Job Description: * ಪ್ರಸ್ತುತ ಇಂಡೋನೇಶ್ಯಾ ದೇಶದ ಕಡಲ ತೀರದ ಸಮೀಪ ಕೆಟ್ಟುನಿಂತಿರುವ, 100 ಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರಿರುವ ದೋಣಿಯನ್ನು ರಿಪೇರಿಮಾಡಲು ಅವರಿಗೆ ನೆರವಾಗುತ್ತೇವೆ, ಆದರೆ ಆ ರೊಹಿಂಗ್ಯಾಗಳಿಗೆ ಈ ಇಂಡೊನೇಶ್ಯಾ ದೇಶದೊಳಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ತಿಳಿಸಿದೆ. * ರೊಹಿಂಗ್ಯಾ ನಿರಾಶ್ರಿತರಿರುವ ದೋಣಿಯನ್ನು ರಿಪೇರಿ ಮಾಡಿ ಪುನಃ ಅವರನ್ನು ಅದೇ ದೋಣಿಗಳ ವಾಪಾಸು ಕಳುಹಿಸುತ್ತೇವೆ ಎಂದು ಇಂಡೋನೇಶ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. * ಪ್ರಸ್ತುತ ಅಲ್ಲಿನ ಮೀನುಗಾರರು ಇಂಡೋನೇಶ್ಯಾ ದೇಶದ ಪಶ್ಚಿಮದಲ್ಲಿರುವ ಸುಮಾತ್ರಾ ದ್ವೀಪದ ಬಿರೂವೆನ್ ತೀರದ ಬಳಿ ಕೆಟ್ಟುನಿಂತಿರುವ ದೋಣಿಯನ್ನು ಗುರುತಿಸಿದ್ದಾರೆ, ಆ ದೋಣಿಯಲ್ಲಿ ಮಹಿಳೆಯರು, ಮಕ್ಕಳ ಸೇರಿ ಒಟ್ಟು 120 ರೊಹಿಂಗ್ಯಾ ನಿರಾಶ್ರಿತರಿದ್ದಾರೆ ಎಂದು ಮೀನುಗಾರರು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. * ಇದೀಗ ಅಲ್ಲಿನ ಸ್ಥಳೀಯ ನೌಕಾ ಪಡೆಯ ಅಧಿಕಾರಿ ಡಿಯಾನ್ ಸುರಿಯಂಸ್ಯ ಅವರು ಹೇಳಿರುವ ಪ್ರಕಾರ ರೊಹಿಂಗ್ಯಾಗಳಿಗೆ ಮಾನವೀಯ ದೃಷ್ಟಿಯಿಂದ ಆಹಾರ, ನೀರು, ವೈದ್ಯಕೀಯ ನೆರವು ನೀಡಲಾಗುತ್ತದೆ, ಹಾಗೂ ಅವರ ದೋಣಿಯನ್ನು ರಿಪೇರಿ ಮಾಡಿ ಮರಳಿ ಕಳುಹಿಸಲಾಗುವುದು ಎಂದಿದ್ದಾರೆ, ಈ ರೊಹಿಂಗ್ಯಾಗಳು ಇಂಡೋನೇಶ್ಯಾದ ಪ್ರಜೆಗಳಲ್ಲ, ಆದರೆ ನಿರಾಶ್ರಿತರು ಎಂಬ ಕಾರಣಕ್ಕೆ ಅವರನ್ನು ನಮ್ಮ ದೇಶದೊಳಗೆ ಪ್ರವೇಶಿಸಲು ಅನುಮತಿಯನ್ನು ನೀಡಲಾಗುವದಿಲ್ಲ ಎಂದು ಅಲ್ಲಿನ ಸರಕಾರವು ತಿಳಿಸದೆ. * ರೋಹಿಂಗ್ಯಾ ಜನರು: ಯಾವುದೇ ಒಂದು ಸ್ಥಿತಿಯಿಲ್ಲದ ಇಂಡೋ-ಆರ್ಯನ್ ಜನಾಂಗೀಯ ಗುಂಪಾಗಿದೆ, ಈ ಜನರು ಪ್ರಧಾನವಾಗಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ, ಹಾಗೂ ಇವರು ರಾಖೈನ್ ರಾಜ್ಯದಲ್ಲಿ ವಾಸಿಸುತ್ತಾರೆ. ಮಯನ್ಮಾರ್ (ಈ ಹಿಂದಿನ ಬರ್ಮಾ) 2017 ರಲ್ಲಿನ ಸ್ಥಳಾಂತರದ ಬಿಕ್ಕಟ್ಟಿನ ಮೊದಲು ಸುಮಾರು 740,000 ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದರು, ಆಗ ಅಂದಾಜು 1.4 ಮಿಲಿಯನ್ ರೋಹಿಂಗ್ಯಾಗಳು ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿದ್ದರು, ಮಯನ್ಮಾರ್ ನ 1982 ರ ರಾಷ್ಟ್ರೀಯತೆಯ ಕಾನೂನಿನ ಅಡಿಯಲ್ಲಿ ಈ ರೋಹಿಂಗ್ಯಾಗಳಿಗೆ ಪೌರತ್ವವನ್ನು ನಿರಾಕರಿಸಲಾಗಿದೆ.