Job Description: * ಪ್ರಸ್ತುತ ಸೊಮಾಲಿಯಾದ ದೇಶದ ಅಧ್ಯಕ್ಷರಾಗಿರುವ ಮುಹಮ್ಮದ್ ಅಬ್ದುಲ್ಲಾಹಿ ಅವರು ಪ್ರಧಾನಿ ಮುಹಮ್ಮದ್ ಹುಸೇನಿ ರೊಬೆಲ್ ಅವರ ಅಧಿಕಾರಗಳನ್ನು ಭ್ರಷ್ಟಾಚಾರದ ಹಿನ್ನಲೆಯಿಂದಾಗಿ ವಜಾಗೊಳಿಸಲಾಗಿದೆ ಎಂದು ಅವರೇ ತಿಳಿಸಿದ್ದಾರೆ. ದೇಶದ ಸಹಾಯಕ ಮಾಹಿತಿ ಸಚಿವರು ನೀಡಿರುವ ಭ್ರಷ್ಟಾಚಾರ ತನಿಖೆಯ ಮಧ್ಯೆ ಈ ಘಟನೆ ಜರುಗಿದೆ ಎನ್ನಲಾಗಿದೆ. * ಪ್ರಸ್ತುತ ಸೊಮಾಲಿ ನ್ಯಾಷನಲ್ ಆರ್ಮಿ ಒಡೆತನಕ್ಕೆ ಸೇರಿರುವ ಸರಕಾರಿ ಜಮೀನನ್ನು ರೋಬೆಲ್ ಅವರು ಲೂಟಿ ಮಾಡಿದ್ದಾರೆ, ಅಷ್ಟೇ ಅಲ್ಲದೇ ರಕ್ಷಣಾ ಸಚಿವಾಲಯದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರುವ ಹಿನ್ನಲೆಯಿಂದ ಇವರನ್ನು ಆರೋಪಿಸಿ ಉಚ್ಛಾಟಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇದೀಗ ಪ್ರಧಾನಿಯ ಅಧಿಕಾರವನ್ನು ಉಚ್ಛಾಟಣೆಯಾದರು ಉಳಿದೆಲ್ಲ ಸಚಿವರು ತಮ್ಮ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. * ಇದಷ್ಟೇ ಅಲ್ಲದೇ ನೌಕಾ ಪಡೆಯ ಕಮಾಂಡರ್ ಜನರ್ ಅಬ್ದಿಹಮೀದ್ ಮೊಹಮ್ಮದ್ ದಿರಿರ್ ಅವರನ್ನು ತಮ್ಮ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. * ಸೊಮಾಲಿಯಾವನ್ನು ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಸೊಮಾಲಿಯಾ ಎಂದು ಕರೆಯಲಾಗುತ್ತದೆ, ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಒಂದು ದೇಶವಾಗಿದೆ. ಈ ದೇಶವು ಪಶ್ಚಿಮಕ್ಕೆ ಇಥಿಯೋಪಿಯಾ, ವಾಯುವ್ಯಕ್ಕೆ ಜಿಬೌಟಿ, ಉತ್ತರಕ್ಕೆ ಏಡೆನ್ ಕೊಲ್ಲಿ, ಪೂರ್ವಕ್ಕೆ ಹಿಂದೂ ಮಹಾಸಾಗರ ಮತ್ತು ನೈಋತ್ಯಕ್ಕೆ ಕೀನ್ಯಾದೇಶದ ಗಡಿಯನ್ನು ಹಂಚಿಕೊಂಡಿದೆ. ಪ್ರಸ್ತುತ ಆಫ್ರಿಕಾದ ಮುಖ್ಯ ಭೂಭಾಗದಲ್ಲಿ ಅತಿ ಉದ್ದದ ಕರಾವಳಿಯನ್ನು ಹೊಂದಿದೆ ದೇಶ ಸೋಮಾಲಿಯಾ. * ಪ್ರಸ್ತುತ ಸೋಮಾಲಿಯಾ ಪ್ರಧಾನ ಮಂತ್ರಿ: ಮೊಹಮ್ಮದ್ ಹುಸೇನ್ ರೋಬಲ್, ಇದೀಗ ಇವರನ್ನೇ ಉಚ್ಛಾಟಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ. * ಮೊಗಾದಿಶು ಎಂಬುವದು ಸೊಮಾಲಿಯಾದ ರಾಜಧಾನಿಯಾಗಿದೆ, ಹಾಗೂ ಈ ದೇಶವು ಸೊಮಾಲಿ ಶಿಲ್ಲಿಂಗ್ ಎಂಬ ಕರೆನ್ಸಿಯನ್ನು ಹೊಂದಿದೆ, ಸದ್ಯ ಈ ದೇಶವು 2020 ರ ವೇಳೆಗೆ 1.59 ಕೋಟಿ ಜನಸಂಖ್ಯೆಯನ್ನು ಹೊಂದಿದೆ. * ಪ್ರಸ್ತುತ ಸೋಮಾಲಿಯಾ ಅಧ್ಯಕ್ಷರು: ಮೊಹಮ್ಮದ್ ಅಬ್ದುಲ್ಲಾಹಿ ಫರ್ಮಾಜೊ