Job Description: * ಇದೀಗ ಯುನೈಟೆಡ್‌ ಸ್ಟೇಟ್ಸ್‌ (ಯುಎಸ್‌) ಫೈಜರ್‌ನ ಕೋವಿಡ್‌-19 ಮಾತ್ರೆಗಳನ್ನು ಅಧಿಕೃತಗೊಳಿಸಿದೆ, ಸದ್ಯ ಅಧಿಕೃತಗೊಂಡಿರುವ ಈ ಫೈಜರ್‌ನ ಕೋವಿಡ್‌-19 ಮಾತ್ರೆಗಳನ್ನು ಸುಮಾರು 12 ವರ್ಷ ಹಾಗೂ ಅದಕ್ಕಿಂತ ಮೆಲ್ಪಟ್ಟ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಜನಗಳಿಗೆ ನೀಡುವಂತೆ US ಸೂಚಿಸಿದೆ. * ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಎರಡು ವಿಧದ ಟ್ಯಾಬ್ಲೆಟ್‌ಗಳನ್ನು ಹೊಂದಿರುವ ಪ್ಯಾಕ್ಸ್‌ಲೋವಿಡ್‌ ನ ತುರ್ತಾಗಿ ಬಳಸಲು ಅನುಮೋದನೆಯನ್ನು ನೀಡಿದೆ, ಸದ್ಯ ಈ ಮಾತ್ರೆಗೆ ವೈದ್ಯಕೀಯ ಪ್ರಯೋಗವನ್ನು ಮಾಡಲಾಗಿದೆ, ಈ ಮಾತ್ರೆ ಸೇವನೆ ಮಾಡುವದರಿಂದ ಜನರು ಆಸ್ಪತ್ರೆಗೆ ಸೇರುವದನ್ನು ಹಾಗೂ ಸಾವಿನ ಅಪಾಯವನ್ನು ಶೇ. 88 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದಿದೆ, ಈ ಕಾರಣದಿಂದಾಗಿ US ಈ ಮಾತ್ರೆಯನ್ನು ಇದೀಗ ಅಧಿಕೃತಗೊಳಿಸಿದೆ. * ಇದೀಗ ಫೈಜರ್‌ ಮಾತ್ರೆಗಳನ್ನು ತ್ವರಿತವಾಗಿ ಉತ್ಪಾದನೆ ಮಾಡಲು ಸಾಧ್ಯವಾಗುವ ಕಾನೂನನ್ನು ಶೀಘ್ರ ಜಾರಿಗೆ ತರಲಾಗುತ್ತದೆ ಎಂದು ಅಮೇರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ಹಾಗೂ ಈ ಮಾತ್ರೆಗಳ 10 ಮಿಲಿಯನ್ ಕೋರ್ಸ್‌ಗಳನ್ನು ಖರೀದಿ ಮಾಡಲು ಸುಮಾರು 5.3 ಬಿಲಿಯನ್‌ ಯುಎಸ್‌ ಡಾಲರ್‌ ವೆಚ್ಚ ತಗುಲಲಿದೆ. ಇದರ ಅಡಿಯಲ್ಲಿ ಮೊದಲ 2,65,000 ಮಾತ್ರೆಗಳನ್ನು ಜನೇವರಿ ತಿಂಗಳಿನಲ್ಲಿ ಜನರಿಗೆ ವಿತರಣೆ ಮಾಡಲಾಗುತ್ತದೆ, ಇನ್ನುಳಿದ ಮಾತ್ರೆಗಳನ್ನು ಬೇಸಿಗೆಯ ಅಂತ್ಯದ ಸಮಯಕ್ಕೆ ವಿತರಣೆ ಮಾಡಲಾಗುತ್ತದೆ ಎಂದು ಶ್ವೇತಭವನದ ಕೋವಿಡ್ ನಿರ್ವಾಹಕ ಜೆಫ್ ಜಿಯೆಂಟ್ಸ್ ಅವರು ಸುದ್ದಿವಾನಿಗೆ ಮಾಹಿತಿ ನೀಡಿದ್ದಾರೆ. * US ನಲ್ಲಿ ಪ್ರಸ್ತುತ ಓಮಿಕ್ರಾನ್‌ ಪ್ರರಕಣಗಳು ಏರಿಕೆಯಾಗುತ್ತಿವೆ, ಇದೀಗ ಇಲ್ಲಿ ಪ್ರತಿದಿನ ಸುಮಾರು 1,50,000 ಅಮೇರಿಕ ಪ್ರಜೆಗಳು ಕೋವಿಡ್-19 ಸೋಂಕಿಗೆ ಒಳಪಡುತ್ತಿದ್ದಾರೆ, ಇವರಲ್ಲಿ 7,800 ಮಂದಿ ಆಸ್ಪತ್ರೆಗೆ ಸೇರಿದರೆ ಇನ್ನುಳಿದ 1,200 ಜನರು ಮೃತಪಡುತ್ತಿದ್ದಾರೆ, ಸದ್ಯ US ನ ಎಲ್ಲಾ ಪ್ರದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳೇ ಹೆಚ್ಚು ವರದಿಯಾಗುತ್ತಿವೆ ಎಂದು ತಿಳಿಸಿದ್ದಾರೆ.