Job Description: * ಪ್ರಸ್ತುತ ಆಸ್ಟ್ರೇಲಿಯಾದ ಟ್ಯಾಸ್ಮೆನಿಯನ್ ಎಂಬ ಕರಾವಳಿ ಪ್ರದೇಶದಲ್ಲಿ ಸುಮಾರು 22 ವರ್ಷಗಳಲ್ಲಿ ಮೊದಲ ಬಾರಿಗೆ ಈ ಅಪರೂಪದ 'ನಡೆದಾಡುವ ಹ್ಯಾಂಡ್‌ಫಿಶ್(handfish)' ಪತ್ತೆಯಾಗಿದೆ. * ಈ ಹಿಂದೆ 1999 ರಲ್ಲಿ ಗುಲಾಬಿ ಹ್ಯಾಂಡ್‌ಫಿಶ್ (pink handfish) ಟ್ಯಾಸ್ಮೆನಿಯಾದಲ್ಲಿ ಕೊನೆಯದಾಗಿ ಪತ್ತೆಯಾಗಿತ್ತು, ಈ ಮೀನು ಕೇವಲ ನಾಲ್ಕು ಬಾರಿ ಮಾತ್ರ ಕಾಣಿಸಿಕೊಂಡಿದೆ, ಇತ್ತೀಚಿಗೆ ಟ್ಯಾಸ್ಮನ್ ಫ್ರಾಕ್ಚರ್ ಮೆರೈನ್ ಪಾರ್ಕ್‌ನಲ್ಲಿ ತೆಗೆಯಲಾಗಿರುವ ಆಳವಾದ ಸಮುದ್ರದ ಕ್ಯಾಮೆರಾ ರೆಕಾರ್ಡಿಂಗ್‌ನಲ್ಲಿ ಈ ಅಪರೂಪದ ಮೀನು ಪತ್ತೆಯಾಗಿದೆ ಎಂದು ಆಸ್ಟ್ರೇಲಿಯಾದ ಸಂಶೋಧಕರು ಮಾಹಿತಿ ನೀಡಿದ್ದಾರೆ. * ಈ ಹ್ಯಾಂಡ್‌ಫಿಶ್ (handfish)ನ್ನು ಅಳಿವಿನಂಚಿನಲ್ಲಿರುವ ಮೀನು ಎಂದು ಗುರುತಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದರು. * ಇತ್ತೀಚಿಗೆ ಈ ಮೀನು ಟ್ಯಾಸ್ಮೆನಿಯಾದ ದಕ್ಷಿಣ ಕರಾವಳಿಯಲ್ಲಿ 120 ಮೀಟರ್ ಆಳದಲ್ಲಿ ಪತ್ತೆಯಾಗಿದೆ, ಈ ಜಾತಿಯು ಹೆಚ್ಚು ಗಾತ್ರದ ಕೈಗಳನ್ನು ಹೊಂದಿದೆ ಅವುಗಳನ್ನು ಬಳಸಿ ಮೀನು ಸಮುದ್ರತಳದ ಉದ್ದಕ್ಕೂ ನಡೆಯುತ್ತದೆ, ಹಾಗೂ ಈಜುತ್ತವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯದ ಅಂಟಾರ್ಕ್ಟಿಕ್ ಮತ್ತು ಸಾಗರ ಅಧ್ಯಯನಗಳ ಸಂಸ್ಥೆಯ ವತಿಯಿಂದ ಪ್ರೊಫೆಸರ್ 'ನೆವಿಲ್ಲೆ ಬ್ಯಾರೆಟ್' ಹಾಗೂ ಅವರ ತಂಡವು ಸಾಗರ ಉದ್ಯಾನವನದ ಸಮುದ್ರತಳದ ಮೇಲೆ ಬೈಟೆಡ್ ಕ್ಯಾಮೆರಾವನ್ನು ಹವಳ ಮತ್ತು ಮೀನು ಪ್ರಭೇದಗಳನ್ನು ಸಮೀಕ್ಷೆ ಮಾಡಲು ಇಡಲಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.