ಯಹೂದಿ ಜನರಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸುವ ಸಲುವಾಗಿ ಬ್ರಿಟಿಷ್ ಸರ್ಕಾರದ ಮೇಲೆ ಬದ್ಧ ಬಾಧ್ಯತೆಯನ್ನು ಹೊಂದಿತ್ತು, ಆಗ ಯಹೂದಿಗಳು ಮತ್ತು ಅರಬ್ಬರ ನಡುವಿನ ಉದ್ವಿಗ್ನತೆಯು ಪಂಥೀಯ ಸಂಘರ್ಷವಾಗಿ ಬೆಳೆಯತೊಡಗಿತು, 1947-1949 ಪ್ಯಾಲೆಸ್ಟೈನ್ ಯುದ್ಧದಲ್ಲಿ ಈ ವಿಶಾಲವಾದ ಅರಬ್-ಇಸ್ರೇಲಿ ಸಂಘರ್ಷದ ಆರಂಭವನ್ನು ಗುರುತಿಸಲಾಯಿತು. ತದನಂತರ 1967 ರ '6' ದಿನಗಳ ಯುದ್ಧದಲ್ಲಿ ಪ್ಯಾಲೆಸ್ಟೀನಿಯನ್ ಪ್ರದೇಶಗಳನ್ನು ಇಸ್ರೇಲಿ ಮಿಲಿಟರಿ ಪಡೆಯು ವಶಪಡಿಸಿಕೊಂಡಿತು, ಪ್ರಸ್ತುತ ಇಸ್ರೇಲಿ-ಪ್ಯಾಲೆಸ್ಟಿನಿಯನ್ ಯಥಾಸ್ಥಿತಿ ಪ್ರಾರಂಭವಾಯಿತು.