Job Description: * ಪ್ರಸ್ತುತ 2019-20 ರ ವರ್ಷವನ್ನು ಪರಿಗಣಿಸಿ ನೀತಿ ಆಯೋಗವು 4ನೇ ಸುತ್ತಿನ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. * ಇದೀಗ ನೀತಿ ಆಯೋಗವು ಈ 4 ನೇ ಸುತ್ತಿನ ಸೂಚ್ಯಂಕದ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯದಿಂದ ಹಾಗೂ ವಿಶ್ವಬ್ಯಾಂಕ್‌ನ ತಾಂತ್ರಿಕ ನೆರವಿನೊಂದಿಗೆ ಸಿದ್ಧಪಡಿಸಿದೆ. * ಇದೀಗ ನೀತಿ ಆಯೋಗವು ಸಿದ್ಧಪಡಿಸಿರುವ ಆರೋಗ್ಯ ಸೂಚ್ಯಂಕದ ಪ್ರಕಾರ, ದೊಡ್ಡ ದೊಡ್ಡ ರಾಜ್ಯಗಳಲ್ಲಿನ ಆರೋಗ್ಯ ಕಾರ್ಯಕ್ಷಮತೆಗೆ ಸಂಬಂಧಿಸಿರುವಹಾಗೆ 'ಕೇರಳ ರಾಜ್ಯ'ವು ಅಗ್ರ ಸ್ಥಾನವನ್ನು ಪಡೆದಿದೆ, ಆದರೆ ಉತ್ತರ ಪ್ರದೇಶ ರಾಜ್ಯವು ಈ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. * ಪ್ರಸ್ತುತ 2018-19 ರ ಮೂಲ ವರ್ಷಕ್ಕೆ ಹೋಲಿಸಿ ನೋಡಿದಾಗ 2019-20 ನೇ ವರ್ಷದಲ್ಲಿ ಅತ್ಯಧಿಕ ಹೆಚ್ಚುತ್ತಿರುವ ಬದಲಾವಣೆಯನ್ನು ದಾಖಲಿಸಿರುವ ಹಿನ್ನಲೆಯಿಂದಾಗಿ ಉತ್ತರ ಪ್ರದೇಶ ರಾಜ್ಯದಲ್ಲಿ ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವಿಷಯದ ಅಡಿಯಲ್ಲಿ ಅಗ್ರಸ್ಥಾನ ಪಡೆದಿದೆ. * ನೀತಿ ಆಯೋಗವು ಸಿದ್ಧಪಡಿಸಿರುವ ಆರೋಗ್ಯ ಸೂಚ್ಯಂಕದ ವರದಿಯ ಪ್ರಕಾರ 'ತಮಿಳುನಾಡು' ರಾಜ್ಯವು 2 ನೇ ಸ್ಥಾನ, ತೆಲಂಗಾಣ ರಾಜ್ಯವು 3 ನೇ ಸ್ಥಾನವನ್ನು ಪಡೆದಿವೆ. ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳು ಮೊದಲ 5 ಸ್ಥಾನಗಳಲ್ಲಿವೆ. * ಈ ಸೂಚ್ಯಂಕದ ಪ್ರಕಾರ ಆರೋಗ್ಯ ನಿಯತಾಂಕಗಳಲ್ಲಿ ಕೆಟ್ಟ ಪ್ರದರ್ಶನ ರಾಜ್ಯಗಳ ಪೈಕಿ ಬಿಹಾರ 2 ನೇ ಸ್ಥಾನ, ಹಾಗೂ ಮಧ್ಯಪ್ರದೇಶ 3 ನೇ ಸ್ಥಾನವನ್ನು ಪಡೆದಿವೆ. * ನೀತಿ ಆಯೋಗವು ಸಿದ್ಧಪಡಿಸಿರುವ ಆರೋಗ್ಯ ಸೂಚ್ಯಂಕದ ಪ್ರಕಾರ ಸಣ್ಣ ಸಣ್ಣ ರಾಜ್ಯಗಳಲ್ಲಿನ ಆರೋಗ್ಯ ಕಾರ್ಯಕ್ಷಮತೆಗೆ ಸಂಬಂಧಿಸಿರುವಹಾಗೆ ಮಿಜೋರಾಂ ರಾಜ್ಯವು ಅತ್ಯುತ್ತಮ ಪ್ರದರ್ಶನ ನೀಡಿದೆ. * ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳು ಕೆಳಭಾಗದ ಯುಟಿ(UT)ಗಳಲ್ಲಿ ಸ್ಥಾನ ಪಡೆದಿವೆ, ಅಷ್ಟೇ ಅಲ್ಲದೇ ಹೆಚ್ಚುತ್ತಿರುವ ಕಾರ್ಯಕ್ಷಮತೆಗೆ ಸಂಬಂಧಿಸಿರುವಹಾಗೆ ಪ್ರಮುಖ ಪ್ರದರ್ಶನಕಾರ ಪ್ರದೇಶಗಳಾಗಿ ಹೊರಹೊಮ್ಮಿವೆ. * ಪ್ರಸ್ತುತ ಕೇರಳ ರಾಜ್ಯವು ಆರೋಗ್ಯದ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ 4 ನೇ ಬಾರಿಗೆ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ. * ರಾಜ್ಯದಲ್ಲಿನ ಒಟ್ಟಾರೆ ಕಾರ್ಯಕ್ಷಮತೆ ಹಾಗೂ ಹೆಚ್ಚುತ್ತಿರುವ ಪ್ರದರ್ಶನದ ಹಿತದೃಷ್ಟಿಯಿಂದ ರಾಜಸ್ಥಾನ ರಾಜ್ಯವು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ.