Job Description: * ಜಾಗತಿಕ ಪರಿಸರ ಮತ್ತು ಹವಾಮಾನ ಕ್ರಮ ನಾಗರಿಕ (Global Environment and Climate Action Citizen Award) ಪ್ರಶಸ್ತಿಯನ್ನು ಸೂರತ್‌'ನ ಕೈಗಾರಿಕೋದ್ಯಮಿ ವಿರಲ್ ದೇಸಾಯಿ ಅವರಿಗೆ 2021 ರ ಡಿಸೆಂಬರ್. 23 ರಂದು ದುಬೈನಲ್ಲಿ ಪ್ರಧಾನ ಮಾಡಲಾಗಿದೆ. * ಪ್ರಸ್ತುತ ಪರಿಸರದ ಮೇಲಿನ ಪ್ರೀತಿಯಿಂದಾಗಿ ವಿರಲ್ ದೇಸಾಯಿ ಅವರು ಗ್ರೀನ್‌ಮ್ಯಾನ್ ಎಂದು ಜನಪ್ರಿಯರಾಗಿದ್ದಾರೆ. ಹಾಗೂ ಸಂಸ್ಕೃತಿ ಯುವ ಸಂಸ್ಥಾನವು ದುಬೈನ ಅಟ್ಲಾಂಟಿಸ್ ದಿ ಪಾಮ್‌ನಲ್ಲಿ ವೈರಲ್ ದೇಸಾಯಿ ಹಾಗೂ 11 ದೇಶಗಳ 28 ಪ್ರಮುಖ ವ್ಯಕ್ತಿಗಳಿಗೆ "ಭಾರತ ಗೌರವ್ ಸಮ್ಮಾನ್" ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. * ಪ್ರಸ್ತುತ ಹವಾಮಾನ ಕ್ರಮಕ್ಕಾಗಿ ಗೌರವವನ್ನು ಪಡೆದ ಏಕೈಕ ಭಾರತೀಯ ವ್ಯಕ್ತಿ ವೈರಾಲ್ ದೇಸಾಯಿಯವರಾಗಿದ್ದಾರೆ. * ಗ್ಲೋಬಲ್ ಎನ್ವಿರಾನ್ಮೆಂಟಲ್ ಸಿಟಿಜನ್ ಪ್ರಶಸ್ತಿ: ಇದನ್ನು 'ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಸೆಂಟರ್ ಫಾರ್ ಹೆಲ್ತ್ ಅಂಡ್ ಗ್ಲೋಬಲ್ ಎನ್ವಿರಾನ್ಮೆಂಟ್' ಸ್ಥಾಪಿಸಿರುವ ಪರಿಸರ ಪ್ರಶಸ್ತಿ ಇದಾಗಿದೆ. ಪ್ರಸ್ತುತ ಈ ಪ್ರಶಸ್ತಿಯನ್ನು ಜಾಗತಿಕ ಪರಿಸರವನ್ನು ಪುನಃಸ್ಥಾಪಿಸಲು ಹಾಗೂ ರಕ್ಷಿಸಲು ಶ್ರಮಿಸುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ಪ್ರಧಾನ ಮಾಡಲಾಗುತ್ತದೆ. * ಪ್ರಸ್ತುತ ಈ ಹಾರ್ವರ್ಡ್ ಟಿ.ಹೆಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಮ್ಮ ಆರೋಗ್ಯವು ಪರಿಸರದ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಆರೋಗ್ಯ ಮತ್ತು ಜಾಗತಿಕ ಪರಿಸರ ಕೇಂದ್ರವು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ 1996 ರಲ್ಲಿ ಜಾಗತಿಕ ಪರಿಸರ ಬದಲಾವಣೆಗಳಿಂದ ಮಾನವನ ಆರೋಗ್ಯದ ಪರಿಣಾಮಗಳ ತಿಳುವಳಿಕೆಗೆ ಉತ್ತೇಜನ ನೀಡಲು ಈ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ.