Job Description: * ಪ್ರಸ್ತುತ ಭಾರತೀಯ ಸೇನೆಯು ಆಂತರಿಕ ಸಂವಹನಕ್ಕಾಗಿ ASIGMA (ಆರ್ಮಿ ಸೆಕ್ಯೂರ್ ಇಂಡಿಜಿನಿಯಸ್ ಮೆಸೇಜಿಂಗ್ ಅಪ್ಲಿಕೇಶನ್) ಎಂಬ ಹೊಸ ಸಂದೇಶ ಕಳುಹಿಸುವ ಅಪ್ಲಿಕೇಶನ್ (ಆಪ್) ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ನ್ನು ಸಂಪೂರ್ಣವಾಗಿ ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದೆ, ಎಂದು ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಅಧಿಕಾರಿಗಳ ತಂಡವು ಮಾಹಿತಿ ನೀಡಿದೆ. * ಭಾರತೀಯ ಸೇನೆಯ ಈ ಅಪ್ಲಿಕೇಶನ್ ಸೇನಾ ಸಿಬ್ಬಂದಿಗಳಿಗೆ ಸುರಕ್ಷಿತ ರೀತಿಯಲ್ಲಿ ಸಂದೇಶ(ಮೆಸೇಜ) ಕಳುಹಿಸುವ ಸಂಪರ್ಕವನ್ನು ಕಲ್ಪಿಸುತ್ತದೆ, ಹಾಗೂ ಈ ASIGMA ನ್ನು ಸೇನೆಯ ಒಡೆತನದ ಹಾರ್ಡ್‌ವೇರ್‌ನಲ್ಲಿ ಸೇವೆ (ಫೀಲ್ಡ್) ಮಾಡಲಾಗಿದೆ. * ಈ ಮೊದಲು ಭಾರತೀಯ ಸೇನೆಯಲ್ಲಿ ಆರ್ಮಿ ವೈಡ್ ಏರಿಯಾ ನೆಟ್‌ವರ್ಕ್ (AWAN) ಮೆಸೇಜಿಂಗ್ ಅಪ್ಲಿಕೇಶನ್‌ನ ಸರಿ ಸುಮಾರು 15 ವರ್ಷಗಳಿಂದ ಸೇವೆಯಲ್ಲಿತ್ತು, ಇದೀಗ ಭಾರತೀಯ ಸೇನೆಯು ಈ AWAN ಅಪ್ಲಿಕೇಶನ್ ಬದಲಿಯಾಗಿ ಈ ASIGMA ಎಂಬ ಹೊಸ ಅಪ್ಲಿಕೇಶನ್ ನ್ನು ಸೇನೆಯ ಆಂತರಿಕ ನೆಟ್‌ವರ್ಕ್‌ನಲ್ಲಿ ನಿಯೋಜನೆ ಮಾಡಿದೆ, ಅಷ್ಟೇ ಅಲ್ಲದೇ ಈ ASIGMA ಮೆಸೇಜ ಕಳುಹಿಸುವ ಅಪ್ಲಿಕೇಶನ್ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ, ಹಾಗೂ ಭದ್ರತೆ, ಸಂದೇಶ ಆದ್ಯತೆ ಮತ್ತು ಟ್ರ್ಯಾಕಿಂಗ್, ಡೈನಾಮಿಕ್ ಜಾಗತಿಕ ವಿಳಾಸ ಪುಸ್ತಕ ಮತ್ತು ಸೇನೆಯ ಅವಶ್ಯಕತೆಗಳನ್ನು ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. * ಈ ಅಪ್ಲಿಕೇಶನ್ ಭಾರತೀಯ ಸೇನೆಯ ನೈಜ-ಸಮಯದ ಡೇಟಾ ವರ್ಗಾವಣೆ ಹಾಗೂ ಮೆಸೇಜ ರವಾನಿಸುವ ಅಗತ್ಯತೆಗಳನ್ನು ಪೂರೈಸಲಿದೆ, ಹಾಗೂ ಇದು ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.