Job Description: * ಸದ್ಯ ಅಫ್ಗಾನಿಸ್ತಾನದಲ್ಲಿ ಅಧಿಕಾರವನ್ನು ತನ್ನ ಹಿಡಿತಕ್ಕೆ ತಗೆದುಕೊಂಡಿರುವ ತಾಲಿಬಾನ್ ಸರ್ಕಾರವು, ಇದೀಗ ಅಫ್ಗಾನಿಸ್ತಾನದಲ್ಲಿನ ಚುನಾವಣಾ ಆಯೋಗಗಳು ಮತ್ತು ಶಾಂತಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯವನ್ನು ವಿಸರ್ಜಿಸಲಾಗಿದೆ ಎಂದು ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ. * ತಾಲಿಬಾನ್ ಸರ್ಕಾರದ ಉಪ ವಕ್ತಾರ ಬಿಲಾಲ್ ಕರೀಮಿ ಅವರು ಹೇಳಿಕೆ ನೀಡಿರುವ ಪ್ರಕಾರ ಅಫ್ಗಾನಿಸ್ತಾನದ ಈ ಸಚಿವಾಲಯಗಳು ಸದ್ಯ ಅಗತ್ಯವಿಲ್ಲದ ಸಂಸ್ಥೆಗಳಾಗಿವೆ ಎಂದಿದ್ದಾರೆ, ಹಾಗೂ ಭವಿಷ್ಯದಲ್ಲಿ ಈ ಸಚಿವಾಲಯಗಳನ್ನು ಅಗತ್ಯವಿದೆರೆ ತಾಲಿಬಾನ್ ಸರ್ಕಾರವು ಪುನಃ ಸ್ಥಾಪಿಸಲಿದೆ. * ಈ ಹಿಂದೆ ಅಗಸ್ಟ್‌ನಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ತಾಲಿಬಾನ್ ಸರ್ಕಾರವು ತನ್ನ ಹಿಡಿತಕ್ಕೆ ಪಡೆದುಕೊಂಡಿದೆ, ತಾಲಿಬಾನ್‌ ಸರ್ಕಾರವು 20 ವರ್ಷಗಳ ಹಿಂದೆ ಅಂದರೆ 1996 ರಿಂದ 2001 ರವರೆಗೆ ಆಡಳಿತದ ಸಂಧರ್ಭಗಳಲ್ಲಿ ಹಲವು ಕಠಿಣ ನೀತಿಗಳನ್ನು ಹೇರಿತ್ತು. * ಅಫ್ಘಾನಿಸ್ತಾನ: ಅಧಿಕೃತವಾಗಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ ಎಂದು ಕರೆಯಲಾಗುತ್ತದೆ, ಈ ದೇಶವು ಮಧ್ಯ ಮತ್ತು ದಕ್ಷಿಣ ಏಷ್ಯಾದ ಕ್ರಾಸ್‌ರೋಡ್ಸ್‌ನಲ್ಲಿರುವ ಭೂಕುಸಿತವಾಗಿರುವ ದೇಶವಾಗಿದೆ, ಈ ದೇಶವು ಪೂರ್ವ ಹಾಗೂ ದಕ್ಷಿಣಕ್ಕೆ ಪಾಕಿಸ್ತಾನ ಹಂಚಿಕೊಂಡಿದೆ, ಪಶ್ಚಿಮಕ್ಕೆ ಇರಾನ್, ಉತ್ತರಕ್ಕೆ ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮತ್ತು ಈಶಾನ್ಯದಲ್ಲಿ ತಜಿಕಿಸ್ತಾನ್ ಮತ್ತು ಚೀನಾ ದೇಶಗಳೊಂದಿಗೆ ಗಡಿಯನ್ನು ಹಂಚ್ಕೊಂಡಿದೆ. * ಕಾಬೂಲ್ ಆಫ್ಘಾನಿಸ್ತಾನ್ ರಾಜಧಾನಿಯಾಗಿದೆ, ಮತ್ತು ಅಫ್ಘಾನ್ ಅಫ್ಘಾನಿ ಇದು ಆಫ್ಘಾನಿಸ್ತಾನದ ಕರೆನ್ಸಿಯಾಗಿದೆ, ಸದ್ಯ ಆಫ್ಘಾನಿಸ್ತಾನ್ 2020 ರ ವೇಳೆಗೆ 3.89 ಕೋಟಿ ಜನಸಂಖ್ಯೆ ಹೊಂದಿದೆ.