Job Description: * ಭಾರತೀಯ ಕ್ರಿಕೆಟಿಗ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರು ಇದೀಗ 23 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದ ಎಲ್ಲ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. * ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯನ್ನು ಹರಭಜನ್ ಸಿಂಗ್ ಅವರು ಪಡೆದಿದ್ದಾರೆ. * ಹರಭಜನ್ ಸಿಂಗ್ ಅವರು 1998 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದಾರೆ. * ಹರ್ಭಜನ್ ಸಿಂಗ್: 1980 ರ ಜುಲೈ. 03 ರಂದು ಜನಿಸಿದ್ದಾರೆ ಇವರು ಒಬ್ಬ ಭಾರತೀಯ ಮಾಜಿ ಕ್ರಿಕೆಟಿಗ ಮತ್ತು ಕ್ರಿಕೆಟ್ ವಿಮರ್ಶಕ, ಇವರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ 1998 ಮತ್ತು 2016 ರ ನಡುವೆ ಆಡಿದ್ದರು, ಹಾಗೂ ಇವರು 2012-13 ರ ರಣಜಿ ಟ್ರೋಫಿ ಋತುವಿಗೆ ಪಂಜಾಬ್‌ಗೆ ನಾಯಕರಾಗಿ ಆಟವಾಡಿದ್ದರು, ಹಾಗೂ ಇವರ ನಾಯಕತ್ವದಲ್ಲಿ ಮುಂಬೈ 2011 ರ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಯಲ್ಲಿ ಜಯಿಸಿತ್ತು. * ಹರ್ಭಜನ್ ಸಿಂಗ್ ಅವರು 1998 ರ ಆರಂಭದಲ್ಲಿ ಟೆಸ್ಟ್ ಹಾಗೂ ಏಕದಿನ ಅಂತರಾಷ್ಟ್ರೀಯ (ODI) ಚೊಚ್ಚಲ ಪಂದ್ಯಗಳನ್ನು ಆಡಿದ್ದರು, ಹಾಗೂ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ಇವರಾಗಿದ್ದಾರೆ. * ಹರ್ಭಜನ್ ಸಿಂಗ್ ಅವರು 2008 ರ ಪ್ರಾರಂಭದಲ್ಲಿ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಜನಾಂಗೀಯವಾಗಿ ನಿಂದಿಸುವುದಕ್ಕಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನಿಂದ ಇವರಿಗೆ ನಿಷೇಧವನ್ನು ನೀಡಲಾಯಿತು., ಹಾಗೂ ಮೇಲ್ಮನವಿಯ ಮೇರೆಗೆ ನಿಷೇಧವನ್ನು ಹಿಂಪಡೆಯಲಾಯಿತು, ಆದರೆ 2008 ರ ಏಪ್ರಿಲ್‌'ನಲ್ಲಿ ಇವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನಿಂದ ನಿಷೇಧಿಸಲಾಯಿತು, ಮತ್ತೇ 2011 ಕ್ರಿಕೆಟ್ ವಿಶ್ವಕಪ್‌ನ ವಿಶ್ವಕಪ್ ವಿಜೇತ ತಂಡದಲ್ಲಿನ ಆಟಗಾರರಾಗಿದ್ದಾರೆ. * 2009 ರಲ್ಲಿ ಹರ್ಭಜನ್ ಸಿಂಗ್ ಅವರಿಗೆ ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವನ್ನು ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು, ಇದೀಗ ಇವರು 2021 ರ ಡಿಸೆಂಬರ್'ನಲ್ಲಿ ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಹೊಂದಿದ್ದಾರೆ.