Job Description: * ಪ್ರಸ್ತುತ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು 2021 ರ ಡಿಸೆಂಬರ್. 17 ರಂದು ಲೋಕಸಭೆಯಲ್ಲಿ 'ಡೋಪಿಂಗ್ ವಿರೋಧಿ ಮಸೂದೆ'ಯನ್ನು ಮಂಡಿಸಿದ್ದಾರೆ. * ಈ ಮಸೂದೆಯು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (NADA) ಕಾರ್ಯನಿರ್ವಹಣೆಗೆ ಶಾಸನಬದ್ಧ ಸ್ಥಿತಿಯನ್ನು ನೀಡಲಾಗುವದು ಎಂದಿದ್ದಾರೆ. ಅಷ್ಟೇ ಅಲ್ಲದೇ NADA ಗೆ ಭಾರತದಲ್ಲಿ ಡ್ರಗ್ ದುರುಪಯೋಗವನ್ನು ಎದುರಿಸಲು, ಹಾಗೂ ದಾಳಿಗಳನ್ನು ನಡೆಸುವದರ ಜೊತೆಗೆ ಕ್ರಮಗಳನ್ನು ಬಲಪಡಿಸಲು ಬಿಲ್ ಅಧಿಕಾರ ನೀಡುತ್ತದೆ, ಹಾಗೂ ಕಾರ್ಯಾಚರಣೆಯ ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬೋರೇಟರಿ (NDTL) ಹಾಗೂ ಇತರ ಡೋಪ್ ಪರೀಕ್ಷಾ ಪ್ರಯೋಗಾಲಯಗಳಿಗೆ ಶಾಸನಬದ್ಧ ಚೌಕಟ್ಟನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * NADA ಗೆ ಈ ಮಸೂದೆಯು ತನಿಖೆಯ ಅಧಿಕಾರ, ತಪಾಸಣೆಯ ಅಧಿಕಾರಗಳು, ಮಾದರಿ ಸಂಗ್ರಹಣೆ ಮತ್ತು ಹಂಚಿಕೆ ಮತ್ತು ಮಾಹಿತಿಯ ಮುಕ್ತ ಹರಿವು, ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಳಿಗೆ ನಿರ್ಬಂಧಗಳನ್ನು ಹೇರುವುದು ಹಾಗೂ ಶಿಸ್ತಿನ ಕಾರ್ಯವಿಧಾನಗಳನ್ನು ನೀಡಲಾಗುತ್ತದೆ ಎಂದಿದ್ದಾರೆ, ಈ ಮಸೂದೆಯ 19 ನೇ ವಿಧಿಯು ಯಾವುದೇ ಡೋಪಿಂಗ್-ವಿರೋಧಿ ನಿಯಮ ಉಲ್ಲಂಘನೆಯಾಗಿದೆಯೇ ಎಂದು ತಿಳಿಯಲು NADA ಯಿಂದ ಅಧಿಕಾರ ಪಡೆದ ಯಾವುದೇ ವ್ಯಕ್ತಿಯ 'ಪ್ರವೇಶ, ಹುಡುಕಾಟ ಮತ್ತು ವಶಪಡಿಸಿಕೊಳ್ಳುವ' ಅಧಿಕಾರವನ್ನು ಕಲ್ಪಿಸಲಾಗುತ್ತದೆ, ಹಾಗೂ ಕ್ರಿಮಿನಲ್ ಪ್ರಕ್ರಿಯೆಯು 1973 ರ ನಿಬಂಧನೆಗಳಿಗೆ ಅನುಗುಣವಾಗಿರಬೇಕು ಎಂದಿದ್ದಾರೆ. * ಈ ಮೊದಲು NADA ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರ ವಿರಲಿಲ್ಲ ಮತ್ತು NADA ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯು ದಾಳಿಯನ್ನು ನಡೆಸುವ ಅಧಿಕಾರವನ್ನು ಹೊಂದಿತ್ತು. * ಪ್ರಸ್ತುತ ತಾಂತ್ರಿಕ ಅವಶ್ಯಕತೆಗಳನ್ನು ನೀಡಲು ವಿಫಲವಾದ ಹಿನ್ನಲೆಯಿಂದಾಗಿ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (WADA) ಸದ್ಯ NDTL ನ್ನು ಅಮಾನತುಗೊಳಿಸಿದೆ. * ಈ ಹಿಂದೆ 2005 ರಲ್ಲಿ ಭಾರತವು ಕ್ರೀಡೆಯಲ್ಲಿ ಡೋಪಿಂಗ್ ವಿರುದ್ಧ 'ಯುನೈಟೆಡ್ ನೇಷನ್ಸ್ ಎಜುಕೇಶನಲ್, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಂತರರಾಷ್ಟ್ರೀಯ ಸಮಾವೇಶ' ಕ್ಕೆ ಒಪ್ಪಿಕೊಂಡು ಸಹಿ ಹಾಕಿತ್ತು, ಹಾಗೂ ಇದನ್ನು 2007 ರ ನವೆಂಬರ್'ನಲ್ಲಿ ಅನುಮೋದಿಸಲಾಗಿದೆ, ಇದಾದ ಬಳಿಕ ಭಾರತ ಸರ್ಕಾರವು 2008 ಮತ್ತು 2009 ರಲ್ಲಿ ಕ್ರಮವಾಗಿ NDTL ಹಾಗೂ NADA ವನ್ನು ಸ್ಥಾಪನೆ ಮಾಡಿದೆ. * ಸದ್ಯ ಈ ಮಸೂದೆಯು ಕೇಂದ್ರ ಸರ್ಕಾರ ನೇಮಕ ಮಾಡುವ ಅಧ್ಯಕ್ಷರು ಹಾಗೂ ಇತರ ಇಬ್ಬರು ಸದಸ್ಯರನ್ನು ಹೊಂದಿರುವ ಕ್ರೀಡೆಯಲ್ಲಿ ಡೋಪಿಂಗ್ ವಿರೋಧಿ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸುವ ಪ್ರಯತ್ನದಲ್ಲಿದೆ ಎಂದು ತಿಳಿಸಿದ್ದಾರೆ.