Job Description: * ಇತ್ತೀಚಿಗೆ ಜನತಾ ದಳದ(ಯುನೈಟೆಡ್) ರಾಜ್ಯಸಭಾ ಸಂಸದ ಹಾಗೂ ಕೈಗಾರಿಕೋದ್ಯಮಿಯಾಗಿದ್ದ ಮಹೇಂದ್ರ ಪ್ರಸಾದ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ವಿಧಿವಶರಾಗಿದ್ದಾರೆ, ಇವರು ಬಿಹಾರ ರಾಜ್ಯದಿಂದ '7' ಬಾರಿ ರಾಜ್ಯಸಭಾ ಸಂಸದರಾಗಿದ್ದರು ಒಂದು ಬಾರಿ ಲೋಕಸಭೆಗೆ ಚುನಾಯಿತರಾಗಿದ್ದರು. * ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹೇಂದ್ರ ಪ್ರಸಾದ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಹಿಂದೆ 1980 ರಲ್ಲಿ ಪ್ರಸಾದ್ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾದರು. ನಂತರದ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸಿದ ಹಿನ್ನಲೆಯಿಂದಾಗಿ ಜನತಾ ದಳ ಸಂಯುಕ್ತ ಪಕ್ಷಕ್ಕೆ ಸೇರಿಕೊಂಡರು. * ಪ್ರಸಾದ್ ಅವರು 1940 ರ ಜನೇವರಿ. 08 ರಂದು ಬಿಹಾರ್ ರಾಜ್ಯದ ಗೋವಿಂದಪುರದಲ್ಲಿ ಜನಿಸಿದ್ದಾರೆ, ಇವರು ಬಿಹಾರ ಅರಿಸ್ಟೊ ಫಾರ್ಮಾಸ್ಯುಟಿಕಲ್ಸ್ ಮತ್ತು ಮಾಪ್ರಾ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಎರಡು ಔಷಧೀಯ ಕಂಪನಿಗಳನ್ನು ಹೊಂದಿದ್ದಾರೆ.