Job Description: * ಪ್ರಸ್ತುತ ಭಾರತದ ಗೃಹ ಸಚಿವಾಲಯದ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ.ಬಿ.ಎನ್.ಶೆಟ್ಟಿ ಅವರು ಸ್ಕಾಚ್ ಗ್ರೂಪ್ ಮತ್ತು CAII -CEO'S ಅಸೋಸಿಯೇಷನ್ ಇನ್‌ಕ್ಯೂಸಿವ್‌ ಇಂಡಿಯಾ ಸಂಸ್ಥೆಯ ಪ್ರತಿಷ್ಠಿತ 'ಸ್ಕಾಚ್ ಸಾರ್ವಜನಿಕ ಸೇವಾ ಪ್ರಶಸ್ತಿ'ಗೆ (SKOCH PUBLIC SERVICE AWARD) ಭಾಜನರಾಗಿದ್ದಾರೆ, ಉಡುಪಿ ಜಿಲ್ಲೆಯ ಡಾ.ಬಿ.ಎನ್.ಶೆಟ್ಟಿ ಅವರಿಗೆ ದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. * ಭಾರತದ ಪ್ರಜೆಗಳಿಗಾಗಿ ಗಣನೀಯ ಸೇವೆ ಸಲ್ಲಿಸುವವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ, ಪಾಸ್‌ಪೋರ್ಟ್, ವೀಸಾ ಕ್ಷೇತ್ರದ ಅಮೋಘ ಸೇವೆಗೆ ಈ ಗೌರವ ಪ್ರಶಸ್ತಿಯನ್ನು ಡಾ.ಬಿ.ಎನ್‌.ಶೆಟ್ಟಿ ಅವರಿಗೆ ನೀಡಲಾಗಿದೆ. * ಈ ಮೊದಲು ಡಾ.ಬಿ.ಎನ್.ಶೆಟ್ಟಿ ಅವರು ಭಾರತ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ, ಪಾಸ್‌ಪೋರ್ಟ್, ವೀಸಾ ಹಾಗೂ ಭಾರತದ ಸಾಗರೋತ್ತರ ಪೌರತ್ವವನ್ನು ಸುವ್ಯವಸ್ಥಿತಗೊಳಿಸಿರುವದು ಹಾಗೂ ಅನೇಕ ನಾಗರಿಕರ ಕೇಂದ್ರಿತ ಇ-ಆಡಳಿತ ಯೋಜನೆಗಳನ್ನು ಜಾರಿಗೆ ತಂದಿರುವದಕ್ಕಾಗಿ ಇವರಿಗೆ ಈ ಪ್ರಶಸ್ತಿ ಲಭಿಸಿದೆ.