Job Description: * ಪ್ರಸ್ತುತ ಚೀನಾ ದೇಶದಿಂದ ಉತ್ಪನ್ನಗಳ ಆಮದು ಮಾಡಿಕೊಳ್ಳುವದನ್ನು ತಡೆಯುವ ಸಲುವಾಗಿ, ಇದೀಗ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ, ಪ್ರಸ್ತುತ ಅಲ್ಯುಮಿನಿಯಂ, ರಾಸಾಯನಿಕ ಉತ್ಪನ್ನಗಳು ಸೇರಿ ಒಟ್ಟಾರೆ ಐದು(5) ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಆಯಂಟಿ ಡಂಪಿಂಗ್‌ ಸುಂಕವನ್ನು ಹೇರಿದೆ. * ಇದರ ಅಡಿಯಲ್ಲಿ ಚೀನಾ ದೇಶದ ಉತ್ಪನ್ನಗಳ ಮೇಲೆ ಕೇಂದ್ರವು ಪರೋಕ್ಷ ತೆರಿಗೆಗಳ ಮಂಡಳಿ ಹಾಗೂ ಕಸ್ಟಮ್ಸ್‌ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ, ಅಷ್ಟೇ ಅಲ್ಲದೇ ಈ ಆದೇಶವು ಮುಂಬರುವ '5' ವರ್ಷಗಳವರೆಗೆ ಇರಲಿದೆ. ಪ್ರಸ್ತುತ ಸೋಡಿಯಂ ಹೈಡ್ರೋಸಲ್ಫೆಟ್‌, ಸೌರ ವಿದ್ಯುತ್‌ ಕೋಶಗಳನ್ನು, ಉಷ್ಣ ವಿದ್ಯುತ್‌ ಸ್ಥಾವರಗಳ ನಿರ್ಮಾಣಕ್ಕೆ ಅಗತ್ಯವಿರುವ ಸಿಲಿಕಾನ್‌ ಸೀಲಂಟ್‌, ಹೈಡ್ರೋಫ್ಲೊರೋ ಕಾರ್ಬನ್‌, ಶೀತಲೀಕರಣ ವ್ಯವಸ್ಥೆಗಳ ನಿರ್ಮಾಣ ಹಂತದಲ್ಲಿ ಬಳಸುವ ಹೈಡ್ರೋಫ್ಲೊರೋ ಕಾರ್ಬನ್‌ ಬ್ಲೆಂಡ್‌ಗಳ ಮೇಲೆ ಇದೀಗ ಕೇಂದ್ರ ಸರ್ಕಾರವು ಆಯಂಟಿ ಡಂಪಿಂಗ್‌ ಸುಂಕವನ್ನು ಹೇರಿದೆ. * ಪ್ರಸ್ತುತ ಕೇಂದ್ರ ಸರ್ಕಾರವು ಈ ಆಯಂಟಿ ಡಂಪಿಂಗ್‌ ಸುಂಕವನ್ನು ಹೇರುವ ನಿರ್ಧಾರವನ್ನು ಕೇಂದ್ರ ವಾಣಿಜ್ಯ ಸಚಿವಾಲಯದ ಡೈರೆಕ್ಟೊರೇಟ್‌ ಜನರಲ್‌ ಆಫ್ ಟ್ರೇಡ್‌ ರೆಮೆಡೀಸ್‌ ನಡೆಸಿರುವ ತನಿಖೆಯ ಆಧಾರದಲ್ಲಿ ಮೇಲೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.