Job Description: * ಪ್ರಸ್ತುತ ಮಂಗಳೂರಿನ ದೀಪಾ ಕೆ.ಎಸ್. ರವರು ಟರ್ಕಿಯ ಇಸ್ತಾಂಬುಲ್ ನಲ್ಲಿ ಜರುಗುತ್ತಿರುವ ಏಷ್ಯನ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಸ್ಪರ್ಧೆಯ 76 ಕೆಜಿ ಮಾಸ್ಟರ್ ವಿಭಾಗದಲ್ಲಿ '4' ಚಿನ್ನದ ಪದಕ ಜಯಿಸಿ ಕೊಂಡಿದ್ದಾರೆ. * ಈ ಮಂಗಳೂರಿನ ದೀಪಾ ಕೆ.ಎಸ್. ರವರು ಪವರ್ ಲಿಫ್ಟರ್ ಪ್ರದೀಪ್ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. * ಏಷ್ಯನ್ ಪವರ್‌ಲಿಫ್ಟಿಂಗ್ ಫೆಡರೇಶನ್‌: USA ನಲ್ಲಿ ಒಲಂಪಿಕ್ ವೇಟ್‌ಲಿಫ್ಟಿಂಗ್‌ನ ಜನಪ್ರಿಯತೆಯು ಕಡಿಮೆಯಾದಾಗ 1950 ರಲ್ಲಿ ಪವರ್‌ಲಿಫ್ಟಿಂಗ್ ಕ್ರೀಡೆಗಳು ಆರಂಭಿಸಲಾಯಿತು. * ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸಮಿತಿಯು 1958 ರಲ್ಲಿ ಪವರ್‌ಲಿಫ್ಟಿಂಗ್ ಕ್ರೀಡೆಗಳನ್ನು ಗುರುತಿಸಿ (ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್) ಈ ನಿರ್ದಿಷ್ಟ ಲಿಫ್ಟ್‌ಗಳನ್ನು ಚಾಂಪಿಯನ್‌ಶಿಪ್ ರೂಪದಲ್ಲಿ ಜಾರಿ ಮಾಡಿದೆ. * ಈ ಹಿಂದೆ 1964 ರ ಸೆಪ್ಟೆಂಬರ್'ನಲ್ಲಿ USA ನಲ್ಲಿ 1ನೇ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಜರುಗಿದೆ. ಆಗಿನಿಂದಲೂ ಕೆನಡಾ, ಯುಕೆ, ರಷ್ಯಾ, ಉಕ್ರೇನ್, ದೇಶಗಳಲ್ಲಿ 20 ವರ್ಷಗಳಲ್ಲಿ ಪವರ್‌ಲಿಫ್ಟಿಂಗ್'ನ ಪ್ರಪಂಚದಾದ್ಯಂತ ನಡೆಸಲಾಗುತ್ತಿದೆ. * ಮತ್ತೇ 1972 ರಲ್ಲಿ ಯುನೈಟೆಡ್ ಸ್ಟೇಟ್ಸ್ ಹಾಗೂ ಗ್ರೇಟ್ ಬ್ರಿಟನ್ ಪವರ್‌ಲಿಫ್ಟಿಂಗ್ ಕ್ರೀಡೆಗಳನ್ನು ಆರಂಭಿಸಿದೆ. * ಈ ಹಿಂದೆ 1984 ರಲ್ಲಿ ಏಷ್ಯನ್ ಪವರ್‌ಲಿಫ್ಟಿಂಗ್ ಫೆಡರೇಶನ್ (APF)ನ್ನು ಸ್ಥಾಪಿಸಲಾಗಿದೆ, ಈ ಏಷ್ಯನ್ ಪವರ್‌ಲಿಫ್ಟಿಂಗ್ ಫೆಡರೇಶನ್ ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಫೆಡರೇಶನ್ (IPF)ನ ಸದಸ್ಯತ್ವವನ್ನು ಹೊಂದಿದೆ, ಇದೀಗ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪವರ್‌ಲಿಫ್ಟಿಂಗ್‌ನ ಆಡಳಿತ ಮಂಡಳಿಯಾಗಿದೆ. ಇದೀಗ ಈ IPF '6' ಖಂಡಗಳ 100 ಕ್ಕೂ ಅಧಿಕ ದೇಶಗಳ ಸದಸ್ಯ ಒಕ್ಕೂಟಗಳನ್ನು ಒಳಗೊಂಡಿದೆ. * ಈ ಹಿಂದೆ 2008 ರಲ್ಲಿ ಏಷ್ಯನ್ ಪವರ್ ಲಿಫ್ಟಿಂಗ್ ಫೆಡರೇಶನ್ ಕಾರ್ಯದರ್ಶಿ ಶ್ರೀ. ಸುಬ್ರತಾ ದತ್ತಾ ಅವರು IPF ಅತ್ಯಂತ ಗೌರವಾನ್ವಿತ 'ಹಾಲ್ ಆಫ್ ಫೇಮ್' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ, ಮತ್ತೇ ಈ ಪ್ರಶಸ್ತಿಯನ್ನು 1984 ರಲ್ಲಿ ಭಾರತೀಯ ಅಧಿಕಾರಿ ಶ್ರೀ ಮನೋಜಿತ್ ಬೋಸ್ ಹಾಗೂ 1994 ರಲ್ಲಿ ಇಂಡೋನೇಷಿಯಾದ ಅಧಿಕಾರಿ ಶ್ರೀ ಟೋನಿ ಸುಂಡ್ಜಾಜಾ ಅವರು ಈ ಗೌರವವನ್ನು ಪಡೆದಿದ್ದಾರೆ.