Job Description: * 10 ಕೋಟಿ ರೈತ ಕುಟುಂಬಗಳ ಫಲಾನುಭವಿಗಳಿಗೆ 20,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ವರ್ಗಾವಣೆ * ಸಮ್ಮಾನ್ ನಿಧಿ ಕಾರ್ಯಕ್ರಮದಡಿ ರೈತ ಕುಟುಂಬಗಳಿಗೆ ಈವರೆಗೆ 1.6 ಲಕ್ಷ ಕೋಟಿ ರೂಪಾಯಿ ವರ್ಗಾವಣೆ * ತಳಮಟ್ಟದ ರೈತರ ಸಬಲೀಕರಣ ಮತ್ತು ಪ್ರಧಾನಮಂತ್ರಿಯವರ ನಿರಂತರ ಬದ್ಧತೆಗೆ ಅನುಗುಣವಾಗಿ ಕ್ರಮ * ಸುಮಾರು 351 ರೈತ ಉತ್ಪಾದನಾ ಸಂಘಟನೆಗಳಿಗೆ [ಎಫ್.ಪಿ.ಓಗಳಿಗೆ] 14 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಇಕ್ವಿಟಿ ಅನುದಾನವನ್ನು ಸಹ ಬಿಡುಗಡೆ ಮಾಡಲಿರುವ ಪ್ರಧಾನಮಂತ್ರಿ : 1.24 ಲಕ್ಷ ರೈತರಿಗೆ ಅನುಕೂಲ. * ಪಿಎಂ-ಕಿಸಾನ್ ಯೋಜನೆಯಡಿ ರೈತ ಕುಟುಂಬಗಳಿಗೆ ಪ್ರತಿವರ್ಷ 6000 ರೂಪಾಯಿ ಮೊತ್ತವನ್ನು ನಾಲ್ಕು ಸಮಾನ ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಬಿಡುಗಡೆ ಮಾಡಲಾಗುತ್ತಿದೆ. * ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. * ಕಿಸಾನ್ ಸಮ್ಮಾನ್ ನಿಧಿಯಡಿ ರೈತ ಕುಟುಂಬಗಳಿಗೆ 1.6 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಈವರೆಗೆ ವರ್ಗಾಯಿಸಲಾಗಿದೆ.