Job Description: * ಪ್ರಸ್ತುತ ಭಾರತ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ನಡುವಿನ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ 113 ರನ್'ಗಳಿಂದ ಜಯಸಾಧಿಸಿದೆ, ಭಾರತವು ಈ ಸರಣಿಯನ್ನು 1-0 ಅಂತರದಿಂದ ಜಯ ಸಾಧಿಸಿದೆ. * ಈ ಟೆಸ್ಟ್ ಪಂದ್ಯದ ಮೂಲಕ ಭಾರತವು ಸೆಂಚುರಿಯನ್ ಮೈದಾನದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಗೆಲುವನ್ನು ಸಾಧಿಸಿದೆ. * ಭಾರತ ತಂಡವು ಸೌತ್ ಆಫ್ರಿಕಾ ತಂಡದ ವಿರುದ್ಧ ಸೆಂಚುರಿಯನ್ ಮೈದಾನದಲ್ಲಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. * ಈ ಟೆಸ್ಟ್ ಪಂದ್ಯವು ದಕ್ಷಿಣ ಆಫ್ರಿಕಾದ ಗೌಟೆಂಗ್‌'ನ ಸೆಂಚುರಿಯನ್‌ನಲ್ಲಿರುವ ಕ್ರಿಕೆಟ್ ಮೈದಾನದಲ್ಲಿ ನಡೆದಿದೆ. ಈ ಸೆಂಚುರಿಯನ್‌ ಮೈದಾನವನ್ನು ದೂರದರ್ಶನ ಕಂಪನಿ ಸೂಪರ್‌ಸ್ಪೋರ್ಟ್ ಸ್ಟೇಡಿಯಂನಲ್ಲಿ ಷೇರುಗಳನ್ನು ಖರೀದಿಸಿದಾಗಿನಿಂದಲೂ ಸೂಪರ್‌ಸ್ಪೋರ್ಟ್ ಪಾರ್ಕ್ ಎಂದೂ ಕರೆಯುತ್ತಾರೆ, ಪ್ರಸ್ತುತ ಈ ಮೈದಾನವು ಸುಮಾರು 22,000 ಪ್ರೇಕ್ಷಕರ ಕುಳಿತುಕೊಂಡು ಪಂದ್ಯ ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. * ದಕ್ಷಿಣ ಆಫ್ರಿಕಾದಲ್ಲಿನ ಟೈಟಾನ್ಸ್ ಕ್ರಿಕೆಟ್ ತಂಡವು 2004 ರಿಂದ ಈ ಮೈದಾನದಲ್ಲಿ ಹೆಚ್ಚಿನ ಹೋಮ್ ಪಂದ್ಯಗಳನ್ನು ಆಡಿದೆ. ಈ ಹಿಂದೆ 1986 ರಿಂದ ಈ ಮೈದಾನವು ಟೈಟಾನ್ಸ್‌ನ ಪೂರ್ವವರ್ತಿ ತಂಡವಾದ ನಾರ್ದರ್ನ್‌ಗಳಿಗೆ(Northerns) ನೆಲೆಯಾಗಿತ್ತು ಎಂದು ತಿಳಿದು ಬಂದಿದೆ.