Job Description: * ಭಾರತೀಯ ನೌಕಾ ಪಡೆಯ INS ಖುಕ್ರಿಗೆ ವಿದಾಯ, ಈ ನೌಕೆಯು 32 ವರ್ಷಗಳ ಕಾಲ ಅಂದರೆ 1989 ರಿಂದ ಸೇವೆ ಸಲ್ಲಿಸುತ್ತಿದ್ದ INS ಖುಕ್ರಿ (ಪಿ49)ನ್ನು ಇದೇ ಡಿಸೆಂಬರ್. 23 ರಂದು ಮುಂಬಯಿಯಲ್ಲಿ ಸೇವೆಯಿಂದ ಹಿಂಪಡೆದುಕೊಳ್ಳಲಾಗಿದೆ. * ಈ ನೌಕೆಯನ್ನು ಮುಂಬೈನಲ್ಲಿರುವ ಮಡ್‌ಗಾಂವ್‌ ಡಾಕ್‌ ಶಿಪ್‌ ಬಿಲ್ಡರ್'ನಲ್ಲಿ 1986 ರಲ್ಲಿ ನಿರ್ಮಾಣ ಮಾಡಿ ಈ ನೌಕೆಯನ್ನು 1989 ರಲ್ಲಿ ಕಡಲತೀರದಲ್ಲಿ ಸೇವೆಗೆ ನಿಯೋಜನೆ ಮಾಡಲಾಗಿತ್ತು. * ಸ್ವದೇಶೀಯವಾಗಿ ನಿರ್ಮಿಸಲಾಗಿದ್ದ INS ಖುಕ್ರಿ ಇದು ಭಾರತೀಯ ನೌಕಾಪಡೆಯ ಟೈಪ್ 14 (ಬ್ಲ್ಯಾಕ್‌ವುಡ್-ಕ್ಲಾಸ್) ಯುದ್ಧನೌಕೆಯಾಗಿದೆ. ಈ INS ಖುಕ್ರಿ ನೌಕೆಯು 1971 ರ ಡಿಸೆಂಬರ್. 09 ರಂದು ಪಾಕ್‌-ಭಾರತ ಯುದ್ಧದ ಸಮಯದಲ್ಲಿ ಪಾಕಿಸ್ತಾನ ನೌಕೆ ಪಡೆಯ ದಾಳಿಗೆ ಸಿಲುಕಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿತ್ತು, ಈ ನೌಕೆಯ ಜೊತೆಗೆ ಅದರ ಕಮಾಂಡರ್‌ ಮಹೇಂದ್ರ ನಾಥ್‌ ಮುಲ್ಲಾ ಮುಳುಗಿದ್ದರು, ಇವರ ಸವಿನೆನಪಿಗಾಗಿ ಈ ನೌಕೆಗೆ ಖುಕ್ರಿ ಎಂದು ಹೆಸರಿಟ್ಟಿದ್ದಾರೆ, 2 ನೇ ವಿಶ್ವ ಯುದ್ಧದ ನಂತರ ಜಲಾಂತರ್ಗಾಮಿಯಿಂದ ಮುಳುಗಿದ ಮೊದಲ ಯುದ್ಧನೌಕೆ ಇದಾಗಿದೆ, ಹಾಗೂ ಇದು ಸ್ವಾತಂತ್ರ್ಯ ಸಿಕ್ಕ ನಂತರದ ಭಾರತೀಯ ನೌಕಾಪಡೆಯ ಏಕೈಕ ಯುದ್ಧನೌಕೆ ಇದಾಗಿತ್ತು. * 1971 ರ ಡಿಸೆಂಬರ್. 03 ರಂದು ಯುದ್ಧದ ಪ್ರಾರಂಭದ ನಂತರ, ಭಾರತೀಯ ನೌಕಾ ರೇಡಿಯೋ ಪತ್ತೆ ಸಾಧನವು ದಿಯು ಬಂದರಿನ ನೈಋತ್ಯದಲ್ಲಿ ಸುಮಾರು 35 ಮೈಲಿಗಳು ಸುಪ್ತವಾಗಿರುವ ಜಲಾಂತರ್ಗಾಮಿ ನೌಕೆಯನ್ನು ಪತ್ತೆಹಚ್ಚಿ ಜಲಾಂತರ್ಗಾಮಿ ನೌಕೆಯನ್ನು ನಾಶಮಾಡಲು ಪಶ್ಚಿಮ ನೌಕಾಪಡೆಯ 14 ನೇ ಫ್ರಿಗೇಟ್ ಸ್ಕ್ವಾಡ್ರನ್'ನ್ನು ಕಳುಹಿಸಲಾಯಿತು.