Job Description: * ಪ್ರಸ್ತುತ ರಣಜಿ ಟ್ರೋಫಿ ಟೂರ್ನಿಯು ಇದೇ ಜನೇವರಿ. 13 ರಿಂದ ಮಾರ್ಚ್ 20 ರವರೆಗೆ ನಡೆಯಲಿವೆ, ಈ ಹಿಂದಿನ ವರ್ಷ ಕೊರೊನಾ ವೈರಸ್ ಕಾರಣಗಳಿಂದಾಗಿ ಈ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಪ್ರಸ್ತುತ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಬೆಂಗಳೂರು, ಹಾಗೂ ಕೋಲ್ಕತ್ತದಲ್ಲಿ ಪಂದ್ಯಗಳು ಜರುಗಲಿವೆ. * ಈ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವು 'ಸಿ' ಗುಂಪಿನಲ್ಲಿ ಮೂಲಕ ಮೈದಾನಕ್ಕಿಳಿಯಲಿದೆ. ಇದೇ ಗುಂಪಿನಲ್ಲಿರುವ ಉತ್ತರಾಖಂಡ, ಹೈದರಾಬಾದ್, ಮಹಾರಾಷ್ಟ್ರ, ಮುಂಬೈ ಮತ್ತು ದೆಹಲಿ ತಂಡಗಳಿವೆ. ಈ 'ಸಿ' ಗುಂಪಿನ ಪಂದ್ಯಗಳು ಕೋಲ್ಕತ್ತದಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ. * ಈ ರಣಜಿ ಟ್ರೋಫಿಯಲ್ಲಿ ಒಟ್ಟು 38 ತಂಡಗಳು ಆಡಲಿವೆ, ಅವುಗಳಿಗಾಗಿ 177 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. * ಈ ಹಿಂದಿನ ವರ್ಷ ಅಂದರೆ 2019-20 ರಲ್ಲಿ ಸೌರಾಷ್ಟ್ರ ತಂಡವು ಚಾಂಪಿಯನ್, ಹಾಗೂ ಬಂಗಾಳ ತಂಡವು ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದ್ದವು. * ರಣಜಿ ಟ್ರೋಫಿ: ಪ್ರಸ್ತುತ ಭಾರತದಲ್ಲಿ ಪ್ರಾದೇಶಿಕ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಪ್ರತಿನಿಧಿಸುವ ಬಹು ತಂಡಗಳ ನಡುವೆ ನಡೆಯುವ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ ಚಾಂಪಿಯನ್‌ಶಿಪ್ ಇದಾಗಿದೆ. ಈ ರಣಜಿ ಟ್ರೋಫಿ ಸ್ಪರ್ಧೆಯು ಒಟ್ಟಾರೆ 38 ತಂಡಗಳನ್ನು ಹೊಂದಿರಲಿದೆ, ಭಾರತದಲ್ಲಿನ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ 4 ಕನಿಷ್ಠ ಒಂದು ಪ್ರಾತಿನಿಧ್ಯವನ್ನು ಹೊಂದಿದೆ. * ಪ್ರಸ್ತುತ ಈ ರಣಜಿ ಟ್ರೋಪಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ರಂಜಿತ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. * 1934 ರ ಜುಲೈ ನಲ್ಲಿ ನಡೆದ ಸಭೆಯ ನಂತರ ಸ್ಪರ್ಧೆಯನ್ನು ಆರಂಭಿಸಲಾಗಿದೆ, ಮೊದಲ ಬಾರಿ 1934-35 ರಲ್ಲಿ ಪಂದ್ಯಗಳುನ್ನು ಆಡಿಸಲಾಗಿದೆ. ಈ ಸ್ಪರ್ಧೆಗೆ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಅವರು ಟ್ರೋಫಿಯನ್ನು ದಾನ ಮಾಡಿದ್ದಾರೆ. ಈ ರಣಜಿ ಟ್ರೋಪಿಯ ಮೊದಲ ಪಂದ್ಯವು 1934 ರನವೆಂಬರ್. 04 ರಂದು ಮದ್ರಾಸ್ ಹಾಗೂ ಮೈಸೂರು ತಂಡಗಳ ನಡುವೆ ಮದ್ರಾಸಿನ ಚೆಪಾಕ್ ಮೈದಾನದಲ್ಲಿ ನಡೆಯಿತು, ಪ್ರಸ್ತುತ ಮುಂಬೈ (ಬಾಂಬೆ) ತಂಡವು 1958-59 ರಿಂದ 1972-73 ರವರೆಗಿನ 15 ಬಾರಿ ಬ್ಯಾಕ್-ಟು-ಬ್ಯಾಕ್ ಗೆಲುವುಗಳು ಸಾಧಿಸಿದೆ ಒಟ್ಟಾರೆ 41 ಬಾರಿ ಜಯಗಳಿಸಿದೆ, ಈ ಮುಂಬೈ ತಂಡವು ಅತಿ ಹೆಚ್ಚು ಬಾರಿ ಈ ಟ್ರೋಪಿಯನ್ನು ಗೆದ್ದಿದೆ.