Job Description: * ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಶ್ವ ಸಂಗೀತ ತಾನ್ಸೇನ್ ಉತ್ಸವದ 97 ನೇ ಆವೃತ್ತಿಯನ್ನು ಇದೇ ಡಿಸೆಂಬರ್. 25 ರಂದು ಆರಂಭಿಸಲಾಗಿದೆ, ಈ ವಿಶ್ವ ಸಂಗೀತ ತಾನ್ಸೇನ್ ಉತ್ಸವವು 5 ದಿನಗಳ ಉತ್ಸವವಾಗಿದೆ, ಡಿಸೆಂಬರ್ 25 ರಿಂದ ಆರಂಭವಾಗಿ ಡಿಸೆಂಬರ್. 30 ರಂದು ಮುಕ್ತಾಯಗೊಳ್ಳುತ್ತದೆ. * ಈ ವಿಶ್ವ ಸಂಗೀತ ತಾನ್ಸೇನ್ ಉತ್ಸವದ ವೇದಿಕೆಯನ್ನು ಓಂಕಾರೇಶ್ವರದಲ್ಲಿ ಇರುವಂತಹ 'ಸಿದ್ಧನಾಥ ದೇವಾಲಯ' ಎಂಬ ವಿಷಯದ ಅಡಿಯಲ್ಲಿ ನಿರ್ಮಿಸಲಾಗಿದೆ, ಭಾರತ ಹಾಗೂ ಅನೇಕ ವಿದೇಶಗಳ ಕಲಾವಿದರು ಈ ಸಂಗೀತೋತ್ಸವದಲ್ಲಿ ಪಾಲ್ಗೊಳುತಿದ್ದಾರೆ, ಹಾಗೂ ಈ ಉತ್ಸವದಲ್ಲಿ ಒಟ್ಟಾರೆ '9' ಸಂಗೀತ ಕಛೇರಿಗಳು ನಡೆಯಲಿವೆ. * ಈ ಸಂಗೀತೋತ್ಸವದಲ್ಲಿನ ಮೊದಲ '7' ಸಂಗೀತ ಕಚೇರಿಗಳನ್ನು ವೇದಿಕೆ ಮೇಲೆ ನಡೆಸಲಾಯಿತು, ಈ ವೇದಿಕೆಯನ್ನು ತಾನ್ಸೇನ್ ಸಮಾಧಿ ಹಾಗೂ ಮೊಹಮ್ಮದ್ ಗೌಸ್ ಸಮಾಧಿಯಲ್ಲಿ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಹಾಗೂ 8 ನೇ ಸಂಗೀತ ಕಛೇರಿಯನ್ನು ಡಿಸೆಂಬರ್ 30 ರಂದು ಜಿಲ್ಮಿಲ್ ನದಿ ದಂಡೆಯ ಮೇಲೆ ಆಯೋಜಿಸಲಾಗಿದೆ, ಹಾಗೂ ಇದು ತಾನ್ಸೇನ್ ಅವರ ಜನ್ಮಸ್ಥಳವಾದ ಬೆಹತ್‌ನಲ್ಲಿ ನಡೆಯಲಿದೆ, ಅಂಥಮವಾಗಿ ಡಿಸೆಂಬರ್. 30 ರಂದು ಗ್ವಾಲಿಯರ್ ಕೋಟೆಯಲ್ಲಿ ಕೊನೆಯದಾಗಿ ಸಂಕ್ಷಿಪ್ತ ಸಂಗೀತ ಕಾರ್ಯಕ್ರಮ ಜರುಗಲಿದೆ. * ತಾನ್ಸೇನ್ : ಮಿಯಾನ್ ತಾನ್ ಸೇನ್ ಅಥವಾ ರಾಮತಾನು ಪಾಂಡೆ ಎಂದೂ ಕರೆಯುವ ತಾನ್ಸೇನ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಮುಖ ವ್ಯಕ್ತಿಯಾಗಿದ್ದಾರೆ, ಇವರು ಮಧ್ಯಪ್ರದೇಶದಲ್ಲಿ ತಮ್ಮ ಕಲೆಯನ್ನು ಕಲಿತರು, ಹಾಗೂ ವೃತ್ತಿಜೀವನವನ್ನು ಆರಂಭಿಸಿದರು, ಇವರು ತಮ್ಮ ವಯಸ್ಕ ಜೀವನವನ್ನು ರೇವಾದ ರಾಜ ರಾಜಾ ರಾಮಚಂದ್ರ ಸಿಂಗ್ ಅವರ ಆಶ್ರಯದಲ್ಲಿ ಕಳೆದರು. * ತಾನ್ಸೆನ್ ಅವರ ಸಂಗೀತ ಸಾಮರ್ಥ್ಯಗಳು ಮತ್ತು ಅಧ್ಯಯನಗಳು ನ್ಯಾಯಾಲಯದಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿಕೊಂಡವು, ಇವರ ಈ ಖ್ಯಾತಿಯು ಮೊಘಲ್ ಚಕ್ರವರ್ತಿ ಅಕ್ಬರನ ಗಮನವನ್ನು ತನ್ನ ಕಡೆಗೆ ಎಳೆದುಕೊಂಡಿತು, ಆಗ ಮೊಘಲ್ ಆಸ್ಥಾನದಲ್ಲಿ ಸಂಗೀತಗಾರರನ್ನು ಸೇರಿಸಲು ತಾನ್ಸೇನ್ ಅವರಿಗೆ ವಿನಂತಿ ಮಾಡಿಕೊಂಡರು, ಆಗ 1562 ರಲ್ಲಿ ತಾನ್ಸೇನ್ ಅವರು ಅಕ್ಬರನ ಆಸ್ಥಾನವನ್ನು ಸೇರಿಕೊಂಡರು.