Job Description: * ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ತನ್ನ ಪ್ರಾಣ ಕಳೆದುಕೊಂಡಿರುವ ಫೋಟೊಜರ್ನಲಿಸ್ಟ್ ದಾನಿಶ್‌ ಸಿದ್ದೀಕಿ ಅವರಿಗೆ ಇದೀಗ ಮುಂಬೈ ಪ್ರೆಸ್ ಕ್ಲಬ್ (MPC) 2020 ನೇ ಸಾಲಿನ 'ವರ್ಷದ ಪತ್ರಕರ್ತ' ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ. * ದಾನಿಶ್‌ ಸಿದ್ದೀಕಿ ಅವರು ರಾಯ್ಟರ್ಸ್‌ ನ ಮುಖ್ಯ ಫೋಟೊ ಜರ್ನಲಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದರು, ಅಷ್ಟೇ ಅಲ್ಲದೇ ಇವರು ರೋಹಿಂಗ್ಯಾಗಳು ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳು, ಮತ್ತು ಕೋವಿಡ್-19 ಇದರ ಜೊತೆಯಲ್ಲಿ ಅಫ್ಘಾನಿಸ್ತಾನದಲ್ಲಿನ ನಾಗರಿಕ ಯುದ್ಧದಲ್ಲಿನ ತನಿಖಾ ಹಾಗೂ ಪ್ರಭಾವಶಾಲಿ ಚಿತ್ರಗಳಿಗಾಗಿ ಇವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. * ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ಇದೇ ಡಿಸೆಂಬರ್. 29 ರಂದು ಜರುಗುವ ವರ್ಚುವಲ್ ಕಾರ್ಯಕ್ರಮದಲ್ಲಿ 'ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆಗಾಗಿ' ವಾರ್ಷಿಕ ರೆಡ್‌ಲಿಂಕ್ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ, ಈ ಸಭೆಯಲ್ಲಿ ಜೀವಮಾನ ಸಾಧನೆಮಾಡಿರುವ 12 ವಿಭಾಗಗಳಲ್ಲಿ 24 ಪತ್ರಕರ್ತರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. * ಈ ಕಾರ್ಯಕ್ರಮವು ಮುಂಬೈ ಪ್ರೆಸ್ ಕ್ಲಬ್ (MPC)ನ 10 ನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾಗಿದೆ.