Job Description: * ಇದೀಗ ಭಾರತವು ನೆರೆಯ ರಾಷ್ಟ್ರವಾಗಿರುವ ಮ್ಯಾನ್ಮಾರ್‌ ರಾಷ್ಟ್ರಕ್ಕೆ '10' ಲಕ್ಷ ಡೋಸ್‌ ಕೋವಿಡ್‌-19 ಲಸಿಕೆ, ಹಾಗೂ '10' ಸಾವಿರ ಟನ್‌ ಅಕ್ಕಿ ಹಾಗೂ ಗೋಧಿಯನ್ನು ಕಳುಹಿಸಿಕೊಟ್ಟಿದೆ, ಈ ಮಾಹಿತಿಯನ್ನು ಮ್ಯಾನ್ಮಾರ್‌ಗೆ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಅವರು ಹೇಳಿದ್ದಾರೆ, ಅಷ್ಟೇ ಅಲ್ಲದೇ ಭಾರತವು ಮಾನವೀಯ ನೆರವನ್ನು ನೀಡುವ ಗುಣವನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಫೆಬ್ರುವರಿ. 1 ರಂದು ನಡೆದಿರುವ ಸೇನಾ ದಂಗೆಯಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಚುನಾಯಿತ ಸರ್ಕಾರದ ಅಧ್ಯಕ್ಷೆಯಾಗಿರುವ ಆಂಗ್‌ ಸಾನ್‌ ಸೂಕಿ ಅವರನ್ನು ಬಂಧಿಸಿದ, ಈ ಘಟನೆಗಳು ನಡೆದ ಬಳಿಕ ಭಾರತ ಇದೇ ಮೊದಲ ಬಾರಿ ಮ್ಯಾನ್ಮಾರ್‌ಗೆ ಪ್ರವಾಸವನ್ನು ಹಮ್ಮಿಕೊಂಡಿದೆ, ಅದೇ ಸಂಧರ್ಭದಲ್ಲಿ ಮ್ಯಾನ್ಮಾರ್‌ನ ರೆಡ್‌ಕ್ರಾಸ್‌ ಸೊಸೈಟಿಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ ಅವರು ಲಸಿಕೆಗಳನ್ನು ನೀಡಿದ್ದಾರೆ. * ಪ್ರಸ್ತುತ ಮ್ಯಾನ್ಮಾರ್‌ ರಾಷ್ಟ್ರವು ಭಾರತದೊಂದಿಗೆ ದೀರ್ಘವಾದ ಗಡಿಯನ್ನು ಹಂಚಿಕೊಂಡಿದೆ, ಹಾಗೂ ಮಯನ್ಮಾರ್'ನ ಜನರಿಗೆ ಮಾನವೀಯ ನೆರವು ನೀಡುವುದನ್ನು ಭಾರತ ಮುಂದುವರಿಸುತ್ತದೆ, ಸದ್ಯ ಮ್ಯಾನ್ಮಾರ್‌ ದೇಶವು ಕೋವಿಡ್‌-19 ಸಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದೀಗ ಭಾರತವು ತನ್ನ ದೇಶದಲ್ಲಿ ತಯಾರಿಸಿದ 10 ಲಕ್ಷ ಡೋಸ್‌ ಲಸಿಕೆಗಳನ್ನು ಮಯನ್ಮಾರ್ ನ ರೆಡ್‌ಕ್ರಾಸ್‌ ಸೊಸೈಟಿಗೆ ನೇರವಾಗಿ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. * ಮ್ಯಾನ್ಮಾರ್ (ಈ ಹಿಂದಿನ ಬರ್ಮಾ): ಭಾರತ, ಬಾಂಗ್ಲಾದೇಶ, ಚೀನಾ, ಲಾವೋಸ್ ಮತ್ತು ಥೈಲ್ಯಾಂಡ್‌ನ ಗಡಿಯಲ್ಲಿರುವ 100 ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳ ಆಗ್ನೇಯ ಏಷ್ಯಾದ ದೇಶವಾಗಿದೆ. ದೇಶದ ಅತಿದೊಡ್ಡ ನಗರವಾದ ಯಾಂಗೂನ್ ನಗರವಾಗಿದೆ, ಹಾಗೂ ಈ ರಾಷ್ಟ್ರವು 6 ನೇ ಶತಮಾನದ ಬೌದ್ಧ ಅವಶೇಷಗಳನ್ನು ಒಳಗೊಂಡಿದೆ. * ನೈಪಿಡಾವ್ ಇದು ಮ್ಯಾನ್ಮಾರ್'ನ ರಾಜಧಾನಿಯಾಗಿದೆ, ಮ್ಯಾನ್ಮಾರ್ ಕ್ಯಾಟ್ ಎಂಬುವದು ಅಲ್ಲಿನ ಕರೆನ್ಸಿಯಾಗಿದೆ, ಸದ್ಯ ಈ ದೇಶವು 5.44 ಕೋಟಿ ಜನಸಂಖ್ಯೆ ಹೊಂದಿದೆ (2020)ರ ವೇಳೆಗೆ.