Job Description: * ಪ್ರಸ್ತುತ ಭಾರತೀಯ ಮೂಲದವರಾದ ನರೇಂದ್ರನ್ ಜೋಡಿ ಕೊಲ್ಲಪೆನ್(Narandran Jody Kollapen) ಅವರನ್ನು ಇದೀಗ ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಪೀಠವಾಗಿರುವ ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿದೆ. * ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿರುವ ಸಿರಿಲ್ ರಾಮಫೋಸಾ ಅವರು ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ಹೊಸದಾಗಿ ನರೇಂದ್ರನ್ ಜೋಡಿ ಕೊಲ್ಲಪೆನ್ ಹಾಗೂ ದಮ್ಮಕ ಸ್ಟೀವನ್ ಮಥೋಪೋ ಅವರನ್ನು ನೇಮಿಸಿದ್ದಾರೆ, ಹಾಗೂ ಈ ಇಬ್ಬರು ಇದೇ 2022ರ ಜನೇವರಿ. 01ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. * ಭಾರತೀಯ ಮೂಲದ ನರಂದ್ರನ್ ಜೋಡಿ ಕೊಲ್ಲಪೆನ್ ಅವರು ಈ ಹಿಂದೆ 1982 ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ್ದಾರೆ, ಇದೀಗ ಇವರು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ತಮ್ಮ ಸ್ಥಾನದಿಂದ ಬಡ್ತಿಯನ್ನು ಹೊಂದುವ ಮೂಲಕ ದಕ್ಷಿಣ ಆಫ್ರಿಕಾದ ಅತ್ಯುನ್ನತ ನ್ಯಾಯಾಂಗ ಪೀಠವಾದ ಸಾಂವಿಧಾನಿಕ ನ್ಯಾಯಾಲಯಕ್ಕೆ ನೇಮಕವಾಗಿದ್ದರೆ.