Job Description: * ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಿ ಕಾನ್ಪುರ ಮೆಟ್ರೋ ರೈಲು ಯೋಜನೆಯ ಪೂರ್ಣಗೊಂಡಿರುವ ಭಾಗ, ಹಾಗೂ 'ಬಿನಾ-ಪಂಕಿ ಬಹು ಉತ್ಪನ್ನ ಪೈಪ್‌ಲೈನ್ ಯೋಜನೆ'ಯನ್ನು ಸಹ ಉದ್ಘಾಟಿಸಿದ್ದಾರೆ. * ಈ ಉದ್ಘಾಟಣೆ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು IIT-ಕಾನ್ಪುರದ 54 ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು, ಪ್ರಸ್ತುತ ಈ ಕಾನ್ಪುರ ಮೆಟ್ರೋ ರೈಲು ಯೋಜನೆಯು ಕಾನ್ಪುರ ಮೆಟ್ರೋ ರೈಲು ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆಯಾಗಿದೆ. ಈ ಹಿಂದೆ 2015 ರ ಜೂನ್ ನಲ್ಲಿ ಈ ಯೋಜನೆಯ ಅಧ್ಯಯನವನ್ನು RITES ನಿಂದ ಮಾಡಲಾಗಿದೆ, ಇದೀಗ ಉದ್ಘಾಟಣೆಯಾಗಿರುವ ಮೆಟ್ರೋ ಯೋಜನೆಯು 32 ಕಿಲೋಮೀಟರ್ ದೂರದವರೆಗೆ ಚಲಿಸುತ್ತದೆ. ಹಾಗೂ ಇದನ್ನು 11000 ಕೋಟಿ ವೆಚ್ಚದಲ್ಲಿ ನಿರ್ಮಾಣಮಾಡಲಾಗುತ್ತಿದೆ. * ಪ್ರಸ್ತುತ ಕೇಂದ್ರ ಸರ್ಕಾರವು 2019 ರ ಫೆಬ್ರವರಿ. 28 ರಂದು 11,000 ಕೋಟಿ ರೂ.ಗಳ ಅಧಿಕ ವೆಚ್ಚದಲ್ಲಿ, 5 ವರ್ಷಗಳ ಕಾಲಾವಕಾಶದಲ್ಲಿ ಈ ಕಾನ್ಪುರ ಮೆಟ್ರೋ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಗಾಗಿ ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (EIB) 650 ಮಿಲಿಯನ್ ಸಾಲವನ್ನು ನೀಡುವದಾಗಿ ತಿಳಿಸದೆ. * ಬಿನಾ-ಪಂಕಿ ಯೋಜನೆ: ಇದು 356-ಕಿಮೀ ಉದ್ದದ ಬಿನಾ-ಪಂಕಿ ಯೋಜನೆಯು ವರ್ಷಕ್ಕೆ 3.45 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ಯೋಜನೆಯು ಮಧ್ಯಪ್ರದೇಶದ ಬಿನಾ ಸಂಸ್ಕರಣಾಗಾರದಿಂದ ಕಾನ್ಪುರದ ಪಂಕಿಯವರೆಗೆ ವಿಸ್ತರಣೆ ಮಾಡಲಾಗುತ್ತದೆ. ಇದನ್ನು ಸರಿ ಸುಮಾರು 1,500 ಕೋಟಿ ರೂ.ಗಳ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.