Job Description: * ಪ್ರತಿ ವರ್ಷ ಡಿಸೆಂಬರ್ 23 ರಿಂದ ಡಿಸೆಂಬರ್ 25 ರವರೆಗೆ ಗುಜರಾತಿನ ಸಿಖ್ ಸಂಘವು ಗುರುದ್ವಾರ ಲಖ್‌ಪತ್‌ ಸಾಹಿಬ್‌ನಲ್ಲಿ ಗುರುನಾನಕ್ ದೇವ್ ಜೀ ಅವರ ಗುರುಪುರಬ್‌ ಅನ್ನು ಆಚರಿಸುತ್ತದೆ. * ಗುರುನಾನಕ್ ದೇವ್ ಅವರು ತಮ್ಮ ಪ್ರಯಾಣದ ಸಮಯದಲ್ಲಿ ಲಖ್‌ಪತ್‌ನಲ್ಲಿ ತಂಗಿದ್ದರು. ಗುರುದ್ವಾರ ಲಖ್‌ಪತ್‌ ಸಾಹಿಬ್‌ನಲ್ಲಿ ಮರದ ಪಾದರಕ್ಷೆಗಳು ಮತ್ತು ಪಾಲ್ಖಿ (ತೊಟ್ಟಿಲು), ಗುರುಮುಖಿಯ ಹಸ್ತಪ್ರತಿಗಳು ಮತ್ತು ಲಿಪಿಗಳು ಸೇರಿದಂತೆ ಗುರುನಾನಕ್‌ ಅವರಿಗೆ ಸೇರಿದ ವಸ್ತುಗಳನ್ನು ಕಾಣಬಹುದು. * 2001 ರ ಭೂಕಂಪದ ಸಮಯದಲ್ಲಿ ಗುರುದ್ವಾರಕ್ಕೆ ಹಾನಿಯಾಗಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಶ್ರೀ ನರೇಂದ್ರ ಮೋದಿ ಅವರು ಈ ಗುರುದ್ವಾರದ ದುರಸ್ತಿಗಾಗಿ ತುರ್ತು ಪ್ರಯತ್ನಗಳನ್ನು ಮಾಡಿದ್ದರು.