Job Description: * ಪ್ರಸ್ತುತ ಕರ್ನಾಟಕ ರಾಜ್ಯದ ಬೆಂಗಳೂರಿನ BMTC ಯಲ್ಲಿ ಇದೀಗ ಎಲೆಕ್ಟ್ರಿಕ್ ಬಸ್ ಗಳ ಸಂಚಾರ (BMTC Electric Bus) ಸೇವೆಗೆ ಚಾಲನೆಯನ್ನು ನೀಡಲಾಗಿದೆ. ಇದೀಗ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ಬೆಂಗಳೂರು ಮಹಾನಗರ ಸಾರಿಗೆ(BMTC) ಸಂಸ್ಥೆಯ ನೂತನ ಮೆಟ್ರೋ ಪೀಡರ್ ಎಲೆಕ್ಟ್ರಿಕ್ ಬಸ್ ಹಾಗೂ ಬಿಎಸ್-6 ಡಿಸೇಲ್ ಬಸ್ಸುಗಳಿಗೆ ಚಾಲನೆಯನ್ನು ನೀಡಲಾಗಿದೆ. * ಇದೀಗ ಕರ್ನಾಟಕ ರಾಜ್ಯದಲ್ಲಿನ ಎಲೆಕ್ಟ್ರಿಕ್‌ ಬಸ್ಸುಗಳು ವಾಯುಮಾಲಿನ್ಯ ರಹಿತ, ಹಾಗೂ ಪರಿಸರ ಸ್ನೇಹಿಯಾಗಿವೆ. ಇದೀಗ ಬೆಂಗಳೂರು ಸ್ಮಾರ್ಟ್‌ ಸಿಟಿಯಿಂದ ಎಲೆಕ್ಟ್ರಿಕ್‌ ಬಸ್ಸುಗಳ ನಿಯೋಜನೆಗೆ ರೂ.50.00 ಕೋಟಿ ಅನುದಾನ ನೀಡಲಾಗಿದೆ, ಮತ್ತು ಸ್ಮಾರ್ಟ್‌ ಸಿಟಿ ಯೋಜನೆಅಡಿಯಲ್ಲಿ 90 ಎಲೆಕ್ಟ್ರಿಕ್‌ ಬಸ್'ಗಳನ್ನು GCC ಆಧಾರದ ಮೇರೆಗೆ ಮೆಟ್ರೋ ಪ್ರಯಾಣಿಕರಿಗೆ ಮೊದಲ ಮತ್ತು ಕೊನೆಯ ಸ್ಥಳಕ್ಕೆ ತಲುಪಲು ಸಹಾಯವಾಗುವಂತೆ ಮೆಟ್ರೋ ಫೀಡರ್‌ ಸಾರಿಗೆಗಳಾಗಿ ಈ ಬಸ್'ಗಳು ಕಾರ್ಯಾ ನಿರ್ವಹಿಸಲಿವೆ. * ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ NTPC ವಿದ್ಯುತ್‌ ವ್ಯಾಪಾರ್‌ ನಿಗಮ ನಿಯಮಿತವು ಈ ಎಲೆಕ್ಟ್ರಿಕಲ್ ಬಸ್ಸುಗಳನ್ನು 10 ವರ್ಷಗಳ ಅವಧಿಗೆ Gross Cost Contract ಆಧಾರದ ಮೇರೆಗೆ ಕಾರ್ಯಾ ನಿರ್ವಹಿಸಲಿವೆ, ಈ ಬಸ್ ಗಳು ಪ್ರತಿ ದಿನ 180 ಕಿ.ಮೀ. ಆಚರಣೆಗೆ ಪ್ರತಿ ಕಿ.ಮೀ. 51.67 ರೂ. ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. * ಸದ್ಯ ಕರ್ನಾಟಕ ಸರ್ಕಾರದ ಅನುದಾನದ ಮೇರೆಗೆ, ಸಂಸ್ಥೆಯು 191.00 ಕೋಟಿ ರೂ. ವೆಚ್ಚದಲ್ಲಿ 565 BS-VI ಬಸ್ಸುಗಳನ್ನು ಖರೀದಿಸಲಾಗಿದೆ, ಸದ್ಯ ಈ 30 ಎಲೆಕ್ಟ್ರಿಕಲ್ ಬಸ್'ಗಳು ಬೆಂಗಳೂರಿನ ಕೆಂಗೇರಿ ಘಟಕ, ಯಶವಂತಪುರ ಘಟಕ, ಮತ್ತು ಕೆ.ಆರ್.ಪುರಂ ಘಟಕಗಳಿಂದ ಕಾರ್ಯಾಚರಿಸಲಿವೆ ಎಂದು ತಿಳಿಸಿದ್ದಾರೆ. * ಇದೀಗ ಕಾರ್ಮಿಕ ಇಲಾಖೆ ಹಾಗೂ ಬೆಂ.ಮ.ಸಾ. ಸಂಸ್ಥೆಯು ಇದೇ 2022 ರ ಜನೇವರಿ. 01 ರಿಂದ 1 ಲಕ್ಷ ಮಹಿಳಾ ಗಾರ್ಮೆಂಟ್ಸ್‌ ಕಾರ್ಮಿಕರಿಗೆ "ವನಿತಾ ಸಂಗಾತಿ" ಪಾಸುಗಳನ್ನು ವಿತರಣೆ ಮಾಡಲಾಗುತ್ತದೆ, ಈ ಪಾಸುಗಳ 40% ವೆಚ್ಚವನ್ನು ಗಾರ್ಮೆಂಟ್‌ ಕಾರ್ಖಾನೆ ಮಾಲೀಕರು, ಹಾಗೂ 40% ವೆಚ್ಚವನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಹಾಗೂ ಇನ್ನಉಳಿದ 20% ವೆಚ್ಚವನ್ನು ಬೆಂ.ಮ.ಸಾ.ಸಂಸ್ಥೆ ಭರಿಸಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಭಾರತ ಸರ್ಕಾರದ ಫೇಮ್-2‌ (FAME-II) ಯೋಜನೆಯಡಿ ಸುಮಾರು 300 ಎಲೆಕ್ಟ್ರಿಕ್‌ ಬಸ್ಸುಗಳನ್ನು 2022‌ ಸಪ್ಟೆಂಬರ್ ವೇಳೆಗೆ GCC ಆಧಾರದ ಅಡಿಯಲ್ಲಿ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗುತ್ತದೆ.