Job Description: * ಪ್ರಸ್ತುತ ಕೇಂದ್ರ ಕಾರ್ಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಟ್ವಿನ್ಸ್ CSC ಡಿಜಿಟಲ್ ಸೇವಾ ಕೇಂದ್ರದಿಂದ ತೃತೀಯ ಲಿಂಗಿಗಳಿಗೆ ಇ ಶ್ರಮ್ ಕಾರ್ಡ್ ನೊಂದಣಿ ಮಾಡಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ 'ಇ -ಶ್ರಮ್' ಕಾರ್ಡ್ ವಿತರಣೆ ಮಾಡಲಾಗಿದೆ. * ಈ 'ಇ ಶ್ರಮ್ ಕಾರ್ಡ್ ಗಳನ್ನೂ ಮೈಸೂರಿನ ಸರಸ್ವತಿಪುರಂನಲ್ಲಿನ ತೃತೀಯ ಲಿಂಗಿಗಳ ಕಚೇರಿಯಲ್ಲಿ ತೃತೀಯ ಲಿಂಗಿಗಳ ಸಂಘದ ಮುಖ್ಯಸ್ಥರಾದ ಪ್ರಣತಿ ಪ್ರಕಾಶ್ ಅವರ ನೇತೃತ್ವದಲ್ಲಿ ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಕೊಂಡಿರುವ 50 ಕ್ಕೂ ಅಧಿಕ ಜನ ತೃತೀಯ ಲಿಂಗಿಗಳಿಗೆ ವಿತರಣೆ ಮಾಡಿದ್ದಾರೆ, ಇದೀಗ ಅಸಂಘಟಿತ ಕಾರ್ಮಿಕ ಅಭಿವೃದ್ಧಿ ಕಲ್ಯಾಣ ಯೋಜನೆ ಅಡಿಯಲ್ಲಿ ದೇಶಾದ್ಯಂತ 'ಇ- ಶ್ರಮ್ ಕಾರ್ಡ್' ವಿತರಣೆ ಮಾಡಲಾಗುತ್ತಿದೆ, ಪ್ರಸ್ತುತ ಕಟ್ಟಡ ನಿರ್ಮಾಣ, ಕೃಷಿ ಮೀನುಗಾರರು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‌ಗಳು, ವ್ಯಾಪಾರಿಗಳು ಸೇರಿ ಒಟ್ಟು 150 ಕ್ಕೂ ಹೆಚ್ಚು ವರ್ಗಗಳ ಕಾರ್ಮಿಕರು ನೋಂದಣಿಯಾಗಲು ಈ ಪೋರ್ಟಲ್'ನಲ್ಲಿ ಅವಕಾಶ ಕಲ್ಪಿಸಲಾಗಿದೆ. * ಕೇಂದ್ರ ಸರ್ಕಾರವು eSHRAM ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಆಧಾರ್ ಹೊಂದಿರುವ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ಡೇಟಾಬೇಸ್ ಆಗಿರುತ್ತದೆ. ನೋಂದಾಯಿಸಿದ ನಂತರ, ಅವನು/ಅವಳು PMSBY ಅಡಿಯಲ್ಲಿ 2 ಲಕ್ಷಗಳ ಅಪಘಾತ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಹಾಗೂ ತುರ್ತು ಮತ್ತು ರಾಷ್ಟ್ರೀಯ ಸಾಂಕ್ರಾಮಿಕದಂತಹ ಸಂದರ್ಭಗಳಲ್ಲಿ, ಈ ಡೇಟಾಬೇಸ್'ನ್ನು ಸಹಾಯಕ್ಕಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇ- ಶ್ರಮಿಕ ಕಾರ್ಡ್ ನ್ನು ಅಸಂಘಟಿತ ಕಾರ್ಮಿಕ ಅಭಿವೃದ್ಧಿ ಕಲ್ಯಾಣ ಯೋಜನೆಯಡಿ ಜಾರಿಮಾಡಲಾಗುತ್ತಿದೆ, ಈ ಹಿನ್ನಲೆಯಿಂದಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಮೈಸೂರಿನಲ್ಲಿ ತೃತೀಯ ಲಿಂಗಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಗಿದೆ.