Job Description: * ಪ್ರತಿ ನಿತ್ಯವು ಕೆಲಸಗಳಲ್ಲಿ ತಮ್ಮನು ತೊಡಗಿಸಿಕೊಳ್ಳುವ ಕಾರ್ಮಿಕ ವರ್ಗದ ಜನರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದ ಕಾರಣದಿಂದಾಗಿ ಅದೆಷ್ಟೋ ಸಮಸ್ಯೆಗಳನ್ನು ಉಂಟಾಗುತ್ತಿವೆ, ಇದೀಗ ಕಾರ್ಮಿಕರ ಕಷ್ಟ ಅರಿತ ಕಾರ್ಮಿಕ ಇಲಾಖೆಯ ಸಚಿವ ಶಿವರಾಂ ಹೆಬ್ಬಾರ್ ಈ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಅವರಿಗಾಗಿ "ಶ್ರಮಿಕ್ ಸಂಜೀವಿನಿ" ಯೋಜನೆಯನ್ನು ಜಾರಿಗೆ ತಂದಿದ್ದಾರೆ. * ಪ್ರಸ್ತುತ ಕಾರ್ಮಿಕ ಇಲಾಖೆಯು ಸದ್ಯ ಮೂರು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದೆ. * ಈ 'ಶ್ರಮಿಕ್ ಸಂಜೀವಿನಿ' ಯೋಜನೆ ಅಡಿ ಜಾರಿಯಾಗಿರುವ ಅತ್ಯಾಧುನಿಕ ಸಂಚಾರಿ ಕ್ಲಿನಿಕ್ ಗಳು ಶ್ರಮಿಕರು(ಕಾರ್ಮಿಕರು) ಇರುವ ಸ್ಥಳಗಳಿಗೆ ಹೋಗಿ ಅಲ್ಲಿರುವ ಕಾರ್ಮಿಕರ ಆರೋಗ್ಯ ಪರೀಕ್ಷೆ ಮಾಡಲಿದೆ, ಹಾಗು ಅವರಿಗೆ ಅಗತ್ಯವಿರುವ ಸಲಹೆಗಳನ್ನು ನೀಡುತ್ತವೆ ಹಾಗು ಈ ಅತ್ಯಾಧುನಿಕ ಸಂಚಾರಿ ಕ್ಲಿನಿಕ್'ಗಳು ಸೋಮವಾರ ದಿಂದ ಶನಿವಾರದವರೆಗೆ ಕಾರ್ಮಿಕರಿರುವ ಪ್ರದೇಶಗಳಿಗೆ ಭೇಟಿ ಸೇವೆಯನ್ನು ನೀಡಲಿದೆ. * ಪ್ರಸ್ತುತ ಕಾರ್ಮಿಕ ಇಲಾಖೆಯು ಈ ಸಂಚಾರಿ ಕ್ಲಿನಿಕ್ ಸೇವೆಯನ್ನು ಪ್ರಾರಂಭದಲ್ಲಿ ಬೆಳಗಾವಿ ವಿಭಾಗದಲ್ಲಿ ಬರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಈ 'ಶ್ರಮಿಕ್ ಸಂಜೀವಿನಿ' ಯೋಜನೆಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ. ಈ ಯೋಜನೆ ಅಡಿಯಲ್ಲಿ ನೋಂದಾಯಿತ ಎಲ್ಲ ಕಟ್ಟಡ ಕಾರ್ಮಿಕರು ಹಾಗೂ ಅವರನ್ನು ಅವಲಂಭಿಸಿರುವವರಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆಯನ್ನು ಕಲ್ಪಿಸಲಿದೆ ಎಂದಿದ್ದಾರೆ. * ಈ ಶ್ರಮಿಕ್ ಸಂಜೀವಿನಿ ಸೇವೆಯನ್ನು ತುರ್ತು ಸಂದರ್ಭಗಳಲ್ಲಿ ಈ ಸಹಾಯವಾಣಿಗೆ 155214 ಗೆ ಕರೆ ಮಾಡಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ, ಇದೀಗ ಈ ಯೋಜನೆಯ ತುರ್ತಾಗಿ ಜಾರಿಗೆ ತರಲಿದೆ ಎಂದಿದ್ದಾರೆ.